200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಖುಷ್ಬೂ ಈಗ ಸಿಕ್ಕಾಪಟ್ಟೆ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮತ್ತೊಂದು ಅವತಾರವನ್ನು ತಾವೇ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡು, ತಮ್ಮನ್ನು ತಾವೇ ಮೆಚ್ಚಿಕೊಂಡಿದ್ದಾರೆ. 

ಅಸಲಿ ಹೆಸರಿನ ಬಗ್ಗೆ ಬಿಸಿಬಿಸಿ ಚರ್ಚೆ ; ಮತ್ತೆ ಸುದ್ದಿಯಲ್ಲಿ ನಟಿ ಖುಷ್ಬು

ಇತ್ತೀಚಿನ ದಿನಗಳಲ್ಲಿ ವೈರಲ್‌ ಆಗುತ್ತಿರುವ ಫೇಸ್‌ ಆಪ್‌ ತಮ್ಮ ಮುಖವನ್ನು ಇನ್ನೊಂದು ರೀತಿಯಲ್ಲಿ ತೋರಿಸುತ್ತದೆ. ಹುಡುಗನಾಗಿದ್ದರೆ ಹುಡುಗಿಯಾಗಿ, ಹುಡುಗಿಯಾಗಿದ್ದರೆ ಹುಡುಗನಾಗಿ. ಇನ್ನು ತಾತ-ಅಜಿ ಆಗಿದ್ದಾಗಲೂ ಹೇಗಿರುತ್ತೇವೆ ಎಂದು ನೋಡಿಕೊಳ್ಳಬಹುದು. ಈ ಮ್ಯಾಜಿಕ್‌ ಲುಕ್ಕನ್ನು ಅನೇಕ ಸೆಲೆಬ್ರಿಟಿಗಳು ಟ್ರೈ ಮಾಡಿದ್ದಾರೆ.

 

'ಪರ್ವಾಗಿಲ್ಲ ನಾನು ಪುರುಷನಾಗಿದ್ದರೂ ಇಷ್ಟೊಂದು ಸುಂದರವಾಗಿರುವೆ' ಎಂದು ಬರೆದುಕೊಂಡಿದ್ದಾರೆ.

ವೇಟ್‌ ಲಾಕ್:
ಲಾಕ್‌ಡೌನ್‌ ಸಮಯದಲ್ಲಿ ಎಲ್ಲರೂ ವಿಭಿನ್ನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ, ಇತ್ತ ನಟಿ ಖುಷ್ಬೂ ತೂಕ ಇಳಿಸಿಕೊಳ್ಳುವುದರಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ಪ್ರತಿ ದಿನವೂ ತಮ್ಮ ವರ್ಕೌಟ್‌ ವಿಡಿಯೋ ಮತ್ತು ಫೋಟೋವನ್ನು ಶೇರ್ ಮಾಡುತ್ತಲೇ ಇರುತ್ತಾರೆ. 

ಟಾಯ್ಲೆಟ್‌ ಕ್ಲೀನಿಂಗ್, ಬಟ್ಟೆ ಒಗೆಯುವುದು, ಬಿಡುವಿನ ಸಮಯದಲ್ಲಿ ಯೋಗ ಮಾಡುವುದು ಹೇಗೆ ಸದಾ ಒಂದಾದ ಮೇಲೊಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರಣವೇ ತೂಕ ಇಳಿಸುವುದಕ್ಕೆ ಸುಲಭವಾಗಿದ್ದು ಎಂದು ಹೇಳಿಕೊಂಡಿದ್ದಾರೆ.

ಆ್ಯಪ್ ಬಳಸಿ ಎಡಿಟ್ ಮಾಡಿಕೊಂಡ ಫೋಟೋದಲ್ಲಿ ಮೂಗು ಬೊಟ್ಟು ಇಲ್ಲದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಲ್ಲವೇ?

ಇತ್ತೀಚೆಗೆ ಬಹುತೇಕ ಭಾರತೀಯ ಕ್ರಿಕೆಟಿಗರು ಈ ಆ್ಯಪ್ ಬಳಸಿ, ತಾವು ಹುಡುಗಿಯಾಗಿದ್ದರೆ ಹೇಗಿರುತ್ತಿತ್ತು ಎಂಬುದನ್ನು ರಿವೀಲ್ ಮಾಡಿದ್ದರು.