Asianet Suvarna News Asianet Suvarna News

Kangana Ranaut; ಮಥುರಾದ ಬಂಕೆ ಬಿಹಾರಿ ದೇವಾಸ್ಥಾನಕ್ಕೆ ಭೇಟಿ ನೀಡಿದ 'ಕ್ವೀನ್ ನಟಿ'; ಫೋಟೋ ವೈರಲ್

ಬಾಲಿವುಡ್ ನಟಿ ಕಂಗನಾ 
ಮಥುರಾ ವೃಂದಾವನ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದ ಜೊತೆ ದೇವರ ದರ್ಶನ ಮಾಡಿರುವ ಕ್ವೀನ್ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Kangana Ranaut visits Mathura Banke Bihari Temple with her family sgk
Author
First Published Sep 20, 2022, 10:57 AM IST

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಕಂಗನಾ ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕಂಗನಾ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹೌದು, ಬಾಲಿವುಡ್ ನಟಿ ಕಂಗನಾ ಮಥುರಾ ವೃಂದಾವನ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದ ಜೊತೆ ದೇವರ ದರ್ಶನ ಮಾಡಿರುವ ಕ್ವೀನ್ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತನ್ನ ಇಡೀ ಕುಟುಂಬದ ಜೊತೆ ಕಂಗನಾ ದೇವಾಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ವಿಶೇಷ ಪೂಜೆ ಮಾಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಅಂದಹಾಗೆ ಕಂಗನಾ ದೇವಾಸ್ಥನಕ್ಕೆ ಭೇಟಿ ಕೊಡುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಕಂಗನಾ ದೇವಸ್ಥಾನಕ್ಕೆ ಬಂದು ಕಾರಿನಿಂದ ಇಳಿಯುತ್ತಿದ್ದಂತೆ ಅಲ್ಲಿಂದ ಜನರು ಕಂಗನಾ ಕಡೆಗೆ ಓಡಿದರು. ಬಳಿಕ ಭದ್ರತ ಸಿಬ್ಬಂದಿ ಜನರನ್ನು ನಿಯಂತ್ರಿಸಿ ಕಂಗನಾ ಅವರ ಎಂಟ್ರಿಗೆ ದಾರಿ ಮಾಡಿಕೊಟ್ಟರು. ಬಳಿಕ ಕಂಗನಾ ದೇವಸ್ಥಾನದ ಒಳಗೆ ಭೇಟಿ ಕೊಟ್ಟರು. ಅಲ್ಲಿ ಸ್ವಲ್ಪ ಸಮಯ ವೇದ ಮಂತ್ರಗಳ ನಡುವೆ ಅವರು  ಪ್ರಾರ್ಥನೆ ಸಲ್ಲಿಸುವಲ್ಲಿ ಮಗ್ನರಾಗಿದ್ದರು. ಕಂಗನಾ ರಾಧೆ.. ರಾಧೆ.. ಎಂದು ಜಪಿಸುತ್ತಾ ಬಂಕೆ ಬಿಹಾರಿಯ ಜನ್ಮಸ್ಥಳವಾದ ನಿಧಿವನ್ ರಾಜ್ ದೇವಾಲಯಕ್ಕೆ ಹೊರಟರು.

ದೇವರ ದರ್ಶನ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಕಂಗನಾ 'ಕೃಷ್ಣ ಮತ್ತು ರಾಧೆ ಮಾತೆಯನ್ನು ನೋಡುವ ಭಾಗ್ಯ ನಮಗೆ ಸಿಕ್ಕಿದ್ದು ನಮ್ಮ ಸೌಭಾಗ್ಯ' ಎಂದು ಹೇಳಿದರು. ಇನ್ನು ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿಯುವ ಮೊದಲು ಕೃಷ್ಣನ ದರ್ಶನ ಮಾಡಬೇಕೆಂದು ಬಂದಿರುವುದಾಗಿ ಹೇಳಿದ್ದಾರೆ. ಇನ್ನು ಈ ಸಮಯದಲ್ಲಿ ಯಾವುದೇ ವಿವಾದ ಅಥವಾ ರಾಜಕೀಯದ ಬಗ್ಗೆ ಮಾತನಾಡಿಲ್ಲ. ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳನ್ನು ಕಂಗನಾ ರಣಾವತ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. 

Kangana Ranaut ಬ್ರಹ್ಮಾಸ್ತ್ರ ಸಿನಿಮಾ 144 ಕೋಟಿ ಕಲೆಕ್ಷನ್ ಮಾಡಿಲ್ಲ, ಇದು ಮೂವಿ ಮಾಫಿಯಾ

ಅಂದಹಾಗೆ ಮಥುರಾದ ಬಂಕೆ ಬಿಹಾರಿ ದೇವಾಸ್ಥಾನಕ್ಕೆ ಕಂಗನಾ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸಹ ಕಂಗನಾ ಭೇಟಿ ಮಾಡಿದ್ದರು. ಕೃಷ್ಣ ಜನ್ಮಸ್ಥಳಕ್ಕೆ  ಭೇಟಿ ನೀಡಿದ ಕಂಗನಾ ಫೋಟೋಗಳು ಕಳೆದ ಬಾರಿಯೂ ವೈರಲ್ ಆಗಿತ್ತು. ಈ ವರ್ಷ ಮತ್ತೆ ಭೇಟಿ ನೀಡಿ ಕೃಷ್ಣ ದರ್ಶನ ಪಡೆದು ಧನ್ಯರಾಗಿದ್ದಾರೆ. 

ರಾಷ್ಟ್ರಪತಿ ದ್ರೌಪದಿ ಭೇಟಿ ಮಾಡಿದ ಕಾಂಟ್ರಾವರ್ಸಿಯಲ್‌ ಕ್ವೀನ್ ಕಂಗನಾ

ಕಂಗನಾ ಸಿನಿಮಾ ವಿಚಾರಕ್ಕೆ ಬರುವುದಾದರೇ ಈಗಾಗಲೇ ತೇಜಸ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಲುಕ್ ರಿಲೀಸ್ ಆಗಿದೆ. ಕಂಗನಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಮತ್ತೊಂದು ಸಿನಿಮಾ ಕಂಗನಾ ಕೈಯಲ್ಲಿದೆ. ನಟನೆ ಜೊತೆಗೆ ಕಂಗನಾ ನಿರ್ದೇಶನ ಮತ್ತು ನಿರ್ಮಾಣಕೂಡ ಮಾಡುತ್ತಿದ್ದಾರೆ.  

Follow Us:
Download App:
  • android
  • ios