ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ 'ತಲೈವಿ' ತೆರೆಗೆ ಬರಲು ಸಿದ್ಧವಾಗಿದೆ.  ಜಯಲಲಿತಾ ಪಾತ್ರದಲ್ಲಿ ನಟಿ  ಕಂಗನಾ ರಾಣಾವತ್ ಕಾಣಿಸಿಕೊಳ್ಳುತ್ತಿದ್ದು ತಯಾರಿ ಮಾಡಿಕೊಳ್ಳುತ್ತಿದ್ದಾರೆ.  ತಮಿಳು ಭಾಷೆ ಅವರಿಗೆ ಕಷ್ಟವಾಗುತ್ತಿದ್ದು, ಕಲಿಯಲು ಶುರು ಮಾಡಿದ್ದಾರಂತೆ!

 

ನನಗೆ ತಮಿಳು ಕಲಿಯಲು ಕಷ್ಟವಾಗುತ್ತಿದೆ. ಈ ಸಿನಿಮಾ ತಮಿಳು ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ಹಾಗಾಗಿ ತಮಿಳು ಕಲಿಯುತ್ತಿದ್ದೇನೆ' ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಭರತನಾಟ್ಯವನ್ನು ಕಲಿಯುತ್ತಿದ್ದಾರಂತೆ!

'ತಲೈವಿ' ಯಲ್ಲಿ ಮೇಕಪ್ ಬಗ್ಗೆ ಮಾತನಾಡುತ್ತಾ, ಲೈಟಾಗಿ ಮೇಕಪ್ ಮಾಡಿಕೊಳ್ಳುತ್ತೇನೆ. ಹೇರ್‌ಸ್ಟೈಲ್ ಸಹಜವಾಗಿರುತ್ತದೆ. ನಾನಿದ್ದಂತೆ ತೋರಿಸಿಕೊಳ್ಳಲು ಯತ್ನಿಸುತ್ತೇನೆಯೇ ವಿನಃ ತೋರಿಕೆಗಾಗಿ ಮೇಕಪ್ ಮಾಡಿಕೊಳ್ಳುವುದಿಲ್ಲ' ಎಂದಿದ್ದಾರೆ. 

ಹಿಂದಿಯಲ್ಲಿ 'ಜಯಾ' ಎಂಬ ಹೆಸರಿನಲ್ಲಿ ತೆರೆಗೆ ಬಂದರೆ ತಮಿಳಿನಲ್ಲಿ 'ತಲೈವಿ' ಎಂಬ ಹೆಸರಿನಲ್ಲಿ ಬರಲಿದೆ. ಈ ಬಯೋಪಿಕ್‌ಗಾಗಿ ಪಡೆದ ಸಂಭಾವನೆ 24 ಕೋಟಿ.