ಕಮಲ್ ಹಾಸನ್ ಕೋಪಿಷ್ಠರಾಗುವುದನ್ನು ನೋಡಿದ್ದೀರಾ? ಅವರು ಅಭಿಮಾನಿಗಳ ಮೇಲೆ ಕೋಪಗೊಂಡ ಘಟನೆಗಳು ನಡೆದಿವೆಯೇ? ಇತ್ತೀಚೆಗೆ ಕಮಲ್ ತಮ್ಮ ಅಭಿಮಾನಿಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಅಭಿಮಾನಿ ಏನು ತಪ್ಪು ಮಾಡಿದ?

ಇತ್ತೀಚೆಗೆ ಚೆನ್ನೈನಲ್ಲಿ ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಖ್ಯಾತ ನಟ ಕಮಲ್ ಹಾಸನ್ ಭಾಗವಹಿಸಿದ್ದರು. ಆ ವೇಳೆ ಅಭಿಮಾನಿ ನೀಡಿದ ಉಡುಗೊರೆ ಅವರಿಗೆ ಬೇಸರ ತಂದಿದೆ.

ನಿಜಕ್ಕೂ ನಡೆದಿದ್ದೇನು?

ಕಾರ್ಯಕ್ರಮದ ಮಧ್ಯೆ, ಓರ್ವ ಕಾರ್ಯಕರ್ತ ವೇದಿಕೆಗೆ ಬಂದು ದೊಡ್ಡ ಕತ್ತಿಯನ್ನು ಉಡುಗೊರೆಯಾಗಿ ನೀಡಿದರು. ಆರಂಭದಲ್ಲಿ ಕಮಲ್ ನಗುತ್ತಾ ಕತ್ತಿಯನ್ನು ಸ್ವೀಕರಿಸಿದರು. ಆದರೆ, ಮತ್ತೊಬ್ಬ ಕಾರ್ಯಕರ್ತ ಬಲವಂತವಾಗಿ ಆ ಕತ್ತಿಯನ್ನು ಕಮಲ್ ಅವರ ಕೈಗೆ ಇನ್ನಷ್ಟು ಸ್ಪಷ್ಟವಾಗಿ ನೀಡಲು ಪ್ರಯತ್ನಿಸಿದಾಗ, ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಮಲ್ ಹಾಸನ್ ಓರ್ವ ಕಾರ್ಯಕರ್ತನಿಗೆ ಎಚ್ಚರಿಕೆ ನೀಡಿ, “ಕತ್ತಿ ಕೆಳಗಿಡು” ಎಂದು ಆದೇಶಿಸಿದರು. ಈ ಸಮಯದಲ್ಲಿ ಅಲ್ಲಿದ್ದ ಪೊಲೀಸ್ ಅಧಿಕಾರಿ ತಕ್ಷಣ ಕಾರ್ಯಕರ್ತನನ್ನು ತಡೆದರು. ಕತ್ತಿಯನ್ನು ಪಕ್ಕಕ್ಕೆ ಇರಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು.

 

Scroll to load tweet…

 

ಈ ಘಟನೆಯ ನಂತರ ಕೆಲವು ಕಾರ್ಯಕರ್ತರು ಕಮಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು, ಶೇಕ್ ಹ್ಯಾಂಡ್ ಮಾಡಲು ಉತ್ಸುಕರಾದರು. ಭದ್ರತಾ ಸಿಬ್ಬಂದಿಗಳು ಅವರನ್ನು ವೇದಿಕೆಯಿಂದ ಕಳುಹಿಸಿದರು.

ಕಾರ್ಯಕ್ರಮ ಮುಂದುವರೆಸಿದ ಕಮಲ್‌ ಹಾಸನ್!

ಈ ಘಟನೆಯಿಂದ ಕಾರ್ಯಕ್ರಮದಲ್ಲಿ ಸ್ವಲ್ಪ ಸಮಯ ಉದ್ವಿಗ್ನತೆ ಉಂಟಾದರೂ, ಕಮಲ್ ಹಾಸನ್ ತಕ್ಷಣವೇ ಕಾರ್ಯಕ್ರಮವನ್ನು ಮುಂದುವರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಕೂಡ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭದ್ರತಾ ಲೋಪದ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸುತ್ತಿವೆ. ‌

ಕರ್ನಾಟಕದಲ್ಲಿ ದೊಡ್ಡ ವಿವಾದ ಎದ್ದಿತು!

ಅಂದಹಾಗೆ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಕಮಲ್‌ ಹಾಸನ್‌ ಅವರು ಹೇಳಿದ್ದರು. ಥಗ್‌ ಲೈಫ್‌ ಸಿನಿಮಾ‌ ಪ್ರಚಾರದ ವೇಳೆ ಡಾ ಶಿವರಾಜ್‌ಕುಮಾರ್ ಎದುರು ಕಮಲ್‌ ಹಾಸನ್‌ ಈ ಮಾತನ್ನು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಕರ್ನಾಟಕದಲ್ಲಿ ಕಮಲ್‌ ಹಾಸನ್‌ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದವು. ಇನ್ನು ಕರ್ನಾಟಕದಲ್ಲಿ ʼಥಗ್‌ ಲೈಫ್‌ʼ ಸಿನಿಮಾ ಬ್ಯಾನ್‌ ಮಾಡಲಾಯ್ತು. ಅಂದಹಾಗೆ ಕಮಲ್‌ ಹಾಸನ್‌ ಕೂಡ ನಾನು ಕ್ಷಮೆ ಕೇಳೋದಿಲ್ಲ ಎಂದು ಹೇಳಿದರು.

ಕಮಲ್‌ ಹಾಸನ್‌ ಅವರ ʼಥಗ್‌ ಲೈಫ್‌ʼ ಸಿನಿಮಾ ಅಷ್ಟು ಕಮಾಲ್‌ ಮಾಡಲಿಲ್ಲ, ಈ ಸಿನಿಮಾ ಕಲೆಕ್ಷನ್‌ ಕೂಡ ಕಡಿಮೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆಇಟ್ಟುಕೊಂಡಿದ್ದ ಈ ಸಿನಿಮಾ ಮಕಾಡೆ ಮಲಗಿದೆ ಎನ್ನಬಹುದು.