ನಟಿ ಜಾನ್ವಿ ಕಪೂರ್ ಅವರ ಚಿತ್ರ ರೂಹಿ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೀಗ ನಟಿಯ ಅಭಿನಯ ನೋಡಿದ ಫ್ಯಾನ್ಸ್ ಅವರನ್ನು ಆಲಿಯಾ ಭಟ್‌ಗೆ ಹೋಲಿಸಿ ಮಾತನಾಡುತ್ತಿದ್ದಾರೆ. ಇದಕ್ಕೆ ಜಾಹ್ನವಿ ಪ್ರತಿಕ್ರಿಯೆ ಏನು..?

ಹಾರ್ದಿಕ್ ಮೆಹ್ತಾ ನಿರ್ದೇಶನದ ಈ ಸಿನಿಮಾ ಹಾರರ್ ಕಾಮೆಡಿಯಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಆಲಿಯಾ ಭಟ್ ಅವರೊಂದಿಗೆ ಜಾಹ್ನವಿಯನ್ನು ಹೋಲಿಸಿದ್ದಾರೆ. ಜಾಹ್ಮವಿಗೆ ಮುಂದಿನ ಆಲಿಯಾ ಭಟ್ ಆಗುವಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಈ ಕಾಮೆಂಟ್ ಕೇಳಿದ ಜಾನ್ವಿ ಕಪೂರ್ ಪ್ರತಿಕ್ರಿಯೆ ಇಂಟ್ರೆಸ್ಟಿಂಗ್ ಆಗಿದೆ.

ಸೊಂಪುಗೂದಲಿನ ಸೀಕ್ರೆಟ್ ಹೇಳಿದ ನಟಿ ಮಾಧುರಿ ದೀಕ್ಷಿತ್

ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ, ಜಾಹ್ನವಿ ಅವರು ತಮ್ಮನ್ನು ಹೋಲಿಸಿದ್ದು ಭಾಗ್ಯ ಎಂದು ಹೇಳಿದ್ದಾರೆ. "ಜಾನ್ವಿ ಅವರು ವೃತ್ತಿಜೀವನದ ದೃಷ್ಟಿಯಿಂದ ಮುಂದಿನ ಆಲಿಯಾ ಭಟ್ ಆಗುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಅಭಿಮಾನಿಯೊಬ್ಬರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ನಟಿಯ ಉತ್ತರವು ನೆಟ್ಟಿಗರ ಮನಸು ಗೆದ್ದಿದೆ.

"ಅದು ತುಂಬಾ ಸ್ವೀಟ್. ನಿಮ್ಮ ಬಾಯಿಗೆ ತುಪ್ಪ, ಸಕ್ಕರೆ, ಲಡ್ಡೂ, ಬಿರಿಯಾನಿ, ನಿಮಗಿಷ್ಟದ್ದು ಸಿಗಲಿ" ಎಂದು ಜನ್ವಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ರೂಹಿ ಸಿನಿಮಾ ಆರಂಭಿಕ ವಾರಾಂತ್ಯದಲ್ಲಿ 12 ಕೋಟಿ ರೂ. ದಾಖಲಾಗಿದ್ದು, ಸೋಮವಾರವೂ ಇದೇ ಅಂಕೆ ಕಾಯ್ದುಕೊಂಡಿದೆ.

ಏತನ್ಮಧ್ಯೆ, ರೂಹಿ ಕಥೆ ಮಹಿಳೆಯರನ್ನು ಅಪಹರಿಸಿ ನಂತರ ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಹಳ್ಳಿಯ ಮಹಿಳೆ ಬಗ್ಗೆ ತಿಳಿಸುತ್ತದೆ.