ಕಳೆದ ಹಲವಾರು ವರ್ಷಗಳಿಂದ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಪ್ರಿಯಾಂಕಾ ಚೋಪ್ರಾ ಒಡೆತನದ ಜುಹು ಮನೆಗೆ ಶಿಫ್ಟ್ ಆಗುತ್ತಿದ್ದಾರೆ.

ಪ್ರಿಯಾಂಕಾ ಅವರು 2018 ರಲ್ಲಿ ನಿಕ್ ಜೊನಸ್ ಅವರೊಂದಿಗೆ ಮದುವೆಯಾದಾಗಾ ವಾಸಿಸುತ್ತಿದ್ದ ಮನೆಗೆ ಶಿಫ್ಟ್ ಆಗ್ತಿದ್ದಾರಂತೆ ಜಾಕಿ. ಈ ಮನೆ ಕರ್ಮಯೋಗ್ ಎಂಬ ಕಟ್ಟಡದಲ್ಲಿದ್ದು ಇದರ ಮೌಲ್ಯ ಬರೋಬ್ಬರಿ 7 ಕೋಟಿ.

ಇಬ್ಬಿಬ್ಬರು ಕಾಜಲ್: ಪತಿ ಗೌತಮ್ ಕನ್ಫ್ಯೂಸ್

ಜಾಕ್ವೆಲಿನ್ ಇತ್ತೀಚೆಗೆ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಇದು ವಿಸ್ತಾರವಾದ ಲಿವಿಂಗ್ ಏರಿಯಾ ಮತ್ತು ಬಿಸಿಲಿ ಬೀಲೋ ಬಾಲ್ಕನಿಯನ್ನು ಹೊಂದಿದೆ. ಬಾಂದ್ರಾದಲ್ಲಿದ್ದ ನಟಿ ಈ ಮನೆಯನ್ನು ನೋಡಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ಜಾಕಿ ಬಚ್ಚನ್ ಪಾಂಡೆ, ಭೂತ್ ಪೊಲೀಸ್, ಸರ್ಕಸ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಲಾಕ್‌ಡೌನ್ ಸಮಯದಲ್ಲಿ ಸಲ್ಮಾನ್ ಖಾನ್ ಜೊತೆ ಅವರ ಫಾರ್ಮ್ ಹೌಸ್‌ನಲ್ಲಿ ಉಳಿದುಕೊಂಡಿದ್ದರು.