ಇಬ್ಬಿಬ್ಬರು ಕಾಜಲ್‌ ಅಗರ್ವಾಲ್‌ನ್ನು ನೋಡಿ ಕನ್ಫ್ಯೂಸ್ ಆಗಿದ್ದಾರೆ ನಟಿಯ ಪತಿ ಗೌತಮ್ ಕಿಚ್ಲು. ಕಳೆದ ವರ್ಷದ ಅಕ್ಟೋಬರ್‌ನಲ್ಲಷ್ಟೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ತನಕ ತಮ್ಮ ಪ್ರೀತಿಯ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ ಕಾಜಲ್.

ಅಷ್ಟಾಗಿ ಪತಿಯ ಫೋಟೋ ಶೇರ್ ಮಾಡದ ಕಾಜಲ್ ಇತ್ತೀಚೆಗೆ ಒಂದು ಪೋಸ್ಟ್‌ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ಮತ್ತು ಗೌತಮ್ ಕಿಚ್ಲು ಮತ್ತು ಇನ್ನೊಬ್ಬ ಕಾಜಲ್ ಕೂಡಾ ಇದ್ದರು. ಇದು ಸಿಂಗಾಪುರ್‌ನಲ್ಲಿ ಲಾಂಚ್ ಅದ ನಟಿಯ ಸ್ಟಾಚ್ಯೂ.

ಹಿಮಾಲಯದಲ್ಲಿ ಹನಿಮೂನ್: ಕಾಜಲ್-ಗೌತಮ್ ರೊಮ್ಯಾಂಟಿಕ್ ಟೈಂ

ಆಪ್ತರು ಸಂಬಂಧಿಕರ ಮಧ್ಯೆ ವಿವಾಹವಾದ ಈ ಜೋಡಿ ಮುಂಬೈನಲ್ಲಿ ಸ್ವಲ್ಪ ಜನರ ಮಧ್ಯೆ ಅದ್ಧೂರಿಯಾಗಿ ಮದುವೆಯಾಗಿದ್ದರು. ನಟಿ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

ಕೊಮಾಲಿಯಲ್ಲಿ ಕೊನೆಯ ಬಾರಿಗೆ ಕಾಣಿಸಿದ್ದ ಕಾಜಲ್ ಅಗರ್ವಾಲ್ ಅವರು ಮುಂಬೈ ಸಾಗಾ, ಆಚಾರ್ಯ, ಮೊಸಾಗಲ್ಲು, ಹೇ ಸಿನಾಮಿಕಾ, ಪ್ಯಾರಿಸ್ ಪ್ಯಾರಿಸ್ ಮತ್ತು ಕಮಲ್ ಹಾಸನ್ ಅವರ ಇಂಡಿಯನ್ 2 ಸಿನಿಮಾದಲ್ಲಿ ನಟಿಸಲಿದ್ದಾರೆ.