ಗಣೇಶ ಚತುರ್ಥಿ ಹಬ್ಬ ಆಚರಿಸಿದ ಶ್ರೀಲಂಕಾ ಚೆಲುವೆ ಮಂಗಳ ಮುಖಿಯರ ಜೊತೆ ಜಾಕಿ ಹಬ್ಬ

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಯೊಲೊ ಫೌಂಡೇಶನ್ ಮತ್ತು ಕಿನ್ನರ್ ಟ್ರಸ್ಟ್ ಜೊತೆಗೆ ನಡೆಯುತ್ತಿರುವ ಗಣೇಶ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಮಂಗಳಮುಖಿಯರ ಜೊತೆ ಸೆರಳವಾಗಿ ಹಬ್ಬವನ್ನು ಆಚರಿಸಿದ್ದಾರೆ ಶ್ರೀಲಂಕಾ ಚೆಲುವೆ ಜಾಕಿ. ನಟಿಯ ಹಬ್ಬದ ಫೋಟೋಗೆ ಈಗ ಮೆಚ್ಚುಗೆ ವ್ಯಕ್ತವಾಗಿದೆ.

ಜಾಕ್ವೆಲಿನ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡು, "ಗಣಪತಿ ಬಪ್ಪಾ ಮೋರೆಯಾ !!! ಇದೀಗ, ಎಲ್ಲಾ ಗಲ್ಲಿಗಳು ಈ ಧ್ವನಿಯನ್ನು ಪ್ರತಿಧ್ವನಿಸುತ್ತಿವೆ. ನಾನು ಎಲ್ಲಿಗೆ ಹೋದರೂ, ಗಣೇಶ ದೇವರು ನಮಗೆ ನೀಡಿದ ನಗುವನ್ನು ನಾನು ನೋಡುತ್ತೇನೆ. ಈ ಶುಭ ಸಂದರ್ಭದಲ್ಲಿ ನಾನು ಜೊತೆಗೆ ಯೋಲೋ ಫೌಂಡೇಷನ್ ಅವರ ಆಚರಣೆಯ ಭಾಗವಾಗಿ ಕಿನ್ನರ್ ಟ್ರಸ್ಟ್‌ಗೆ ಭೇಟಿ ನೀಡಿದೆ. ಗಣೇಶನು ಈ ಸುಂದರ ಸಮುದಾಯವನ್ನು ಆಶೀರ್ವದಿಸಲಿ ಎಂದು ಬರೆದಿದ್ದಾರೆ.

ಪ್ರಮುಖ ಫ್ಯಾಷನ್ ಮ್ಯಾಗ್‌ಜೀನ್‌ ಕವರ್ ಗರ್ಲ್ ಆಗಿದ್ದೇಕೆ ಜಾಕ್ವೆಲಿನ್!

ಹಿಂದೆ, ಅವರು ಯೊಲೊ ಫೌಂಡೇಶನ್‌ನೊಂದಿಗೆ ಕೊರೋನಾ ಸಂಕಷ್ಟದ ಸಮಯದಲ್ಲಿ ನಿರ್ಗತಿಕರಿಗೆ ಆಹಾರವನ್ನು ನೀಡಲು ಸಹಾಯ ಮಾಡಿದ್ದರು. ಬೀದಿ ನಾಯಿಗಳಿಗೆ ಸಹಾಯ ಮಾಡಿದರು. ಸಂಪನ್ಮೂಲಗಳೊಂದಿಗೆ ಪೊಲೀಸ್ ಉದ್ಯೋಗಿಗಳಿಗೆ ಸಹಾಯ ಮಾಡಿದ್ದರು.

ಕೆಲಸದ ವಿಚಾರದಲ್ಲಿ ಜಾಕ್ವೆಲಿನ್ ಸರ್ಕಸ್, ಬಚ್ಚನ್ ಪಾಂಡೆ, ಕಿಕ್ 2 ಮತ್ತು ರಾಮ ಸೇತು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊನೆಯದಾಗಿ ಭೂತ್ ಪೊಲೀಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಜಾಕಿ ಸಖತ್ ಕಾಮೆಡಿ+ ಹಾರರ್ ಸೀನ್‌ಗಳಲ್ಲಿ ಮಿಂಚಿದ್ದಾರೆ.

View post on Instagram
View post on Instagram
View post on Instagram
View post on Instagram