1991ರಲ್ಲಿ ಪ್ರಾರಂಭವಾದ ಜಾಕ್‌ಸನ್‌ ವನ್ಯಜೀವಿ ಪ್ರಶಸ್ತಿ ಸುಮಾರು 800ಕ್ಕೂ ಹೆಚ್ಚು ವಿಜ್ಞಾನಿಗಳು, ಪರಿಸರ ಸಂರಕ್ಷಕರು ಮತ್ತು ಮಾಧ್ಯಮ ಅಧಿಕಾರಿಗಳನ್ನು ಒಳಗೊಂಡಿರುತ್ತವೆ. ಇದೇ ಮೊದಲ ಬಾರಿ ಎರಡು ವರ್ಷ ಬದಲಿಗೆ ಒಂದೇ ವರ್ಷಕ್ಕೆ ಈ ಪ್ರಶಸ್ತಿಗಳನ್ನು ಕೊಡ ಮಾಡಲಾಗಿದೆ. ಅಕ್ಟೋಬರ್‌ 1ರಂದು ಆನ್‌ಲೈನ್‌ನಲ್ಲಿ ಪ್ರಶಸ್ತಿ ಪ್ರಕಟಿಸಲಾಗಿತ್ತು. 

ಸ್ಪರ್ಧೆಗಾಗಿ ಸುಮಾರು 30ಕ್ಕೂ ಹೆಚ್ಚು ದೇಶಗಳಿಂದ ವನ್ಯಜೀವಿ ಆಡಿಯೋ ಕಳುಹಿಸಲಾಗಿತ್ತು. ಜಾಕ್‌ಸನ್‌ ಅವಾರ್ಡ್‌ನಲ್ಲಿ 620 ವಿಭಾಗಗಳಿದ್ದು, ಅದರಲ್ಲಿ 30 ವಿಡಿಯೋಗಳು ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿವೆ. 'My Octopus Teacher' ಪ್ರಶಸ್ತಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಮಾನವೀಯ ಕಾರ್ಯಗಳಿಗೆ ಗೌರವ: ಸೋನು ಸೂದ್‌ಗೆ‌ ವಿಶ್ವಸಂಸ್ಥೆ ಪ್ರಶಸ್ತಿ..! 

'ಒಂದು ಉದ್ಯಮವಾಗಿ, ಮಾಧ್ಯಮಗಳು ಮಹತ್ವದ ವಿಚಾರವನ್ನು ಇಡೀ ದೇಶಕ್ಕೆ ಸಾರಲು ಪಡುವ ಶ್ರಮವನ್ನು ನಾವು ಒಮ್ಮೆ ಕಲ್ಪಿಸಿಕೊಳ್ಳಬೇಕು. ದೇಶ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುವ ಬದಲಾವಣೆಗಳನ್ನು ನಾವು ಗೌರವಿಸಬೇಕು,' ಎಂದು ಜಾಕ್ಸನ್ ವೈಲ್ಡ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಲಿಸಾ ಸ್ಯಾಮ್ಫೋರ್ಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ.

Jackdon wild media awards 2020

Animal Behavior ಪಟ್ಟಿಯಲ್ಲಿ:
ಲಾಂಗ್‌ ಫಾರ್ಮ್‌ನಲ್ಲಿ 'ದಿ ಆಕ್ಟೋಪಸ್‌ ಇನ್‌ ಮೈ ಹೌಸ್‌' ಮೊದಲ ಸ್ಥಾನ ಪಡೆದುಕೊಂಡಿದೆ.  ಶಾರ್ಟ್‌ ಫಾರ್ಮ್‌ನಲ್ಲಿ 'ದಿ ಕಿಲ್ಲರ್ ಫಂಗಸ್ ಟರ್ನ್ಸ್‌ ಫ್ಲೈಸ್‌ ಇನ್ಟು ಝೋಂಬೀಸ್‌' ಎರಡನೇ ಸ್ಥಾನ ಗಿಟ್ಟಿಸಿದೆ.

Ecosystem ಪಟ್ಟಿಯಲ್ಲಿ:
ಲಾಂಗ್‌ ಫಾರ್ಮ್‌ನಲ್ಲಿ 'ಒಕವಾಂಗೊ - ರಿವರ್‌ ಆಫ್‌ ಡ್ರೀಮ್ಸ್: ಡಿವೈನ್‌ ಜರ್ನಿ' ಮೊದಲ ಸ್ಥಾನ ಪಡೆದುಕೊಂಡಿದೆ. ಶಾರ್ಟ್‌ ಫಾರ್ಮ್‌ನಲ್ಲಿ 'ಚೇಸಿಂಗ್ ಗೋಸ್ಟ್' ಎರಡನೇ ಸ್ಥಾನ ಪಡೆದುಕೊಂಡಿದೆ.

Earth & Sky ಪಟ್ಟಿಯಲ್ಲಿ: 
 ಲಾಂಗ್‌ ಫಾರ್ಮ್‌ನಲ್ಲಿ ' ದಿ ಎಡ್ಜ್‌ ಆಫ್‌ ಆಲ್‌ ವಿ ಕ್ನೋ' ಮೊದಲ ಸ್ಥಾನ ಪಡೆದುಕೊಂಡಿದೆ. 

ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಣ: ಕೇರಳಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ 

Conservation ಪಟ್ಟಿಯಲ್ಲಿ:
'ರೀಫ್‌ ರೆಸ್ಕ್ಯೂ' ಮೊದಲ ಸ್ಥಾನ ಪಡೆದುಕೊಂಡಿದೆ.  'ಆಕಾಶಿಂಗ: ಬ್ರೇವ್ಸ್ ಒನ್ಸ್' ಎರಡನೇ ಸ್ಥಾನ ಪಡೆದುಕೊಂಡಿದೆ.

ಇದೇ ರೀತಿ 30 ವಿಭಾಗಳಲ್ಲಿಯೂ ಪ್ರಶಸ್ತಿ ಪ್ರಕಟವಾಗಿದೆ.