Asianet Suvarna News Asianet Suvarna News

ಅಮೆರಿಕಾದಲ್ಲಿ ಇಂಡಿಯನ್ ಆಗಿರುವುದು ಅಷ್ಟು ಸುಲಭದ ಕೆಲಸವಲ್ಲ; ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್‌ನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಪಾಪ್ ಗಾಯಕ ನಿಕ್ ಜೊನಾಸ್ ಅವರನ್ನು ಮದುವೆಯಾಗಿದ್ದಾರೆ. ಅದಕ್ಕೂ ಮೊದಲು ಅವರು ನಿಕ್ ಜತೆ ಬಹಳಷ್ಟು ವರ್ಷಗಳಿಂದ ಲವ್‌ನಲ್ಲಿ ಇದ್ದರು.

It is not the easiest thing to be an Indian in America says Actress Priyanka Chopra srb
Author
First Published May 3, 2024, 12:35 PM IST

ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮೆರೆದು ಈಗ ಹಾಲಿವುಡ್‌ನಲ್ಲಿ ನಟನೆ ಮುಂದುವರಿಸಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಅಮೇರಿಕಾದಲ್ಲಿ ಇಂಡಿಯನ್ ಆಗಿರುವುದು ಅಷ್ಟು ಸುಲಭವಲ್ಲ' ಎಂದು ಹೇಳಿರುವ ಪ್ರಿಯಾಂಕಾ ಚೋಪ್ರಾ, ಈ ಬಗ್ಗೆ ವಿವರಣೆ ಕೂಡ ಕೊಟ್ಟಿದ್ದಾರೆ. ನಾನು ಅಮೆರಿಕಾದಲ್ಲಿ 2010ರಲ್ಲಿ ಕೆಲಸ ಮಾಡಲು ಶುರು ಮಾಡಿದ್ದೇನೆ. 2020ರ ಹೊತ್ತಿಗೆ, ಅಂದರೆ ಬರೋಬ್ಬರಿ  10 ವರ್ಷಗಳಲ್ಲಿ ನನಗೆ ಸಾಕಷ್ಟು ಅನುಭವಗಳು ಆಗಿವೆ. ಇಲ್ಲಿ, ಅಂದರೆ ಸ್ಟೇಟ್ಸ್‌ನಲ್ಲಿ ನಟನೆಯ ಅವಕಾಶಕ್ಕಾಗಿ ಬಾಗಿಲು ಬಡಿಯುವುದು ಅಷ್ಟು ಸುಲಭದ ಕೆಲಸವಲ್ಲ. 

ನಾನು ಕಳೆದ ಹತ್ತು ವರ್ಷಗಳಿಂದ ಅಮೆರಿಕಾದಲ್ಲಿ ಸಿನಿಮಾ ನಟನೆಗೆ ಚಾನ್ಸ್‌ ಪಡೆಯಲು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ನಾನಿಲ್ಲಿ ಶುರುವಿನಿಂದ, ಅಂದರೆ ಜೀರೋದಿಂದ ಪ್ರಯತ್ನಿಸಿ ಈಗ, ಅಂದರೆ ಹತ್ತು ವರ್ಷದ ಬಳಿಕ ಇಲ್ಲಿ ಸಾಕಷ್ಟು ಸಕ್ಸಸ್ ಪಡೆದಿದ್ದೇನೆ. ಆದರೆ, ಇಂಡಿಯಾದಿಂದ ಬಂದು ಇಲ್ಲಿ ಕೆರಿಯರ್ ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ನಾನು ಇಲ್ಲಿ ಇಂಡಿಯನ್ ಆಗಿರುವುದು ಸುಲಭದ ಕೆಲಸವಲ್ಲ, ಹಾಗಂತ, ನಾನು ಸಂಪೂರ್ಣ ಅಮೆರಿಕಾದವಳು ಆಗಲೂ ಸಾಧ್ಯವಿಲ್ಲ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

ಜನ್ಮದಿನದಂದೇ 'ವೀರ್‌'ನಾಗಿ ಜೆಕೆ ಎಂಟ್ರಿ, ಸೂಪರ್ ಸ್ಟೈಲ್‌ ಮೋಷನ್ ಪೋಸ್ಟರ್ ರಿಲೀಸ್!

ಬಾಲಿವುಡ್‌ನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ, ಡಿಸೆಂಬರ್ 1 ಮತ್ತು 2, 2018ರಂದು ಅಮೆರಿಕಾದ ಪಾಪ್ ಗಾಯಕ ನಿಕ್ ಜೊನಾಸ್ (Nick Jonas )ಅವರನ್ನು ಮದುವೆಯಾಗಿದ್ದಾರೆ. ಅದಕ್ಕೂ ಮೊದಲು ಅವರು ನಿಕ್ ಜತೆ ಬಹಳಷ್ಟು ವರ್ಷಗಳಿಂದ ಲವ್‌ನಲ್ಲಿ ಇದ್ದರು. ಹೀಗಾಗಿ ಅವರು 2010ರಿಂದಲೇ ಹಾಲಿವುಡ್‌ ಸಿನಿಮಾಗಳಲ್ಲಿ ಚಾನ್ಸ್ ಪಡೆಯಲು ಅವಕಾಶಕ್ಕೆ ಪ್ರಯತ್ನಿಸುತ್ತಲೇ ಇದ್ದರು. ಕೆಲವು ವರ್ಷಗಳಲ್ಲಿ ಅವರ ಈ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸದ್ಯ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. 

'ಅಲ್ಲು ಹೊಸ ಸ್ಟೈಲ್ ತಗ್ಗೋದೇ ಇಲ್ಲ, ಬಂದೇ ಬಿಟ್ಟ ಪುಷ್ಪರಾಜ್; 'ಪುಷ್ಪ 2' ಸಾಂಗ್ ಬಿಡುಗಡೆ!

ಅಂದಹಾಗೆ, ನಟಿ ಪ್ರಿಯಾಂಕಾ ಚೋಪ್ರಾ ಅವರು ಆಗಾಗ ಭಾರತಕ್ಕೆ ಬರುತ್ತಲೇ ಇರುತ್ತಾರೆ. ಅವರಿಗೆ ಈಗಲೂ ಬಾಲಿವುಡ್ ಸಿನಿಮಾಗಳಲ್ಲಿ ನಟನೆಗೆ ಆಫರ್ ಬರುತ್ತಿದೆ. ಆದರೆ, ಪ್ರಿಯಾಂಕಾ ಚೋಪ್ರಾ ಭಾರತದ ಯಾವುದೇ ಆಫರ್‌ಗಳನ್ನು ಇತ್ತೀಚೆಗೆ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ತೆಲುಗು ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ (Junior NTR) ಅವರ ಮುಂಬರುವ ಸಿನಿಮಾಗೆ ನಾಯಕಿಯಾಗಿ ಪ್ರಿಯಾಂಕಾರಿಗೆ ಆಫರ್ ನೀಡಲಾಗಿದೆ ಎನ್ನಲಾಗಿದೆ. ಆದರೆ, ಅವರಿನ್ನೂ ಒಪ್ಪಿ ಸಹಿ ಹಾಕಿಲ್ಲ . ಆರ್‌ಆರ್‌ಆರ್‌ ಸಿನಿಮಾ ಬಳಿಕ ನಟ ಜೂ. ಎನ್‌ಟಿಆರ್‌ ಅವರು ತೆಲುಗು ನಟರಾಗಿ ಮಾತ್ರ ಉಳಿದಿಲ್ಲ, ಈಗವರು ಇಂಟರ್‌ನ್ಯಾಷನಲ್ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್.

ಶ್ರೀನಿಧಿ ಶೆಟ್ಟಿಯೋ, ರಾಧಿಕಾ ಪಂಡಿತ್ ಆ? ಯಶ್ ಆಯ್ಕೆ ಯಾರೆಂಬ ಪ್ರಶ್ನೆಗೆ ಸಿಕ್ಕಿದೆ ಉತ್ತರ!

Latest Videos
Follow Us:
Download App:
  • android
  • ios