ತೆಲುಗು ಬಳಿಕ ತಮಿಳು ಚಿತ್ರರಂಗಕ್ಕೆ ಜಾನ್ವಿ ಕಪೂರ್: ಕಮಲ್ ಹಾಸನ್ ಸಿನಿಮಾದಲ್ಲಿ ನಟನೆ
ಬಾಲಿವುಡ್ ಖ್ಯಾತ ನಟಿ ಜಾನ್ವಿ ಕಪೂರ್ ತೆಲುಗು ಬಳಿಕ ತಮಿಳು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕಮಲ್ ಹಾಸನ್ ಜೊತೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹಿಂದಿ ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ನಟಿ ಜಾನ್ವಿ ಇದೀಗ ಸೌತ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಜೂ.ಎನ್ ಟಿ ಆರ್ ನಟನೆಯ ದೇವರಾ ಸಿನಿಮಾಗೆ ಜಾನ್ವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಜಾನ್ವಿ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಬಹುನಿರೀಕ್ಷೆಯ ನಟಿ ಜಾನ್ವಿ ಇದೀಗ ತೆಲುಗು ಬಳಿಕ ತಮಿಳು ಸಸಿವಿಮಾರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಲೈರಲ್ ಆಗಿದೆ. ತಮಿಳಿನ ಖ್ಯಾತ ನಟ ಕಮಾಲ್ ಹಾಸನ್ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಕಮಲ್ ಹಾಸನ್ ನಟನೆಯ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿಯಾಗುತ್ತಿಲ್ಲ. ಬದಲಿಗೆ ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ಹೌದು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ವಿಘ್ನೇಶ್ ಶಿವನ್ ನಿರ್ದೇಶನದ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ. ಈ ಮೂವಕ ಜಾನ್ವಿ ತಮಿಳು ಸಿನಿಮಾರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.
ಜಾಹ್ನವಿ ಕಪೂರ್-ಸಾರಾ ಅಲಿ ಖಾನ್ ಹೇಗಿದ್ರು ನೋಡಿ ಈ ಬಾಲಿವುಡ್ ಸ್ಟಾರ್‌ಕಿಡ್ಸ್!
ಅಂದಹಾಗೆ ಜಾನ್ವಿ ಲವ್ ಟು ಡೇ ಖ್ಯಾತಿಯ ನಟ ಪ್ರದೀಪ್ ರಂಗನಾಥನ್‌ಗೆ ಜೋಡಿಯಾಗಲಿದ್ದಾರೆ ಎನ್ನಲಾಗಿದೆ. ಲವ್ ಟು ಡೇ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಕಮಲ್ ಹಾಸನ್ ನಿರ್ಮಾಣದಲ್ಲಿ ಸಿನಿಮಾ ಮಾಡುತ್ತಿದ್ದು ಜಾನ್ವಿ ಕಪೂರ್ ನಾಯಕಿ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸದ್ಯ ಜಾನ್ವಿ ಜೊತೆ ಮಾತುಕತೆ ನಡೆಯುತ್ತಿದ್ದು ಗ್ರೀನ್ ಸಿಗ್ನಲ್ ನೀಡುವುದೊಂದೆ ಬಾಕಿ ಎನ್ನಲಾಗಿದೆ.
ಜೂ.ಎನ್‌ಟಿಆರ್‌ಗೆ ಸಾಯಿ ಪಲ್ಲವಿ ನಾಯಕಿ: ಹಾಗಾದ್ರೆ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಕಥೆ ಏನು?
ಜಾನ್ವಿ ಹಿಂದಿ ಜೊತೆಗೆ ಸೌತ್ ನಲ್ಲೂ ಖ್ಯಾತಿಗಳಿಸುವ ಕನಸು ಕಂಡದ್ದಾರೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವುದು ಜಾನ್ವಿಯ ಆಸೆಯಾಗಿತ್ತು. ಅದರಲ್ಲೂ ಜೂ.ಎನ್ ಟಿ ಆರ್ ಜೊತೆ ನಟಿಸಬೇಕೆಂದು ಅನೇಕ ಬಾರಿ ಹೇಳಿಕೊಂಡಿದ್ದರು. ಅದರಂತೆ ಈಗ ಜೂ.ಎನ್ ಟಿ ಆರ್‌ಗೆ ನಾಯಕಿಯಾಗಿ ಸೌತ್ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇದೀಗ ತೆಲುಗು ಜೊತೆಗೆ ತಮಿಳು ಸಿನಿಮಾ ಕೂಡ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷ್ ಆಗಿದ್ದಾರೆ. ತಾಯಿ ಶ್ರೀದೇವಿಯಂತೆ ಮಗಳು ಕೂಡ ಸೌತ್ ಹಾಗೂ ಬಾಲಿವುಡ್ ಎರಡರಲ್ಲೂ ಫೇಮಸ್ ಆಗ್ತಾರಾ ಕಾದುನೋಡಬೇಕು.