ಬಾಲಿವುಡ್ ನಟಿ ಕಂಗನಾ ರನೌತ್ ಅವರು ಮುಂಬರುವ ಚಿತ್ರ ಧಾಕಡ್ ಟೀಮ್ ಸಿಬ್ಬಂದಿಗೆ ವಿಶೇಷ ಪಾರ್ಟಿ ಆಯೋಜಿಸಿದ್ದಾರೆ. ಸಿಂಪಲ್ ಪಾರ್ಟಿ ಮೂಲಕ ಹೊಸ ವರ್ಷದ ಆರಂಭವನ್ನು ಸಂಭ್ರಮಿಸಿದ್ದಾರೆ ಕಂಗನಾ.

ಪಾರ್ಟಿಯಲ್ಲಿ ಅರ್ಜುನ್ ರಾಂಪಾಲ್, ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಅವರ ಮುಂಬರುವ ಚಿತ್ರ 'ಧಾಕಡ್' ನ ಇತರ ಸದಸ್ಯರು ಭಾಗವಹಿಸಿದ್ದರು. ಕಂಗನಾ ಟ್ವಿಟ್ಟರ್ ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಬ್ರಂಚ್ ಪಾರ್ಟಿಗಾಗಿ ತಮ್ಮ ಮನೆಯನ್ನು ಅಲಂಕರಿಸುವುದನ್ನು ಕಾಣಬಹುದು.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು!

ನಟಿ ತಮ್ಮ ಅತಿಥಿಯೊಂದಿಗೆ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅರ್ಜುನ್ ಮತ್ತು ಗೇಬ್ರಿಯೆಲಾ ಮತ್ತು ಇತರರೊಂದಿಗೆ ನಟಿ ಪೋಸ್ ಕೊಟ್ಟಿದ್ದಾರೆ. ಇದೇ ಸಂದರ್ಭ ಕಂಗನಾ ಚಿತ್ರದ ನಿರ್ದೇಶಕರನ್ನು ಅಭಿನಂದಿಸಿದ್ದಾರೆ.

ನಮ್ಮ ಧಾಕಡ್ ತಂಡಕ್ಕೆ ಮತ್ತು ನಮ್ಮ ಮುಖ್ಯಸ್ಥರಿಗೆ ಚೀರ್ಸ್, ನಮ್ಮ ನಿರ್ದೇಶಕ ರ ಭಾರತದ ಉನ್ನತ ಜಾಹೀರಾತು ಚಲನಚಿತ್ರ ನಿರ್ಮಾಪಕರು, ಇದು ಅವರ ಮೊದಲ ಚಿತ್ರ. ಅವರೊಂದಿಗೆ ಕೆಲಸ ಮಾಡುವ ಭಾಗ್ಯವಿದೆಎಂದು ಬರೆದಿದ್ದಾರೆ.