ಸರಳತೆಯ ಸಾಕಾರಮೂರ್ತಿಯಂತಿರುವ ಇನ್ಫೋಸಿಸ್ ಸುಧಾಮೂರ್ತಿ ಸಾಮಾಜಿಕ ಕೆಲಸಗಳ ಮೂಲಕ ಚಿರಪರಿಚಿತರು. ತಮ್ಮ ಸಾಧನೆಯೇ ಮೂಲಕ ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದಾರೆ.  ಇನ್ಫೋಸಿಸ್ ಫೌಂಡೇಶನ್ ಮೂಲಕ ಸಾವಿರಾರು ಮಂದಿಗೆ ನೆರವು ನೀಡಿದ್ದಾರೆ. 

ಹುಟ್ಟೂರಿನಲ್ಲಿ ಚೀಲಾ ಹಿಡಿದು ವಾರದ ಸಂತೆ ಮಾಡಿದ ಸರಳ ಸಜ್ಜನಿಕೆಯ ಸುಧಾಮೂರ್ತಿ

 ಓದು, ಬರಹ, ಸಾಹಿತ್ಯಗಳಲ್ಲಿ ಯಾವಾಗಲೂ ಬ್ಯುಸಿಯಾಗಿರುವ ಸುಧಾಮೂರ್ತಿ ಆಗೊಮ್ಮೆ ಈಗೊಮ್ಮೆ ಸಿನಿಮಾಗಳನ್ನು ನೋಡುತ್ತಾರೆ. ಇತ್ತೀಚಿಗೆ ಸುಧಾ ಮೂರ್ತಿ ಅವರು ತಮ್ಮ ಸಿನಿ ಪ್ರೇಮದ ಬಗ್ಗೆ ಮಾತನಾಡಿದ್ದಾರೆ. 'ನಾನು ಸಿನಿಮಾ ನೋಡುತ್ತೇನೆ. ತೆಲುಗು ಸಿನಿಮಾ ಕೂಡ ಇಷ್ಟವಾಗುತ್ತದೆ. ಅದರಲ್ಲೂ ಜೂನಿಯರ್ ಎನ್‌ ಟಿ ಆರ್ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತೇನೆ. ಒಮ್ಮೆ ಭಗವಂತ ಕೃಷ್ಣ ಎಂದಾಕ್ಷಣ  ಜೂನಿಯರ್‌ ಎನ್‌ ಟಿ ಅರ್‌ ಜ್ಞಾಪಕ ಬರುತ್ತಾರೆ.  ಸ್ವಲ್ಪ ದಿನಗಳ ಹಿಂದೆ 'ರಂಗಸ್ಥಲಂ ' ಚಿತ್ರ ನೋಡಿದ್ದೇನೆ. ರಾಮ್‌ ಚರಣ್ ಸೂಪರ್‌ ಆಗಿ ಮಾಡಿದ್ದಾರೆ. 'ಗೀತಾ ಗೋವಿಂದಂ' ಚಿತ್ರವನ್ನೂ ನೋಡಿದೆ.  ವಿಜಯ್ ಚೆನ್ನಾಗಿ ಮಾಡಿದ್ದಾರೆ' ಎಂದು ಶ್ಳಾಘಿಸಿದ್ದಾರೆ.  

ಮೂರ್ತಿ ದಂಪತಿ ಮನೆಗೆ ಸೊಸೆ ಅಪರ್ಣಾ ಆಗಮನ: ಸರಳ ಮದುವೆಯಾದ ರೋಹನ್!

ಈ ಹಿಂದೆ ಮಹೇಂದ್ರ ಮುಖ್ಯಸ್ಥ ಆನಂದ್ ಮಹೇಂದ್ರ ಅವರು 'ಬಾಹುಬಲಿ' ಚಿತ್ರದ ಬಗ್ಗೆ ಮಾತನಾಡಿದ್ದರು. ಆಗ ಜನರೆಲ್ಲಾ ದೊಡ್ಡ ಸಂಸ್ಥೆಯ ಮಾಲಿಕ ಸಿನಿಮಾ ನೋಡುತ್ತಾರಾ ಎಂದು ಅಚ್ಚರಿಪಟ್ಟಿದ್ದರು.