ಕೊರೋನಾ ವೈರಸ್‌ ವಿರುದ್ಧ ಹೋರಾಡಲು  ನಾಗರೀಕರು ಸಹಾಯ ಮಾಡುತ್ತಿದ್ದಾರೆ. ಪ್ರಧಾನಿ ಹಾಗೂ ಸಿಎಂ ಪರಿಹಾರ ನಿಧಿಗೆ ಧನ  ಸಹಾಯ ಮಾಡುವ ಮೂಲಕ ಸಿನಿ ತಾರೆಯರು ಸಾಥ್‌ ನೀಡುತ್ತಿದ್ದಾರೆ. 

ಪ್ರಧಾನಿ ಪರಿಹಾರ ನಿಧಿಗೆ ಬಾಲಿವುಡ್‌ ಆಕ್ಷನ್ ಪ್ರಿನ್ಸ್  ಅಕ್ಷಯ್‌ ಕುಮಾರ್ 25 ಕೋಟಿ ನೀಡಿದ್ದಾರೆ.  ಅಕ್ಷಯ್ ದೇಣಿಗೆ ನೀಡಿರುವ ಬಗ್ಗೆ ಬಾಲಿವುಡ್‌ ಚಿತ್ರರಂಗದ  ಹಿರಿಯ ಕಲಾವಿದ ಹಾಗೂ ಮಾಜಿ ಕೇಂದ್ರ ಸಚಿವ ಶರ್ತೃಘ್ನ ಸಿನ್ಹಾ ತೀವ್ರ ಟೀಕೆ ಮಾಡಿದ್ದಾರೆ. 

25 ಕೋಟಿ ರೂ ನೆರವಿನ ಬಳಿಕ ಮತ್ತೆ 3 ಕೋಟಿ ; ಅಕ್ಷಯ್ ಕುಮಾರ್‌ಗೆ ಯಾರೂ ಇಲ್ಲ ಸರಿಸಾಟಿ!

ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಶರ್ತೃಘ್ನ ಸಿನ್ಹಾ ದೊಡ್ಡ ಮೊತ್ತದಲ್ಲಿ ಹಣ ಕೊಟ್ಟ ತಕ್ಷಣ ಅವರಿಗೆ ಸಮಾಜದ ಬಗ್ಗೆ ಹೆಚ್ಚು ಕಾಳಜಿ ಇದೆಯಂತಲ್ಲ . ಕೊಟ್ಟ ಹಣದ ಮೇಲೆ ಆತನ ಗುಣವನ್ನು ಅಳೆಯಲಾಗುವುದಿಲ್ಲ ಎಂದು ಮಾತನಾಡಿದ್ದಾರೆ . 

ಅಕ್ಷಯ್‌ ಕುಮಾರ್‌ #DilSe ಥ್ಯಾಂಕ್ಯೂ ಅಭಿಯಾನಕ್ಕೆ ಸ್ಟಾರ್‌ಗಳ ಸಾಥ್‌

ಅಷ್ಟೇ ಅಲ್ಲದೆ  'ಹಣ ನೀಡಿದವರು ಸೋಷಿಯಲ್‌ ಮೀಡಿಯಾದಲ್ಲಿ ಫೋಸ್ಟ್‌ ಹಾಕಿ ಫ್ರೀ ಪ್ರಚಾರ ಪಡೆಯುತ್ತಿದ್ದಾರೆ' ಎಂದು ನೀಡಿರುವ ಹೇಳಿಕೆಯಿಂದ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಸಹಾಯ ಮಾಡುವುದು ಅವರ ವೈಯಕ್ತಿಕ ವಿಚಾರ ಅದನ್ನು ನೀವು ಹೇಳುವುದು ಸೂಕ್ತವಲ್ಲ ಎಂದು ಮಾತನಾಡಿದರು.