Asianet Suvarna News Asianet Suvarna News

ತೆಲುಗಿನಲ್ಲೂ ಹತ್ತಿಕೊಂಡಿದೆ ರಶ್ಮಿಕಾ ವಿರುದ್ಧ ಬೆಂಕಿ: ನಾಗಶೌರ್ಯನನ್ನೂ ಕಡೆಗಣಿಸಿದ ಕಿರಿಕ್ ಸುಂದರಿ

ಶ್ಮಿಕಾ ಮಂದಣ್ಣನನ್ನ ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡಬೇಕು ಅನ್ನೋ ಮಾತು ಚರ್ಚೆಯಲ್ಲಿರುವಾಗಲೇ ಅತ್ತ ತೆಲುಗು ಇಂಡಸ್ಟ್ರಿಯಲ್ಲೂ ಈ ನಟಿಯ ಬಗ್ಗೆ ಅಸಾಮಾಧಾನ ಹೊಗೆಯಾಡುತ್ತಿದೆ. ತೆಲುಗಿನ ಖ್ಯಾತ ಸಿನಿಮಾ ಬರಹಗಾರ ತೋಟಾ ಪ್ರಸಾದ್ ರಶ್ಮಿಕಾ ವಿರುದ್ಧ ಸಂದರ್ಶನವೊಂದರಲ್ಲಿ ಕಿಡಿ ಕಾರಿದ್ದಾರೆ. ಆಕೆ ರಕ್ಷಿತ್ ಮಾತ್ರವಲ್ಲ, ನಟ ನಾಗ ಶೌರ್ಯ ಅವರನ್ನೂ ಕಡೆಗಣಿಸಿದ್ದಾರೆ ಎಂದು ಹೇಳಿದ್ದಾರೆ.

In Telugu Cinema Industry opinion against Rashmika
Author
First Published Nov 30, 2022, 5:40 PM IST

ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆಗೆ ಬ್ರೇಕ್‌ಅಪ್ ಮಾಡಿಕೊಂಡ ಮೇಲಿಂದ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಜನ ನನ್ನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡೋದು, ಟ್ರೋಲ್‌ ಮಾಡೋದನ್ನು ನೋಡಿ ಶುರು ಶುರುವಿಗೆ ಬಹಳ ನೋವಾಗುತ್ತಿತ್ತು. ಈ ನೋವಲ್ಲೇ ಎಷ್ಟೋ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೆ. ಕ್ರಮೇಣ ಇದೆಲ್ಲ ಅಭ್ಯಾಸ ಆಯ್ತು. ಎಷ್ಟರ ಮಟ್ಟಿಗೆ ಅದಕ್ಕೆ ಅಡ್ಜೆಸ್ಟ್ ಆದೆ ಅಂದ್ರೆ ಸ್ವಲ್ಪ ದಿನ ಜನ ನನ್ನ ಬಗ್ಗೆ ಮಾತಾಡದಿದ್ದರೆ ನಾನು ಮೂಲೆಗುಂಪಾಗ್ತಿದ್ದೀನೇನೋ ಅಂತ ಸಣ್ಣಗೆ ಭಯ ಶುರುವಾಗ್ತಿತ್ತು ಅಂತ ನಗುತ್ತಾ ಹೇಳಿದ್ದರು. ಆದರೆ ಇತ್ತೀಚೆಗೆ ಅವರು ನೀಡಿದ ಸಂದರ್ಶನವೊಂದರಲ್ಲಿ ತನ್ನ ಎಕ್ಸ್ ಬಾಯ್‌ ಫ್ರೆಂಡ್‌ ರಕ್ಷಿತ್ ಅವರನ್ನು ವ್ಯಂಗ್ಯ ಮಾಡುವ ಭರದಲ್ಲಿ ತನ್ನ ಮೊದಲ ಸಿನಿಮಾದ ಬಗ್ಗೆಯೇ ಅವಜ್ಞೆಯ ಕೋಟ್ ನೀಡಿದರು. ಅದು ಎಲ್ಲರ ಸಿಟ್ಟಿಗೆ ಕಾರಣವಾಗಿತ್ತು. ಆದರೆ ಆಮೇಲೆ ತನ್ನ ಮಾತನ್ನು ತಿರುಚಲಾಗಿದೆ ಎಂದು ಬೇಸರದಲ್ಲಿ ಒಂದು ನೋಟ್‌ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡರು. ಆದರೆ ಅವರ ಈ ಧಿಮಾಕಿನ ಉತ್ತರ ರಿಷಬ್ ಶೆಟ್ಟಿ ಸೇರಿದಂತೆ ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ನೋವು ತಂದಿತ್ತು. ಕರ್ನಾಟಕದವರೆಲ್ಲ ರಶ್ಮಿಕಾ ಅವರನ್ನು ವಿರೋಧಿಸಲು ಶುರು ಮಾಡಿದರು. ಅವರನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡುವ ಮಾತುಗಳು ಬಂದವು.

ಇದೀಗ ಪಕ್ಕದ ತೆಲುಗು ಇಂಡಸ್ಟ್ರಿಯಲ್ಲೂ ರಶ್ಮಿಕಾ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ತೆಲುಗಿನ ಖ್ಯಾತ ಸಿನಿಮಾ ಬರಹಗಾರ ತೋಟಾ ಪ್ರಸಾದ್ ಸಂದರ್ಶನವೊಂದರಲ್ಲಿ ರಶ್ಮಿಕಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಪಾಪ್‌ಕಾರ್ನ್ ಮೀಡಿಯಾ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಕನ್ನಡ ಮಾತ್ರವಲ್ಲ ತೆಲುಗು ನಟನ ಕುರಿತೂ ಧಿಮಾಕಿನಿಂದ ರೀತಿ ನಡೆದುಕೊಂಡಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ರಶ್ಮಿಕಾ ಇತ್ತೀಚೆಗಷ್ಟೆ ಕಿರಿಕ್ ಪಾರ್ಟಿ ಸಿನಿಮಾದ ಹೆಸರನ್ನು ಹೇಳದೇ ಕೋಟ್ ಸನ್ನೆಯಲ್ಲಿ ಅವಮಾನ ಮಾಡುವಂತೆ ನಡೆದುಕೊಂಡಿದ್ದರು. ಈ ಬಗ್ಗೆ ಮಾತನಾಡಿದ ತೋಟಾ ಪ್ರಸಾದ್ 'ಒಂದು ವೇಳೆ ರಶ್ಮಿಕಾ ಮಂದಣ್ಣಗೆ ಬ್ರೇಕ್ ಅಪ್ ಆದ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಹೆಸರನ್ನು ಹೇಳಲು ಇಷ್ಟವಿಲ್ಲದಿದ್ದರೆ ಬೇಡ, ಅವರ ಹೆಸರು ಹೇಳೋದು ಬೇಡ, ಆದರೆ ಆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನು ಹೇಳಬಹುದಿತ್ತು, ಇತರರ ಹೆಸರನ್ನಾದರೂ ಹೇಳಬಹುದಿತ್ತು, ಅಟ್‌ಲೀಸ್ಟ್ ಸಿನಿಮಾ ಹೆಸರನ್ನಾದರೂ ಹೇಳಬಹುದಿತ್ತು ಅಲ್ವಾ? ಆಕೆ ಹೆಸರನ್ನು ಹೇಳಿಲ್ಲ ಎಂದರೆ ಬೇಕಂತಲೇ ಈ ಥರದ ವರ್ತನೆ ತೋರಿದ್ದಾರೆ' ಎಂದು ಅಸಾಮಾಧಾನ ಹೊರ ಹಾಕಿದರು.

ಸುಳ್ಳು ಎಂದು ಸಾಬೀತಾದ್ರೆ ಸಿನಿಮಾ ಮಾಡೋದನ್ನೇ ಬಿಡ್ತೀನಿ; 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ ಸವಾಲ್

ಮಾತು ಮುಂದುವರಿಸಿ, 'ಈಕೆ ಕನ್ನಡ ಮಾತ್ರವಲ್ಲ ತೆಲುಗಿನ ಪ್ರಥಮ ಚಿತ್ರದ ವಿಷಯದಲ್ಲೂ ಇದೇ ರೀತಿ ನಡೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ರೀತಿಯೇ ತನ್ನ ಮೊದಲ ತೆಲುಗು ಚಿತ್ರದ ನಟನನ್ನು ಕಡೆಗಣಿಸಿದ್ದಾಳೆ. ಕಿರಿಕ್ ಪಾರ್ಟಿ(Kirik Party)ಯಲ್ಲಿ ರಕ್ಷಿತ್ ಶೆಟ್ಟಿ ಇರುವ ಕಾರಣ ಆತನ ಹೆಸರನ್ನು ಹೇಳಲಿಲ್ಲ ಎಂದುಕೊಳ್ಳಬಹುದು. ಆಕೆ ತೆಲುಗು ಚಿತ್ರರಂಗ ಪ್ರವೇಶಿಸಿದ ಚಲೋ ಚಿತ್ರದ ನಟ ನಾಗಶೌರ್ಯ ಹೆಸರನ್ನೂ ಹೇಳಿರಲಿಲ್ಲ. ಇತ್ತೀಚೆಗಷ್ಟೆ ಚಲೋ ಚಿತ್ರದ ವಾರ್ಷಿಕೋತ್ಸವದ ಕುರಿತು ಟ್ವೀಟ್(Tweet) ಮಾಡಿದ್ದ ರಶ್ಮಿಕಾ ಮಂದಣ್ಣ ನಿರ್ದೇಶಕನ ಹೆಸರನ್ನು ಉಲ್ಲೇಖಿಸಿ ನಟ ನಾಗಶೌರ್ಯ ಹೆಸರನ್ನು ಉಲ್ಲೇಖಿಸಲಿಲ್ಲ. ಎಷ್ಟೇ ಬೆಳೆದರೂ ನಮಗೆ ಮೊದಲು ತುತ್ತು ನೀಡಿದವರನ್ನು ಮರೆಯಬಾರದು, ಕೃತಜ್ಞತೆ ಇರಬೇಕು' ಅಂತ ಎಂದು ರಶ್ಮಿಕಾ ವಿರುದ್ಧ ತೋಟಾ ಪ್ರಸಾದ್ ಕಿಡಿ ಕಾರಿದ್ದಾರೆ. 

Kriti Prabhas ಬೇರೊಬ್ಬರು ಮದುವೆ ಡೇಟ್‌ ಅನೌನ್ಸ್‌ ಮಾಡುವ ಮುನ್ನ ಇದು ನನ್ನ ಕ್ಲಾರಿಟಿ: ಕೃತಿ ಸನೊನ್

ಆದರೆ ನಟಿಯನ್ನು ಬ್ಯಾನ್ (Ban) ಮಾಡೋದೆಲ್ಲ ಆಗದ ಮಾತು, ಅದು ನ್ಯಾಯವೂ ಅಲ್ಲ ಅನ್ನೋ ಬಗೆಯ ಮಾತನ್ನು ತೋಟಾ ಪ್ರಸಾದ್ ಹೇಳಿದ್ದಾರೆ. ತೋಟಾ ಪ್ರಸಾದ್ ಮಾತುಗಳು ಸೋಷಿಯಲ್ ಮೀಡಿಯಾ(Sccial media)ದಲ್ಲಿ ವೈರಲ್(Viral) ಆಗಿವೆ. ಮೊದಲು ಕರ್ನಾಟಕದಲ್ಲಿ ರಶ್ಮಿಕಾ ಬಗ್ಗೆ ಅಸಮಾಧಾನ ಇತ್ತು, ಈಗ ಆಂಧ್ರಕ್ಕೆ ಹಬ್ಬಿದೆ, ಇದು ಹೀಗೇ ಮುಂದುವರಿದರೆ ಈ ನಟಿ ಬೇಗ ಇಂಡಸ್ಟ್ರಿಯಿಂದ ಮಾಯವಾಗ್ತಾರೆ ಅಂತ ಜನ ಕಮೆಂಟ್ ಮಾಡುತ್ತಿದ್ದಾರೆ.

Follow Us:
Download App:
  • android
  • ios