Asianet Suvarna News Asianet Suvarna News

Ileana D'Cruz: ಮದ್ವೆ ಆಗದೆ ಪ್ರೆಗ್ನೆಂಟ್ ಆದ ಇಲಿಯಾನಾ; ಮಗಳ ನಿರ್ಧಾರಕ್ಕೆ ತಾಯಿಯ ರಿಯಾಕ್ಷನ್ ಹೀಗಿದೆ

ಮದುವೆ ಆಗದೆ ಪ್ರೆಗ್ನೆಂಟ್ ಆದ ಇಲಿಯಾನಾ. ಮಗಳ ಈ ನಿರ್ಧಾರದ ಬಗ್ಗೆ ತಾಯಿಯ ರಿಯಾಕ್ಷನ್ ಹೀಗಿದೆ.

Ileana D'Cruz Mother Samira reacts on daughter's Pregnancy and she Says My Grand Baby sgk
Author
First Published Apr 18, 2023, 12:50 PM IST

ಖ್ಯಾತ ನಟಿ ಇಲಿಯಾನಾ ಡಿಕ್ರೂಜ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ತಾಯಿ ಆಗ್ತಿದ್ದೀನಿ ಎಂದು ಇಲಿಯಾನಾ ಬಹಿರಂಗ ಪಡಿಸಿದ್ದಾರೆ. ಇಲಿಯಾನಾ ಹಂಚಿಕೊಂಡು ಸಿಹಿ ಸುದ್ದಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಮದುವೆಯಾಗದೆ, ಮಗುವಿನ ತಂದೆ ಯಾರೆಂದು ರಿವೀಲ್ ಮಾಡದೆ ತಾಯಿ ಆಗುತ್ತಿರುವ ವಿಚಾರ ಹಂಚಿಕೊಳ್ಳುವ ಮೂಲಕ ಇಲಿಯಾನಾ ಸುದ್ದಿಯಾಗಿದ್ದಾರೆ. ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಿದ್ದ ಇಲಿಯಾನಾ ಹೆಚ್ಚಾಗಿ ಹಾಟ್ ಫೋಟೋ ಶೂಟ್ ಮೂಲಕ ಮಿಂಚುತ್ತಿದ್ದರು. ಇದೀಗ ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ತಾಯಿ ಆಗುತ್ತಿರುವ ಸಂತಸದ ವಿಚಾರವನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲಿಯಾನಾ ಎರಡು ಪೋಟೋ ಶೇರ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಅಡ್ವೆಂಚರ್ ಆರಂಭವಾಗುತ್ತಿದೆ ಎಂದು ಮಗುವಿನ ಬಟ್ಟೆ ಶೇರ್ ಮಾಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಅಮ್ಮ ಎನ್ನುವ ಪೆಂಡೆಂಟ್ ಧರಿಸಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ 'ನನ್ನ ಪುಟ್ಟ ಡಾರ್ಲಿಂಗ್ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ, ಶೀಘ್ರದಲ್ಲೇ' ಎಂದು ಫೋಟೆಗೆ ಕ್ಯಾಪ್ಷನ್ ನೀಡಿದ್ದಾರೆ. 

ಇಲಿಯಾನಾ ತಾಯಿಯಾಗುತ್ತಿರುವ ವಿಚಾರ ಅನೌನ್ಸ್ ಮಾಡುತ್ತಿದ್ದಂತೆ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಗಣ್ಯರು ಸಹ ಪ್ರತಿಕ್ರಿಯೆ ನೀಡಿ ಅಭಿನಂದಿಸುತ್ತಿದ್ದಾರೆ. ಜೊತೆಗೆ ಇಲಿಯಾನಾ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆಗೂ ಮುನ್ನ ಪ್ರೆಗ್ನೆಂಟ್ ಆಗಿರುವ ಮಗಳ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ತಾಯಿ ಸಮೀರಾ ಸಖತ್ ಥ್ರಿಲ್ ಆಗಿದ್ದಾರೆ. 'ಮೊದಲ ಮೊಮ್ಮಗುವನ್ನು ಭೇಟಿಯಾಗಲು ಉತ್ಸುಕಳಾಗಿದ್ದೀನಿ' ಎಂದು ಹೇಳಿದ್ದಾರೆ. 

ಮಗಳು ತಾಯಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಮೀರಾ, 'ನನ್ನ ಮೊಮ್ಮಗುಗೆ ಶೀಘ್ರದಲ್ಲೇ ಈ ಜಗತ್ತಿಗೆ ಸ್ವಾಗತ. ಕಾಯಲು ಸಾಧ್ಯವಿಲ್ಲ' ಎಂದು ಸಮೀರಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದಾರೆ. ಮಗಳ ನಿರ್ಧಾರಕ್ಕೆ ತಾಯಿಯ  ಬೆಂಬಲ ಕೂಡ ಸಿಕ್ಕಿದೆ. ಅಮ್ಮ- ಮಗಳ ಬಗ್ಗೆ ಅನೇಕರು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.

Ileana D'Cruz: ಮದುವೆ ಆಗದೆ ತಾಯಿ ಆಗ್ತಿರುವ ನಟಿ ಇಲಿಯಾನಾ; ಮಗುವಿನ ತಂದೆ ಯಾರೆಂದು ಕೇಳ್ತಿದ್ದಾರೆ ನೆಟ್ಟಿಗರು

ಅಂದಹಾಗೆ ಇಲಿಯಾನಾ ಯಾರನ್ನು ಮದುವೆಯಾಗಿದ್ದಾರೆ ಅಥವಾ ಯಾರ ಜೊತೆ ಸಂಬಂಧದಲ್ಲಿದ್ದಾರೆ, ಮಗುವಿನ ತಂದೆಯಾರು ಎನ್ನುವ ಬಗ್ಗೆ ಬಹಿರಂಗ ಪಡಿಸಿಲಿಲ್ಲ. ಇಲಿಯಾನಾ, ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅನೇಕ ಬಾರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರವಾಸಕ್ಕೆ ಹೋದ ಸಮಯದಲ್ಲೂ ಕತ್ರಿನಾ ಗ್ಯಾಂಗ್ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದರು. 

ತಮಿಳು ಚಿತ್ರರಂಗದಿಂದ ನಟಿ ಇಲಿಯಾನಾ ಡಿಕ್ರೂಜ್ ನಿಷೇಧ? ಕಾರಣವೇನು ಗೊತ್ತಾ?

ಇಲಿಯಾನಾ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವಾಗಲೇ ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಲಿವಿಂಗ್ ಟುಗೇದರ್ ನಲ್ಲಿದ್ದರು ಎನ್ನಲಾಗಿತ್ತು.  ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಪ್ರಾರಂಭಿಸಿದ ಬಳಿಕ ಇಲಿಯಾನಾ ಸಿನಿಮಾರಂಗದಿಂದ ದೂರ ಸರಿದಿದ್ದರು. ಆದರೆ 2019ರಲ್ಲಿ ಬ್ರೇಕಪ್ ಮಾಡಿಕೊಳ್ಳುವ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದರು. ಬಳಿಕ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇದೀಗ ತಾಯಿ ಆಗುತ್ತಿರುವ ವಿಚಾರ ರಿವೀಲ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 

Follow Us:
Download App:
  • android
  • ios