ಕಾಲಿವುಡ್‌ ಖ್ಯಾತ ನಟ, ಸಮಾಜ ಸೇವಕ ಹಾಗೂ ರಾಜಕಾರಣಿ ಕಮಲ್‌ ಹಾಸ್‌ ಕೊರೋನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ತಾವು ಬಳಸದೇ ಇರುವ ಫಾರ್ಮ್‌ ಹೌಸನ್ನು ನೀಡುವುದಾಗಿ ಸರ್ಕಾರಕ್ಕೆ ತಿಳಿಸಿದ್ದಾರೆ. ಸರ್ಕಾರ ಇದಕ್ಕೆ ಅನುಮತಿ ನೀಡಲು ಕಾಯುತ್ತಿದ್ದಾರೆ..

ನಟ ಕಮಲ್‌ ಹಾಸನ್‌ ಅವರ ಮಕ್ಕಳ್‌ ನೀಧಿ ಮಯ್ಯಂ ಪಕ್ಷದ ಕಚೇರಿಗೆ ನಗರ ಪಾಲಿಕೆ ಅಧಿಕಾರಿಗಳು ಶನಿವಾರ ಹೋಮ್‌ ಕ್ವಾರಂಟೈನ್‌ (ಗೃಹ ಬಂಧನ) ಸ್ಟಿಕ್ಕರ್‌ ಅಂಟಿಸಿದ್ದರಿಂದ ಕಮಲ್‌ ಕೊರೋನಾ ವೈರಸ್‌ ತಗುಲಿರುವ ಶಂಕೆಯಿಂದ ಗೃಹ ಬಂಧನಕ್ಕೆ ಒಳಗಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. 

ಕೋವಿಡ್19 ವಿರುದ್ಧ ಹೋರಾಟ: ಮನೆಯನ್ನೇ ಆಸ್ಪತ್ರೆ ಮಾಡಲು ಕಮಲ್ ನಿರ್ಧಾರ!

ಆದರೆ, ಕಮಲ್‌ ಹಾಸನ್‌ ಅವರ ಮಾಜಿ ಜೊತೆಗಾರ್ತಿ ಹಾಗೂ ನಟಿ ಗೌತಮಿ ಇತ್ತೀಚೆಗೆ ದುಬೈನಿಂದ ಮರಳಿದ್ದರು. ಈ ವೇಳೆ ಅವರ ಪಾಸ್ಪೋರ್ಟ್‌ನಲ್ಲಿ ಈ ಕಚೇರಿ ವಿಳಾಸ ಇದ್ದ ಕಾರಣ ಸ್ಟಿಕ್ಕರ್‌ ಅಂಟಿಸಲಾಗಿತ್ತು. ಬಳಿಕ ಪೋಸ್ಟರ್‌ ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಕಮಲ್‌ ಹಾಸನ್‌ ಕೂಡ ತಾವು ಗೃಹ ಬಂಧನಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಎಲ್ಲಿದ್ದಾರೋ ಅಲ್ಲಿಯೇ ಸ್ವಯಂ ದಿಗ್ಭಂದನಕ್ಕೊಳಗಾಗಿದ್ದಾರೆ.

"