ಹಾಲಿವುಡ್‌ ಗಾಯಕಿ ಅಡಿಲ್ ಪತಿಯೊಂದಿಗೆ ವಿಚ್ಛೇದನ ಪಡೆದು ಕೊಂಡಿದ್ದಾರೆ ಹಾಗೂ 1200 ಕೋಟಿ ರೂ. ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಅಂದು ಕಿರಿಕ್ ಆಗಿದ್ದ ಕಿಚ್ಚ ಸುದೀಪ್‌ ದಾಂಪತ್ಯ ಇಂದು ಹೇಗಿದೆ! 

ಹೌದು! ಹಾಲಿವುಡ್ ಪಾಪ್ ಗಾಯಕಿ ಅಡಿಲ್ ಹಾಗೂ ಪತಿ ಸಿಮನ್ 2011ರಲ್ಲಿ ಪ್ರೀತಿಸಿ 2012ರಲ್ಲಿ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ನಂತರ 2016ರಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹ್ಯಾಪಿ ಫ್ಯಾಮಿಲಿ ನಡೆಸುತ್ತಿದ್ದ ಅಡಿಲ್ ಕೆಲವೊಂದು ವೈ ಮನಸ್ಸಿನಿಂದ ಪರಸ್ಪರ ದೂರವೂ ಆದರು. 2019ರಲ್ಲಿ ವಿಚ್ಛೇದನ ಪಡೆಯಲು ಕೋರ್ಟ್‌ ಮೆಟ್ಟಿಲೇರಿದರು.

2019ರಲ್ಲಿ ಈ ಡಿವೋರ್ಸ್ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು.  ಈ ನಡುವೆಯೇ ಗಾಯಕಿ ಅಡಿಲ್‌ ಪತಿಗೆ 1200 ಕೋಟಿ ರೂ. ಅಂದರೆ 171 ಮಿಲಿಯನ್ ಡಾಲರ್‌ ಹಣವನ್ನು ಪರಿಹಾರವಾಗಿ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಡಿಲ್‌ ಪತಿ ಸಿಮನ್ ವಿಶ್ವವಿಖ್ಯಾತ ಆಪಲ್ ಸಂಸ್ಥೆಯ 'ಡ್ರಾಪ್ 4 ಡ್ರಾಪ್' ಚಾರಿಟಿ ಸಿಇಒ ಆಗಿದ್ದಾರೆ. ಇಬ್ಬರೂ ಮಕ್ಕಳನ್ನೂ ಬೆಳೆಸುವ ಜವಾಬ್ದಾರಿಯನ್ನು ಅಡಿಲ್ ತೆಗೆದುಕೊಂಡಿದ್ದಾರೆ