'Glee' ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡ ಹಾಲಿವುಡ್ ನಟಿ ನಯಾ ರಿವೇರಾ ದಕ್ಷಿಣ ಕಾಲಿಫೋರ್ನಿಯಾದ Piru ಸಮುದ್ರದಲ್ಲಿ ಖಾಸಗಿ ದೋಣಿ ಬಾಡಿಗೆ ಪಡೆದುಕೊಂಡು ಪುಟ್ಟ ಮಗನ ಜೊತೆ ಸಮಯ ಕಳೆಯುತ್ತಿದ್ದರು ಆದರೆ ನೋಡುನೋಡುತ್ತಲೇ 33 ವರ್ಷದ ಈ ನಟಿ ಕಾಣೆಯಾಗಿದ್ದು ಹೇಗೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. 

'ಲವ್ ಯು Baby ma,ನಾನು ನಗಲು ನೀನೇ ಕಾರಣ'; ಮೇಘನಾ ರಾಜ್‌

ನಯಾ ಅವರ ಪುತ್ರನನ್ನು ರಕ್ಷಿಸಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ದೋಣಿಯನ್ನು ಬಾಡಿಗೆಗೆ ನೀಡಿದ ಮಾಲೀಕರು ಕೊಟ್ಟ  ಮಾಹಿತಿ ಪ್ರಕಾರ ನಯಾ ಮಗನಿಗೆ ಮಾತ್ರ ಲೈಫ್‌ ಜಾಕೆಟ್ ಖರೀದಿಸಿದ್ದರು. ತನಿಖೆ ಪ್ರಾರಂಭಿಸಿರುವ ರಕ್ಷಣಾ ಸಿಬ್ಬಂದಿಗಳು ಹೆಲಿಕಾಫ್ಟರ್ ಬಳಸಿ ನಟಿಯನ್ನು ಹುಡುಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

'ಅಮ್ಮ ನೀರಿಗೆ ಜಿಗಿದು ಹೊರಗಡೆ ಬರಲೇ ಇಲ್ಲ' ಎಂದು ನಯಾ ಪುತ್ರ ಪೊಲೀಸರಿಗೆ ತಿಳಿಸಿದ್ದಾರೆ. ನಯಾ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರೆ ಪುತ್ರನನ್ನು ಸಮುದ್ರದ ನಡುವೆ ಏಕೆ ಬಿಡುತ್ತಿದ್ದರು? ಸ್ವಿಮಿಂಗ್ ಮಾಡಬೇಕೆಂದು ಹೇಳುತ್ತಿದ್ದ ನಯಾ ಈಜಲು ಸಾಧ್ಯವಾಗದೇ ಮುಳುಗಿದರಾ? ಅಥವಾ ಯಾವುದೇ ರಕ್ಷಣೆ ಇಲ್ಲದೆ ಮಗನೊಟ್ಟಿಗೆ ಸಮಯ ಕಳೆಯುತ್ತಿದ್ದ ನಯಾಳನ್ನು ಪ್ಲಾನ್ ಮಾಡಿ ಕೊಲೆ ಮಾಡಲಾಗಿದ್ಯಾ? ಇಂತಹ ಅನುಮಾನಗಳಿಗೆ ನಯಾ ಅವರ ಮೃತ ದೇಹ ಸಿಕ್ಕಿದ ಬಳಿಕವಷ್ಟೇ  ಉತ್ತರ ಸಿಗುತ್ತದೆ ಎನ್ನುತ್ತಾರೆ ಪೊಲೀಸರು. 

ರಿಯಾನ್ ಡಾರ್ಸೆನನ್ನು ಪ್ರೀತಿಸಿ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯಾ 2018ರಲ್ಲಿ ವಿಚ್ಛೇದನ ಪಡೆದುಕೊಳ್ಳುತ್ತಾರೆ ಆದರೆ ಮಗ ತನ್ನೊಟ್ಟಿಗೆ ಇರಬೇಕೆಂದು ಕಾನೂನಿನ ಅನುಮತಿ ಪಡೆದುಕೊಳ್ಳುತ್ತಾರೆ.  ಇದಾದ ನಂತರ ನಯಾ ಹೆಸರು ಅನೇಕರ ಜೊತೆ ಕೇಳಿ ಬರುತ್ತಿತು ಎನ್ನಲಾಗಿದೆ. 

 

ಘಟನೆ ನಡೆಯುವ ಹಿಂದಿನ ದಿನ ನಯಾ ತಮ್ಮ ಟ್ಟಿಟರ್‌ ಖಾತೆಯಲ್ಲಿ ಪುತ್ರನ ಜೊತೆ ಫೋಟೋ ಶೇರ್ ಮಾಡಿ 'Just the two of us' ಎಂದು ಬರೆದುಕೊಂಡಿದ್ದರು.