ಇಸ್ಲಾಂ ಧರ್ಮಗುರುವನ್ನು ಮದುವೆಯಾದ ಮಾಜಿ ಬಾಲಿವುಡ್ ನಟಿ ಈಗ ಕುಟುಂಬ ಜೀವನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಇಸ್ಲಾಂ ಧರ್ಮದ ರೀತಿ ರಿವಾಜುಗಳನ್ನೂ ಸ್ವಲ್ಪ ಹೆಚ್ಚಾಗಿಯೇ ಅನುಸರಿಸುತ್ತಿದ್ದಾರೆ.

ಕ್ರಿಶ್ಚಿಯನ್ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಆದ ನಂತರ ಸಿನಿಮಾ, ಶೋಬಿಸ್ ಏನೂ ಬೇಡ ಎಂದಿದ್ದ ಸನಾ ಖಾನ್ ಆಧ್ಯಾತ್ಮದ ಬಗ್ಗೆ ಮಾತನಾಡಲಾರಂಭಿಸಿದ್ದರು. ಇದಾಗಿ ಸ್ವಲ್ಪ ಸಮಯದಲ್ಲಿ ದಿಢೀರನೆ ವಿವಾಹವಾಗುತ್ತಿರುವುದಾಗಿ ಹೇಳಿದ್ದರು.

ಮುಸ್ಲಿಂ ಧರ್ಮಗುರುವನ್ನು ಮದ್ವೆಯಾಗಿ ಎರಡೇ ತಿಂಗಳು: ಹಾರ್ಟ್ ಬ್ರೋಕನ್ ಅಂತಿದ್ದಾರೆ ನಟಿ

ಇಸ್ಲಾಂ ಧರ್ಮ ಗುರು ಮುಫ್ತಿ ಅನಾಸ್ ಅವರನ್ನು ಮದುವೆಯಾಗಿ ಹನಿಮೂನ್ ಕೂಡಾ ಆಯಿತು. ಬಣ್ಣದ ಬದುಕಿನಿಂದ ಹೊರಬಂದ ನಟಿಗೆ ಈಗ ಮತ್ತೆ ತನ್ನ ಹಿಂದಿನ ದಿನಗಳನ್ನು ನೆನಪಿಸಿದ್ದಾರೆ ಫ್ಯಾನ್ಸ್. ಇದರಿಂದ ನೊಂದು ಕೊಂಡ ನಟಿ ಹಾರ್ಟ್ ಬ್ರೋಕನ್ ಎಂದಿದ್ದು ಅತ್ತಿದ್ದೂ ಆಯಿತು.

ಈಗ ಇನ್‌ಸ್ಟಗ್ರಾಂ ಸ್ಟೋರಿ ತುಂಬಾ ಬರೀ ಇಸ್ಲಾಂ ಕುರಿತ ಪಾಠಗಳನ್ನೇ ಪೋಸ್ಟ್ ಮಾಡುತ್ತಿದ್ದಾರೆ. ನಮಾಝ್ ವಿಧಾನ, ಸಮಯ, ಇತ್ಯಾದಿಗಳನ್ನು ಬರೆದು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.