Bollywood Film Offer To Allu Arjun: ಪುಷ್ಪಾ ಸಕ್ಸಸ್, ಬಾಲಿವುಡ್‌ನಲ್ಲೂ ಅಲ್ಲೂಗೆ ಡಿಮ್ಯಾಂಡ್
- ಸ್ಟೈಲಿಷ್ ಸ್ಟಾರ್‌ಗೆ ಬಾಲಿವುಡ್‌ನಲ್ಲಿಯೂ ಡಿಮ್ಯಾಂಡ್
- ಪುಷ್ಪಾ ಸಕ್ಸಸ್ ಬೆನ್ನಲೇ ನಟನಿಗೆ ಭಾರೀ ಬೇಡಿಕೆ
ಸೌತ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ಭಾರೀ ಪ್ರಶಂಸೆಗಳನ್ನು ಪಡೆಯುತ್ತಿದೆ. ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಅಭಿನಯದ ಸಿನಿಮಾ ಸೌತ್ ಮಾತ್ರವಲ್ಲದೆ ನಾರ್ತ್‌ನಲ್ಲಿಯೂ ಹವಾ ಸೃಷ್ಟಿಸಿದೆ. ಪ್ಯಾನ್ ಇಂಡಿಯಾ ಫೇಮ್ ತಂದುಕೊಟ್ಟ ಸಿನಿಮಾ ಉತ್ತಮ ವಿಮರ್ಶೆ ಮಾತ್ರವಲ್ಲ ಬಾಕ್ಸ್ ಆಫೀಸನ್ನೂ ಕೊಳ್ಳೆ ಹೊಡೆಯುತ್ತಿದೆ. ಸೌತ್ ಸಿನಿಮಾ ಭಾರೀ ಯಶಸ್ಸನ್ನು ಪಡೆಯುತ್ತಿರುವಾಗಲೇ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಸ್ಟಾರ್ ಕಲಾವಿದರಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ.
ಹೌದು. ಅಲ್ಲು ಅರ್ಜುನ್ ಶೀಘ್ರ ಬಾಲಿವುಡ್‌ನಲ್ಲೂ ಮಿಂಚುವುದನ್ನು ನಾವು ನೋಡಬಹುದು. ಸೌತ್‌ನಲ್ಲಿ ಬಹಳಷ್ಟು ಸಿನಿಮಾಗಳನ್ನು ಮಾಡಿ ಮುಖ್ಯವಾಗಿ ಆರ್ಯ ಸಿನಿಮಾ ಮೂಲಕ ಭಾರೀ ಯಶಸ್ಸು ಗಳಿಸಿದ ನಟ ಟಾಲಿವುಡ್ ಆಳುತ್ತಿರುವ ಸ್ಟಾರ್ ನಟರಲ್ಲಿ ಒಬ್ಬರು. ಇದೀಗ ಪುಷ್ಪಾ ಯಶಸ್ಸಿನ ನಂತರ ಅಲ್ಲು ಅರ್ಜುನ್ ಮತ್ತಷ್ಟು ಬೇಡಿಕೆಯ ನಟನಾಗುತ್ತಿದ್ದಾರೆ.
ಸಮಂತಾ ನಂಬಿಕೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಅಲ್ಲು
ತೆಲುಗು ನಟ ಅಲ್ಲು ಅರ್ಜುನ್ ಅವರು ಬಾಲಿವುಡ್ ಚಿತ್ರಕ್ಕಾಗಿ ಆಫರ್ ಸ್ವೀಕರಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಆದರೆ ಇದು ಕಾಂಕ್ರೀಟ್ ಅಥವಾ ಅತ್ಯಾಕರ್ಷಕ ಏನೂ ಅಲ್ಲ ಎಂದು ನಟ ಹೇಳಿದ್ದಾರೆ. ಅವರ ಬಾಲಿವುಡ್ ಡಿಬಟ್ ಬಗ್ಗೆ ಮಾತನಾಡುತ್ತಾ, ಶೀಘ್ರದಲ್ಲೇ ಬಾಲಿವುಡ್ ಡಿಬಟ್ ಮಾಡುವುದಾಗಿ ಹೇಳಿದ್ದಾರೆ. ಆಶಾದಾಯಕವಾಗಿ ಬೇರೆ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಧೈರ್ಯ ಬೇಕಾಗುತ್ತದೆ. ನೀವು ಆ ರಿಸ್ಕ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಅವರ 'ಪುಷ್ಪ: ದಿ ರೈಸ್' ಚಿತ್ರದ ಹಿಂದಿ-ಡಬ್ ಆವೃತ್ತಿ ₹56.69 ಕೋಟಿ ಕಲೆಕ್ಷನ್ ಮಾಡಿದೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ (Karan Johar) ದಕ್ಷಿಣ ಭಾರತದ (South India) ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ( Allu Arjun)ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪಾ (Pushpa)ಸಿನಿಮಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೋನಾ ನಂತರದ ಸಂದರ್ಭದಲ್ಲಿ ಹಿಂದಿ (Bollywood) ಸಿನಿಮಾಗಳೇ ಉತ್ತಮವಾಗಿ ಓಡುತ್ತಿಲ್ಲ. ಆದರೆ ಈ ನಡುವೆ ತೆಲುಗು ಸಿನಿಮಾಗಳು ಸದ್ದು ಮಾಡುತ್ತಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಪುಷ್ಪಾ ಚಿತ್ರದ ಯಶಸ್ಸನ್ನು ಕರಣ್ ಉಲ್ಲೇಖ ಮಾಡಿದರು. ಕಮರ್ಷಿಯಲ್ ಆಗಿ ತೆಲುಗು ಚಿತ್ರರಂಗ ಸಾಧನೆ ಮಾಡುತ್ತಿದೆ ಎಂದರು. ವಿಶೇಷ ಪ್ರಮೋಶನ್ ಮಾಡಲಿಲ್ಲ, ಪೋಸ್ಟರ್ ಗಳನ್ನು ಹಂಚಲಿಲ್ಲ ಆದರೂ ಪುಷ್ಪಾ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಕೊಂಡಾಡಿದರು. ಟ್ರೇಲರ್ ಮೂಲಕವೇ ಚಿತ್ರ ಸದ್ದು ಮಾಡಿತು. ನೀವು ಈ ಸಿನಾರಿಯೋವನ್ನು ಹಿಂಬಾಲಿಲೇಬೇಕು. ಇದನ್ನೇ ಪಾನ್ ಇಂಡಿಯಾ ಕ್ರೇಜ್ ಎಂದು ಕರೆಯಬಹುದು ಎಂದಿದ್ದಾರೆ.
ನಿರ್ದೇಶಕ ಸುಕುಮಾರ್ ನಿರ್ದೇಶಕನ ಪುಷ್ಪಾ(Pushpa) ಸೌತ್ ಮಾತ್ರವಲ್ಲ ನಾರ್ತ್‌ನಲ್ಲಿಯೂ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದು ಚಿತ್ರತಂಡಕ್ಕೆ ಭರ್ಜರಿ ಲಾಭ ತಂದುಕೊಟ್ಟಿದೆ. ಗಳಿಕೆ ಮಾತ್ರವಲ್ಲದೆ ಸಿನಿಮಾಗೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು ಜನರು ಥಿಯೇಟರ್‌ನತ್ತ ಬರುತ್ತಲೇ ಇದ್ದಾರೆ. ಪುಷ್ಪಾ ಸಕ್ಸಸ್ ಪಾರ್ಟಿಯೂ ಈಗಾಗಲೇ ನಡೆದಿದ್ದು ನಟ ಅಲ್ಲು ಅರ್ಜುನ್ ತಂಡಕ್ಕೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದೀಗ ನಿರ್ದೇಶಕ ಸುಕುಮಾರ್(Sukumar) ಅವರು ಚಿತ್ರಕ್ಕೆ ಸಂಬಂಧಿಸಿ ದುಡಿದ ಕೆಲಸಗಾರರಿಗೆ ಬಂಪರ್ ನಗದು ಎನೌನ್ಸ್ ಮಾಡಿದ್ದಾರೆ. ತೆಲುಗು ನಿರ್ದೇಶಕ ಸುಕುಮಾರ್ ಅವರು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಯಶಸ್ಸನ್ನು ಆಚರಿಸುವ ಸಮಾರಂಭದಲ್ಲಿ ಸೆಟ್ ಹುಡುಗರು, ಲೈಟ್ ಮೆನ್ ಮತ್ತು ನಿರ್ಮಾಣ ಮತ್ತು ಕಾಸ್ಟ್ಯೂಮ್, ಮೇಕಪ್ ಸಿಬ್ಬಂದಿಗೆ ಅವರ ಅಪಾರ ಶ್ರಮಕ್ಕಾಗಿ ತಲಾ ₹ 1 ಲಕ್ಷ ಘೋಷಿಸಿದ್ದಾರೆ. ನಿರ್ಮಾಪಕ ನವೀನ್ ಯೆರ್ನೇನಿ ಮಾತನಾಡಿ ಚಿತ್ರವು ಇಲ್ಲಿಯವರೆಗೆ 275 ಕೋಟಿ ಗಳಿಸಿದೆ. ಥಿಯೇಟರ್ ರನ್‌ನಲ್ಲಿ ಸುಮಾರು ₹ 325- ₹ 350 ಕೋಟಿ ಗಳಿಸುವ ನಿರೀಕ್ಷೆಯಿದೆ ಎಂದಿದ್ದಾರೆ.