Asianet Suvarna News Asianet Suvarna News

ಮಾಧುರಿ ದೀಕ್ಷಿತ್​ ಜೊತೆ ಫ್ಲರ್ಟ್: ಈಗ ಗುಟ್ಟು ಬಿಚ್ಚಿಟ್ಟ ನಟ ಗೋವಿಂದ

ಹಿಂದೊಮ್ಮೆ ಹಿಟ್​ ಜೋಡಿ ಎನಿಸಿಕೊಂಡಿದ್ದ ನಟಿ ಮಾಧುರಿ ದೀಕ್ಷಿತ್​ ಮತ್ತು ನಟ ಗೋವಿಂದ ಅವರ ಬಗ್ಗೆ ಕುತೂಹಲದ ವಿಷಯ ಬಹಿರಂಗಗೊಳಿಸಿದ್ದಾರೆ ನಟ ಗೋವಿಂದ
 

Govinda reveals a curious thing about flirt with Bollywood actress Madhruri Dixit suc
Author
First Published Jun 30, 2023, 12:10 PM IST

ನಟ ಗೋವಿಂದ (Govinda) ಅವರು, ಸುನೀತಾ ಅಹುಜಾ ಅವರನ್ನು ಮದುವೆಯಾಗಿ ಸುಖವಾಗಿದ್ದಾರೆ. ಆದಾಗ್ಯೂ, ನಟನಿಗೆ ಒಮ್ಮೆ ಮಾಧುರಿ ದೀಕ್ಷಿತ್ ಮೇಲೆ ಕ್ರಶ್ ಇತ್ತು ಎನ್ನುವುದು ನಿಮಗೆ ಗೊತ್ತಿದೆಯೆ? ಒಂದು ವೇಳೆ ಮಾಧುರಿ ದೀಕ್ಷಿತ್​ ಮದುವೆಯಾಗದಿದ್ದರೆ, ಆಕೆಯನ್ನು ಹೊಡೆಯುವುದಾಗಿ ಹೇಳಿದ್ದರು. ಹೌದು. ಇದು ನಿಜ.  ಮನರಂಜನಾ ಪೋರ್ಟಲ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, 'ಹೀರೋ ನಂ. 1' ನಟ ಗೋವಿಂದ ಅವರು, ಬಾಲಿವುಡ್‌ನ 'ಧಕ್ ಧಕ್' ನಟಿ ಮಾಧುರಿ ದೀಕ್ಷಿತ್​ ಅವರನ್ನು ತಮ್ಮ ನೆಚ್ಚಿನ ಸಹನಟಿ ಎಂದು ಕರೆದಿದ್ದಾರೆ. ಜೊತೆಗೆ ಹಿಂದೊಮ್ಮೆ ತಾವು ಆಕೆಯನ್ನು ಇಷ್ಟಪಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಸುನೀತಾ (Sunita Ahuja) ಇಲ್ಲದಿದ್ದಲ್ಲಿ ಮಾಧುರಿ ಜೊತೆ ಚೆಲ್ಲಾಟವಾಡುತ್ತಿದ್ದುದನ್ನೂ ಅವರು ಒಪ್ಪಿಕೊಂಡಿದ್ದಾರೆ.  ಅದೇ ಮಾತುಕತೆಯ ಸಂದರ್ಭದಲ್ಲಿ  ಅವರ ಪತ್ನಿ ಸುನೀತಾ ಕೂಡ ಪತಿ ಗೋವಿಂದ ಅವರ  ಮಾತನ್ನು ಒಪ್ಪಿಕೊಂಡಿದ್ದಾರೆ.  ತಮ್ಮ ಪತಿ ಗೋವಿಂದ ಅವರು ಮಾಧುರಿ ಜಿಯನ್ನು ಪ್ರೀತಿಸುತ್ತಾರೆ ಎಂದು ಹೇಳಿದರು. ಗಮನಾರ್ಹವಾಗಿ, ಗೋವಿಂದ ಮತ್ತು ಮಾಧುರಿ ದೀಕ್ಷಿತ್ 'ಇಜ್ಜತ್ದಾರ್' ಮತ್ತು 'ಪಾಪ್ ಕಾ ಅಂತ್' ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗೋವಿಂದ ಅವರ ಹಿಟ್ ಚಿತ್ರ 'ಬಡೆ ಮಿಯಾನ್ ಚೋಟೆ ಮಿಯಾನ್' ನಲ್ಲಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ಮಾಧುರಿ ದೀಕ್ಷಿತ್​ ಅವರು ತಮಗೆ ತುಂಬಾ ಇಷ್ಟವಾಗಿದ್ದರು ಎಂದಿರುವ ಗೋವಿಂದ ಅವರು,  ಹಿರಿಯ ನಟಿ ರೇಖಾ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುವುದಾಗಿ  ಹೇಳಿದರು.

ರೇಖಾ ಅವರ ಬಗ್ಗೆ ಇದೇ ಸಂದರ್ಭದಲ್ಲಿ ವಿವರಿಸುತ್ತಾ, ಅವರು  ತುಂಬಾ ಸುಂದರವಾಗಿದ್ದಾರೆ ಮತ್ತು ಒಳಗಿನಿಂದ ಸುಂದರವಾಗಿರುವ ಯಾರಾದರೂ ಎಂದಿಗೂ ಸೌಂದರ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದಿದ್ದಾರೆ.  ಗೋವಿಂದ ಅವರು 1987 ರಲ್ಲಿ ಸುನೀತಾ ಅಹುಜಾ ಅವರನ್ನು ವಿವಾಹವಾದರು ಮತ್ತು ಇಬ್ಬರು ಮಕ್ಕಳ ಹೆಮ್ಮೆಯ ಪೋಷಕರು - ಮಗ ಯಶವರ್ಧನ್ ಮತ್ತು ಮಗಳು ಟೀನಾ.  

ನನಗೆ ಮಕ್ಕಳು ಬೇಕು... ಆದರೆ... ದಾಂಪತ್ಯದ ರಹಸ್ಯ ಹೇಳಿದ ನಟಿ ಪೂಜಾ ಭಟ್​

ಅಂದಹಾಗೆ, ಗೋವಿಂದ ಮತ್ತು ಮಾಧುರಿ ದೀಕ್ಷಿತ್  (Madhuri Dixit) ಪಾಪ್​ ಕಾ ಅಂತ್, ಮಹಾ-ಸಂಗ್ರಾಮ್, ಇಜ್ಜತ್ದಾರ್ ಮತ್ತು ಬಡೇ ಮಿಯಾನ್ ಚೋಟೆ ಮಿಯಾನ್ ಮುಂತಾದ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿ ಹಿಟ್​ ಸಿನಿಮಾ ನೀಡಿದ್ದರೂ, ಇಬ್ಬರ ಕೆಮೆಸ್ಟ್ರಿಯನ್ನು ಜನರು ಮೆಚ್ಚಿದ್ದರೂ,  ಗೋವಿಂದ ಮಾಧುರಿಯೊಂದಿಗೆ ಕೆಲಸ ಮಾಡಲು ನಿರಾಕರಿಸಿದ ಸಮಯ ಬಂದಿತ್ತು. ಗೋವಿಂದ ಅವರು ಕರಿಷ್ಮಾ ಕಪೂರ್, ರವೀನಾ ಟಂಡನ್, ರಾಣಿ ಮುಖರ್ಜಿ, ಮಾಧುರಿ ದೀಕ್ಷಿತ್ ಮತ್ತು ನೀಲಂ ಕೊಠಾರಿ ಅವರಂತಹ ಅನೇಕ ಜನಪ್ರಿಯ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಅವರ ಬಹುತೇಕ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. 

ವರದಿಯ ಪ್ರಕಾರ, ಗೋವಿಂದ ಅವರು  ಮಾಧುರಿ ದೀಕ್ಷಿತ್ ಅವರ ವೃತ್ತಿಜೀವನದ ಆರಂಭದಲ್ಲಿ ಸಾಕಷ್ಟು ಸಹಾಯ ಮಾಡಿದರು. ಗೋವಿಂದ ಅವರ ಸಹಾಯದಿಂದಲೇ ಮಾಧುರಿ ಅವರು, ಹಲವು ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದಿದ್ದರು. ಆದಾಗ್ಯೂ, ಈ ಸಮಯದಲ್ಲಿ ಮಾಧುರಿ ದೀಕ್ಷಿತ್ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ (Subhash Ghai) ಅವರನ್ನು ಭೇಟಿಯಾದರು. ಸುಭಾಷ್ ಘಾಯ್ ಅವರು ಮಾಧುರಿ ದೀಕ್ಷಿತ್​ ಅವರಿಗೆ  ಉತ್ತರ ದಕ್ಷಿಣ ಚಿತ್ರದಲ್ಲಿ ಒಂದು ಪಾತ್ರವನ್ನು ನೀಡಿದರು ಮತ್ತು ಅವರು  ಒಪ್ಪಿಕೊಂಡರು. ಇದು ಗೋವಿಂದ ಅವರಿಗೆ ಸಹಿಸಲು ಆಗಲಿಲ್ಲ. ಅವರಿಗೆ ಇಷ್ಟವಿಲ್ಲದಿದ್ದರೂ ಮಾಧುರಿ ನಟನೆಗೆ ಒಪ್ಪಿಕೊಂಡಿದ್ದರು. ಇದರಿಂದ ನಟ ಗೋವಿಂದ ಅವರ  ಅಸಮಾಧಾನಕ್ಕೆ ಕಾರಣವಾಗಿ ಮಾಧುರಿ ಜೊತೆ ನಟಿಸಲಿಲ್ಲ ಎನ್ನಲಾಗಿದೆ.

ಮದ್ವೆ ಆದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಹನ್ಸಿಕಾ?

Follow Us:
Download App:
  • android
  • ios