ಆಲಿಯಾ ಭಟ್ ಬಹುನೀರಿಕ್ಷಿತ ಸಿನಿಮಾ ಗಂಗೂಬಾಯಿ ಹಥಿಯಾವಾಡಿ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಆಲಿಯಾ ಭಟ್ ಎಂಥಹ ಪಾತ್ರಕ್ಕೂ ಸೈ ಎಂದು ಪ್ರೂವ್ ಮಾಡಿದ್ದಾರೆ.

ಹುಸೈನ್ ಝೈದಿ ಅವರ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಪುಸ್ತಕ ಆಧಾರಿತ ಸಿನಿಮಾ ಇದಾಗಿದ್ದು, ಮಾಫಿಯಾ ಲೋಕದ ಭಯ, ಶಕ್ತಿ ಎಲ್ಲವೂ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ.

ಕ್ಯಾನ್ಸರ್ ಪೀಡಿತ ಅಮ್ಮನ ಫೋಟೋ ಹಾಕಿ ಭಾವುಕಳಾದ ರಾಖಿ

ಸ್ಟೂಡೆಂಡ್ ಆಫ್ ದಿ ಇಯರ್‌ನಂತಹ ಯೂತ್ ಸಿನಿಮಾಗಳನ್ನೇ ಮಾಡಿದ ನಟಿ ಆಲಿಯಾ ಭಟ್ ಈ ಬಾರಿ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಖಡಕ್ ಲುಕ್, ಕಾಸ್ಟ್ಯೂಮ್, ಸ್ಟೈಲ್‌ನಲ್ಲಿ ಆಲಿಯಾ ಸಖತ್ ಡಿಫರೆಂಟಾಗಿ ಕಾಣಿಸಿದ್ದಾರೆ. ಟೀಸರ್‌ನ್ನು ಬಹಳಷ್ಟು ಸಿನಿ ತಾರೆಯರು ಶೇರ್ ಮಾಡಿಕೊಂಡಿದ್ದಾರೆ.