Asianet Suvarna News Asianet Suvarna News

ನನ್ನ ಲೈಫ್‌ಲಿ ಪ್ರೀತಿಗೆ ಅವಕಾಶವಿದೆ; ಮದುವೆ ಬಗ್ಗೆ ಮೌನ ಮುರಿದ ಕಾರ್ತಿಕ್ ಆರ್ಯನ್

ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಮೊದಲ ಬಾರಿಗೆ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. 

Freddy hero Kartik Aaryan speaks about his marriage sgk
Author
First Published Dec 6, 2022, 2:54 PM IST

ಬಾಲಿವುಡ್ ಖ್ಯಾತ ನಟ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸ್ಟಾರ‌್ ಗಳಲ್ಲಿ ಕಾರ್ತಿಕ್ ಆರ್ಯನ್ ಕೂಡ ಒಬ್ಬರು. 2022 ಬಾಲಿವುಡ್‌ಗೆ ಅತ್ಯಂತ ನಿರಾಸೆಯ ವರ್ಷವಾಗಿದೆ. ಅನೇಕ ಸ್ಟಾರ್ ಕಲಾವಿದರು ಮತ್ತು ಬಿಗ್ ಬಜೆಟ್ ಸಿನಿಮಾಗಳು ಸೋಲು ಕಂಡಿವೆ. ಆದರೆ ಸಕ್ಸಸ್ ಆದ ಕೆಲವೇ ಕೆಲವು ಹಿಂದಿ ಸಿನಿಮಾಗಳಲ್ಲಿ ಕಾರ್ತಿರ್ ಆರ್ಯನ್ ನಟನೆಯ್ ಭೂಲ್ ಭುಲೈಯಾ-2 ಕೂಡ ಒಂದು. ಈ ಸಿನಿಮಾದ ಸಕ್ಸಸ್ ಬಳಿಕ ಕಾರ್ತಿಕ್ ಮತ್ತೆ ಫ್ರೆಡ್ಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಡಿಸೆಂಬರ್ 2ರಿಂದ ಫ್ರೆಡ್ಡಿ ಸಿನಿಮಾ ಸ್ಟ್ರೀಮಿಂಗ್ ಪ್ರಾರಂಭಿಸಿದೆ. ಅಂದಹಾಗೆ ಕಾರ್ತಿಕ್ ಆರ್ಯನ್ ವೈಯಕ್ತಿಕ ವಿಚಾರಕ್ಕೆ ಸದ್ದಿಯಾಗಿದ್ದು ತೀರ ಅಪರೂಪ. ಸಾರಾ ಅಲಿ ಖಾನ್ ಮತ್ತು ಕೃತಿ ಸನೊನ್ ಜೊತೆ ಕಾರ್ತಿಕ್ ಆರ್ಯನ್ ಹೆಸರು ಥಳಕು ಹಾಕಿಕೊಂಡಿತ್ತು. ಅದು ಬಿಟ್ಟರೆ ಕಾರ್ತಿಕ್ ಆರ್ಯನ್ ಹೆಚ್ಚಾಗಿ ವಿವಾದಗಳಲ್ಲಿ ಸಿಲುಕಿಕೊಂಡಿಲ್ಲ. 

ಇದೀಗ ಕಾರ್ತಿಯನ್ ಆರ್ಯನ್ ಮದುವೆ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಸದ್ಯದಲ್ಲೇ ಕಾರ್ತಿಕ್ ಆರ್ಯನ್ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಕಾರ್ತಿಕ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.  ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್ ಆರ್ಯನ್ ಮದುವೆ ಬಗ್ಗೆ ಮಾತನಾಡಿದ್ದಾರೆ. ತನ್ನ ಮದುವೆ ಬಗ್ಗೆ ಕುಟುಂಬದಿಂದನೂ ಯಾವುದೇ ಒತ್ತಡ ಇಲ್ಲ ಹಾಗಾಗಿ ಸದ್ಯದಲ್ಲೇ ಮದುವೆ ಇಲ್ಲ ಸ್ವಷ್ಟಪಡಿಸಿದ್ದಾರೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಮದುವೆ ಆಗಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ. 'ನಾನು ಸದ್ಯ ನನ್ನ ಕೆಲಸದ ಕಡೆ ಮಾತ್ರ ಗಮ ಹರಿಸಿದ್ದೀನಿ. ಅದೃಷ್ಟವಶಾತ್, ಅವರಿಂದ (ಕುಟುಂಬದವರಿಗೆ) ಇನ್ನೂ ಯಾವುದೇ ಒತ್ತಡವಿಲ್ಲ. ನನ್ನ ಜೀವನದಲ್ಲಿ ಪ್ರೀತಿಗೆ ಖಂಡಿತವಾಗಿಯೂ ಅವಕಾಶವಿದೆ' ಎಂದು ಕಾರ್ತಿಕ್ ಹೇಳಿದರು.

ಕಾರ್ತಿಕ್ ಆರ್ಯನ್ ಲಿಂಕಪ್ ವದಂತಿ 

ನಟ ಕಾರ್ತಿಕ್ ಆರ್ಯನ್ ಬಾಲಿವುಡ್ ನಟಿ, ಸೈಫ್ ಅಲಿ ಖಾನ್ ಮಗಲು ಸಾರಾ ಅಲಿ ಖಾನ್ ಜೊತೆ ಸಂಬಂಧದಲ್ಲಿ ಇದ್ದರೂ ಎನ್ನುವ ಸುದ್ದಿ ಕೇಳಿಬಂದಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಾಲಿವುಡ್ ನಲ್ಲಿ ಹರಿದಾಡಿತ್ತು. ಇಬ್ಬರೂ ಲವ್ ಆಜ್ ಕಲ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ 2022ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದ ಪ್ರಾರಂಭದಲ್ಲಿ ಇಬ್ಬರೂ ತುಂಬಾ ಆಪ್ತರಾಗಿದ್ದರು. ಆದರೆ ಸಿನಿಮಾ ರಿಲೀಸ್ ಆಗುವ ಮೊದಲೇ ಇಬ್ಬರೂ ಬೇರೆ ಬೇರೆ ಆಗುವ ಮೂಲಕ ಅಚ್ಚರಿ ಮೂಡಿಸಿದರು.

ಹೃತಿಕ್‌ ರೋಷನ್‌ ಕಸಿನ್‌ ಜೊತೆ ಸಂಬಂಧದ ಬಗ್ಗೆ ಬಾಯಿಬಿಟ್ಟ ಕಾರ್ತಿಕ್‌ ಆರ್ಯನ್‌

ಕೃತಿ ಸನೊನ್ ಜೊತೆ ಕಾರ್ತಿಕ್ ಡೇಟಿಂಗ್?

ಸಾರಾ ಅಲಿ ಖಾನ್ ಮಾತ್ರವಲ್ಲದೇ ಬಾಲಿವುಡ್ ನ ಮತ್ತೋರ್ವ ಖ್ಯಾತ ನಟಿ ಕೃತಿ ಸನೊನ್ ಜೊತೆಯೂ ಕಾರ್ತಿಕ್ ಹೆಸರು ಕೇಳಿಬಂದಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಸಾರಾ ಜೊತೆ ಬ್ರೇಕಪ್ ಮಾಡಿಕೊಂಡ ಕಾರ್ತಿಕ್ ಕೃತಿ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಇತ್ತೀಚಿಗೆ ಕೃತಿ ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅಷ್ಟೆಯಲ್ಲದೆ ಇಬ್ಬರೂ ಮದುವೆ ಸಹ ಆಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಪ್ರಭಾಸ್ ಜೊತೆ ಮದುವೆ ವಿಚಾರವನ್ನು ಕೃತಿ ತಳ್ಳಿ ಹಾಕಿದರು. ಕಾರ್ತಿಕ್ ಜೊತೆಗಿನ ವದಂತಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಐದು ವರ್ಷಗಳಲ್ಲಿ ಸುಮಾರು ಹಿಟ್‌ ಸಿನಿಮಾ ನೀಡಿರುವ ಕಾರ್ತಿಕ್ ಆರ್ಯನ್!

ಕಾರ್ತಿಕ್ ಆರ್ಯನ್ ಸದ್ಯ ಶೆಹಜಾದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಟಾಲಿವುಡ್‌ನ ಸೂಪರ್ ಹಿಟ್ ಅಲಾ ವೈಕುಂಠಪುರಮುಲು ಸಿನಿಮಾದ ರಿಮೇಕ್ ಆಗಿದೆ. ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಟಿಸಿದ್ದ ಸಿನಿಮಾದಲ್ಲಿ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಕೃತಿ ನಾಯಕಿಯಾಗಿ ಮಿಂಚಿದ್ದಾರೆ.  
ಈ ಸಿನಿಮಾ ಫೆಬ್ರವರಿ 10, 2023 ರಂದು ರಿಲೀಸ್ ಆಗುತ್ತಿದೆ. ಇನ್ನು ಉಳಿದಂತೆ ಆಶಿಕಿ -3, ಸತ್ಯ ಪ್ರೇಮ್ ಕೀ ಕತಾ, ಹೆರಾ ಫೇರಿ 3 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  

   
  

Follow Us:
Download App:
  • android
  • ios