ಸುಮಾರು 35ಕ್ಕೂ ಹೆಚ್ಚು ಧಾರಾವಾಹಿ ಹಾಗೂ 100ಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಮಿಂಚಿರುವ ನಟ ಶಹಬಾಜ್‌ ಖಾನ್‌ (53) ವಿರುದ್ಧ ಯವತಿಯೊಬ್ಬಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ. ಈ ಸಂಬಂಧ ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಖಾನ್‌ ವಿರುದ್ಧ ಸೆಕ್ಷನ್‌ 354 ಮತ್ತು 509 ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ಶುರು ಮಾಡಿದ್ದು, ಇನ್ನೂ ಶಹಬಾಜ್‌ ಅವರನ್ನು ವಶಕ್ಕೆ ಪಡೆದುಕೊಂಡಿಲ್ಲ ಎನ್ನಲಾಗಿದೆ. 

ಕಿಚ್ಚನ 'ಪೈಲ್ವಾನ್‌' ನೃತ್ಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

ಪದ್ಮಭೂಷಣ ಪುರಸ್ಕೃತ ಶಾಸ್ತ್ರೀಯ ಸಂಗಿತ ಗಾಯಕ ಉಸ್ತಾದ್‌ ಅಮೀರ್‌ ಖಾನ್‌ ಅವರ ಪುತ್ರ ಶಹಬಜ್‌ ಖಾನ್‌ ಅವರ ಮೊದಲ ಹೆಸರು ಹೈದರ್‌ ಖಾನ್‌. ಯುಗ್‌, ದಿ ಗ್ರೇಟ್‌ ಮರಾಠಾ, ತೆನಾಲಿ ರಾಮ ಹಾಗೂ ಮುಂತಾದ ಟಿವಿ ಶೋಗಳಲ್ಲೂ ಮಿಂಚುತ್ತಿದ್ದಾರೆ.