Asianet Suvarna News Asianet Suvarna News

ದರ್ಶನ್ ಹುಟ್ಟುಹಬ್ಬ ಹಿನ್ನೆಲೆ; ದಾಸನ ನಿವಾಸಕ್ಕೆ ಪಾದಯಾತ್ರೆ ಆರಂಭಿಸಿದ ಅಭಿಮಾನಿ

ಫೆ.16 ರಂದ ದಾಸ ದರ್ಶನ ಬರ್ತಡೇ ಆಚರಿಸಿಕೊಳ್ಳುತ್ತಿದ್ದು, ರಾಜ್ಯಾದ್ಯಂತ ದರ್ಶನ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ರಾಯಚೂರಿನಿಂದ ದರ್ಶನ್ ಅಭಿಮಾನಿಯೊಬ್ಬ ಹುಟ್ಟುಹಬ್ಬದ ಹಿನ್ನೆಲೆ ಹುಟ್ಟೂರಿನಿಂದ ದರ್ಶನ ನಿವಾಸಕ್ಕೆ 

February 16 is Darshan's birthday A fan who went on a hike from hometown Lingasur rav
Author
First Published Feb 6, 2024, 9:19 AM IST

ರಾಯಚೂರು (ಫೆ.6) ದೇವರ ಮೇಲಿನ ಭಕ್ತಿಯಿಂದಲೋ, ಹರಕೆ ತೀರಿಸಲೋ ಭಕ್ತರು ಕಾಶಿ, ಅಯೋಧ್ಯೆ, ಶ್ರೀಶೈಲ ಫಂಡರಾಪುರಕ್ಕೆ ವಾರ, ತಿಂಗಳ ಕಾಲ ಪಾದಯಾತ್ರೆ ಮಾಡಿ ದರ್ಶನ ಪಡೆಯುವುದು ನೋಡಿದ್ದೀರಿ. ಆದರೆ ಇಲ್ಲೊಬ್ಬ ಅಭಿಮಾನಿ ನಟ ದರ್ಶನ ಹುಟ್ಟು ಹಬ್ಬದ ಹಿನ್ನೆಲೆ ನೆಚ್ಚಿನ ನಟನ ನಿವಾಸಕ್ಕೆ ಹುಟ್ಟೂರಿನಿಂದ ಪಾದಯಾತ್ರೆ ಹೊರಟಿದ್ದಾನೆ.

ಹೌದು, ಇದೇ ಫೆ.16ರಂದು ದರ್ಶನ ಹುಟ್ಟು ಹಬ್ಬ. ಪ್ರತಿವರ್ಷ ಅಭಿಮಾನಿಗಳಿಂದ ಅದ್ದೂರಿಯಾಗಿ ಹಬ್ಬದಂತೆ ಆಚರಿಸಲಾಗುತ್ತದೆ. ಹುಟ್ಟು ಹಬ್ಬ ಫೆ.16ರಂದು. ಆದರೆ ತಿಂಗಳ ಮೊದಲೇ ಸಿದ್ಧತೆಗಳು ನಡೆಯುತ್ತವೆ. ಈ ಬಾರಿ ಹುಟ್ಟುಹಬ್ಬದ ಜೊತೆಗೆ ಕಾಟೇರಾ ಸಿನಿಮಾ ಸಕ್ಸಸ್ ಸೇರಿ ದೊಡ್ಡ ಹಬ್ಬವೇ ಆಗಲಿದೆ. ಇನ್ನೇನು ಕೇವಲ 7ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ದರ್ಶನ ಹುಟ್ಟುಹಬ್ಬಕ್ಕೆ ರಾಜ್ಯಾದ್ಯಂತ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಹರಿದುಬರಲಿದ್ದದಾರೆ. ಕೆಲವು ಅಭಿಮಾನಿಗಳು ದರ್ಶನ್‌ ಮೇಲಿನ ಅಭಿಮಾನದಿಂದ ಕಾಲ್ನಡಿಗೆಯಲ್ಲಿ ದೂರದ ಊರುಗಳಿಂದ ಬೆಂಗಳೂರಿನತ್ತ ಬರುತಿದ್ದಾರೆ.

ದರ್ಶನ್ ಮುಂದಿನ ಸಿನಿಮಾ 'ಡೆವಿಲ್ ದಿ ಹೀರೋ'ಗೆ ಕರಾವಳಿ ಬೆಡಗಿ ನಾಯಕಿ!

ನಟ ದರ್ಶನ್‌ರ ಕಟ್ಟಾ ಅಭಿಮಾನಿಯಾಗಿರುವ ಭದ್ರಿ(ವೀರಭದ್ರಪ್ಪ) ಪಾದಯಾತ್ರೆ ಪಾದಯಾತ್ರೆ ಆರಂಭಿಸಿದ್ದಾರೆ. ಗುರುಗುಂಟಾ ಅಮರೇಶ್ವರ ದೇವರಿಗೆ ವಿಶೇಷ ಸಲ್ಲಿಸಿ ಪಾದಯಾತ್ರೆ ಆರಂಭಿಸಿರುವ ಅಭಿಮಾನಿ. ಹುಟ್ಟುಹಬ್ಬದ ದಿನದಂದು ದರ್ಶನ್‌ರ ನಿವಾಸಕ್ಕೆ ತೆರಳಿ ಶುಭಕೋರಲಿರುವ ಅಭಿಮಾನಿ. ಭದ್ರಿ  ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಗೌಡೂರು ಗ್ರಾಮದವರಾಗಿದ್ದಾರೆ. ವೀರಭದ್ರಪ್ಪ ಒಬ್ಬ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ. ನಟ ದರ್ಶನ್‌ರ ಬಗ್ಗೆ ಎಲ್ಲಿಲ್ಲದ ಅಭಿಮಾನ. ಈ ಅಭಿಮಾನದಿಂದಲೇ ಈ ಬಾರಿ ಪಾದಯಾತ್ರೆ ಮಾಡಿ ದರ್ಶನ್‌ ಹುಟ್ಟಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಪಾದಯಾತ್ರೆ ಆರಂಭಿಸಿದ್ದಾರೆ. 

Follow Us:
Download App:
  • android
  • ios