ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಕರೀನಾ ಕಪೂರ್ ಸೇರಿ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಫ್ಯಾಷನ್ ಡಿಸೈನರ್ ಆಗಿರುವ ಸ್ವಪ್ನಿಲ್ ಶಿಂಧೆ 2021ರಲ್ಲಿ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. 

ಹೌದು, ಸ್ವಪ್ನಿಲ್ ಲಿಂಗ ಬದಲಾಯಿಸಿಕೊಂಡಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮೆಲ್ಲಾ ಸೋಷಿಯಲ್ ಮೀಡಿಯಾ ಖಾತೆಗಳ ಹೆಸರು ಬದಲಾಯಿಸಿದ್ದಾರೆ. ಇಷ್ಟು ದಿನಗಳ ಕಾಲ ಸ್ವಪ್ನಿಲ್ ಶಿಂಧೆ ಆಗಿದ್ದವರು ಈಗ ಸೈಶಾ ಶಿಂಧೆ ಎಂದು ಕರೆಸಿಕೊಳ್ಳಲಿದ್ದಾರೆ.

ಸ್ವಪ್ನಿಲ್ ಪೋಸ್ಟ್:
'ನಮ್ಮ ಮೂಲ ಕೆದಕಲು ಹೋದರೆ ಬಾಲ್ಯದ ವಿಚಾರಗಳು ತೆರೆದುಕೊಳ್ಳುತ್ತವೆ. ನನಗೆ ಜ್ಞಾಪಕ ಬರುವುದು ಆ ಒಂಟಿತನ, ನಾನು ಹೇಗೆ ಬೆಳೆಯುತ್ತಿರುವೆ ಎಂದು ತಿಳಿಯದ ಗೊಂದಲ,'ಎಂದು ಹೇಳುವ ಮೂಲಕ ಸ್ವಪ್ನಿಲ್ ಪೋಸ್ಟ್ ಶುರು ಮಾಡಿದ್ದಾರೆ.

ಮೊದಲ ಕಾರು ಕೊಂಡಾಗ ಸಾಥ್ ನೀಡಿದ್ದ ರಕ್ಷಿತ್, ಇದೀಗ ಮತ್ತೊಂದು ಐಷಾರಾಮಿ ಕಾರು ಕೊಂಡ ರಶ್ಮಿಕಾ 

'ನನ್ನ ಶಾಲೆ ಹಾಗೂ ಕಾಲೇಜ್‌ನಲ್ಲಿದ್ದಾಗ ನಾನು ನಾರ್ಮಲ್‌ ಹುಡುಗರಿಗಿಂತ ತುಂಬಾನೇ ಡಿಫರೆಂಟ್‌ ಎಂದು ಬೇರೆ ಹುಡುಗರು ಹೇಳುತ್ತಿದ್ದರು. ಆದರೆ ನನ್ನೊಳಗೆ ಆಗುತ್ತಿದ್ದ ನೋವು ನನಗೆ ಮಾತ್ರ ಗೊತ್ತಾಗುತ್ತಿತ್ತು. ನನಗೆ ಉಸಿರು ಕಟ್ಟುವಂತಾಗುತ್ತಿತ್ತು. ನಾನು ನಾನಾಗಿರುತ್ತಿರಲಿಲ್ಲ. ನಮ್ಮ ಸಮಾಜ ವಿಧಿಸಿರುವ ನಿರ್ಬಂಧಗಳ ನಡುವೆ ನಾನು ಬದುಕ ಬೇಕಿತ್ತು. NIFTನಲ್ಲಿ ಓದುವಾಗ ನನಗೆ 20 ವಯಸ್ಸು. ಆಗ ನನ್ನನ್ನು ನಾನು ಒಪ್ಪಿಕೊಳ್ಳಲು ಶುರು ಮಾಡಿದೆ,' ಎಂದು ಸ್ವಪ್ನಿಲ್ ಬರೆದುಕೊಂಡಿದ್ದಾರೆ.

ವೇದಿಕೆ ಮೇಲೆ ನಟಿ ನಿಧಿ ಜತೆ ಅಸಭ್ಯ ವರ್ತನೆ: ನಿರ್ದೇಶಕನ ವಿಡಿಯೋ ವೈರಲ್! 

'ನಾನು ಸಲಿಂಗಿಯಾಗಿದ್ದೆ. ಹುಡುಗಿಯರೆಡೆಗೆ ಆಕರ್ಷಿತನಾಗಬೇಕಿದ್ದ ನಾನು ಹುಡಗರಿಕೆಗ ಆಕರ್ಷಿತನಾಗುತ್ತಿದ್ದೆ. ಈಗ್ಗೆ ಆರು ವರ್ಷಗಳ ಹಿಂದೆ ನನನ್ನು ನಾನು ಸ್ವೀಕರಿಸಿದೆ, ಇದುವರೆಗೆ ನನ್ನನ್ನು ಒಪ್ಪಿಕೊಂಡಿರುವ ನೀವು ಈಗಲೂ ಒಪ್ಪಿಕೊಳ್ಳುತ್ತೀರಿ ಅಲ್ವಾ? ನಾನು Gay ಮ್ಯಾನ್ ಅಲ್ಲ. ನಾನು Transwoman,' ಎಂದು ಹೇಳಿ ಕೊಂಡಿದ್ದಾರೆ.