ರಣವೀರ್ ಸಿಂಗ್‌ನ ಹೊಸ ಸ್ಟೈಲ್ ಈಗ ವೈರಲ್ ಆಗಿದೆ. ಚಂದದ ಎರಡೆಳೆ ಮುತ್ತಿನ ಹಾರ ಧರಿಸಿದ ರಣವೀರ್ ಸಿಂಗ್ ಫೋಟೋ ಏನೋ ಚೆನ್ನಾಗಿ ಬಂದಿದೆ. ಆದ್ರೆ ನೆಟ್ಟಿಗರು ಸುಮ್ನೆ ಬಿಡ್ತಾರಾ ಹೇಳಿ..

ಅರೆ ನೀವು ದೀಪಿಕಾ ಪಡುಕೋಣೆ ಅವರ ಹಾರ ತಗೊಂಡ್ರಾ..? ಅವರ ಜ್ಯುವೆಲ್ ಬಾಕ್ಸ್‌ನಿಂದ ಆರಿಸಿದ್ದಾ ಇದು..? ಎಂದು ಒಂದರ ಹಿಂದೊಂದು ಪ್ರಶ್ನೆ ಕೇಳಿದ್ದಾರೆ. ರಣವೀರ್ ಸಿಂಗ್ ಬಿಳಿ ಬಣ್ಣದ ಟೀಶರ್ಟ್ ಹಾಕಿ, ಮುತ್ತಿನ ಹಾರ ಮತ್ತು ವಜ್ರದ ಕಿವಿಯೋಲೆ ಧರಿಸಿದ್ದಾರೆ. ಇದಕ್ಕೆ ಫಂಕಿ ಫಂಕಿ ಗ್ಲಾಸ್, ಬೇಸ್‌ಬಾಲ್ ಕ್ಯಾಪ್ ಕೂಡಾ ಧರಿಸಿದ್ದಾರೆ.

ರಚಿತಾ ರಾಮ್ ಕಾರ್ಟೂನ್ ಬಂದ್ರೆ ಹೇಗಿರುತ್ತೆ..? ಡಿಂಪಲ್ ಕ್ವೀನ್ ಲುಕ್ ನೋಡಿ

ಈ ಫೋಟೋವನ್ನು ನಟನ ಬಾಲ್ಕನಿಯಲ್ಲಿ ಮತ್ತು ಸಮುದ್ರದ ಹಿನ್ನೆಲೆ ಇರೋ ಕಡಲತೀರದ ತೆಗೆದುಕೊಳ್ಳಲಾಗಿದೆ. 1958 ರ ಚಲನಚಿತ್ರ "ಮಧುಮತಿ" ಸಿನಿಮಾದ "ಸುಹಾನಾ ಸಫರ್ ಔರ್ ಯೆ ಮೌಸಮ್ ಹಸಿ" ಹಾಡಿನಿಂದ ಕೆಲವು ಸಾಲುಗಳನ್ನು ಆರಿಸಿಕೊಂಡು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಹಾಡಲ್ಲಿ ದಿಲೀಪ್ ಕುಮಾರ್ ಮತ್ತು ವೈಜಯಂತಿಮಾಲಾ ನಟಿಸಿದ್ದರು.

ಈ ಪೋಸ್ಟ್ ಹಾಕಿದ್ದೇ ತಡ, ಫ್ಯಾನ್ಸ್ ಸಿಕ್ಕಾಪಟ್ಟೆ ಕಮೆಂಟ್ ಮಾಡಿದ್ದಾರೆ. ಬಹುಶಃ ದೀಪಿಕಾ ತಮ್ಮ ಮಾಲೆ ಹುಡುತ್ತಿರಬಹುದು ಎಂದಿದ್ದಾರೆ ಒಬ್ಬರು. ದೀಪಿಕಾಳ ಮಾಲೆಯಾ..? ಎಂದಿದ್ದಾರೆ ಇನ್ನೊಬ್ಬರು. ಒಬ್ಬರು ದೀಪಿಕಾಳ ಮಾಲೆ ತೆಗ್ಯಪ್ಪಾ ಎಂದಿದ್ದರೆ ಇನ್ನೊಬ್ಬರು ದೀಪಿಕಾಳ ಇಯರಿಂಗ್ಸ್ ತೆಗಿರಿ ಎಂದಿದ್ದಾರೆ. 
ರಣವೀರ್ 83 ಸಿನಿಮಾದಲ್ಲಿ ಕಾಣಸಿಕೊಳ್ಳಲಿದ್ದು, ಕಪಿಲ್ ದೇವ್ ಪಾತ್ರ ಮಾಡಲಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಕೂಡಾ ನಟಿಸಲಿದ್ದಾರೆ.