ಹತ್ತಾರು ಜಿರಲೆ ಇರೋ ಕೋಣೆಯಲ್ಲಿ ಕೂಡಿಹಾಕಿದ್ರೆ ನಾನು ಸತ್ತೇ ಹೋಗ್ತೇನೆ! ಸೋನು ನಿಗಮ್​ ಮಾತಲ್ಲೇ ಕೇಳಿ...

ಜಿರಲೆ ಕಂಡರೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್​ ಅವರಿಗೆ ವಿಪರೀತ ಭಯವಂತೆ. ಅದ್ಯಾಕೆ ಎಂದು ಅವರ ಬಾಯಲ್ಲೇ ಕೇಳಿ... 
 

Famous playback singer Sonu Nigam is very scared when he sees a cockroach suc

ಜಿರಲೆ... ಈ ಹೆಸ್ರು ಕೇಳಿದ್ರೆ ಸಾಕು ಹೆಚ್ಚಿನವರು ಅದರಲ್ಲಿಯೂ ಹೆಚ್ಚಾಗಿ ಹಲವು ಮಹಿಳೆಯರು ಹೌಹಾರುವುದು ಉಂಟು. ಜಿರಲೆ ಕಂಡರೆ ಭಯ ಪಡುವ ದೊಡ್ಡ ವರ್ಗವೇ ಇದೆ.  ಅಷ್ಟಕ್ಕೂ ಮನೆಯಲ್ಲಿ ಜಿರಲೆಗಳು ಇದ್ದರೂ ಅದು ಒಳ್ಳೆಯದಲ್ಲ.  ಕಾಯಿಲೆ ಕೂಡ ಹೆಚ್ಚಾದಂತೆ ಎಂದು ಹೇಳುತ್ತಾರೆ. ಸುಮಾರು 70 ದಶಲಕ್ಷ ವರ್ಷಗಳ ಹಿಂದೆ ಜಿರಳೆಗಳು ಪರಮಾಣು ಸ್ಫೋಟದಿಂದ ಬದುಕುಳಿದ ಏಕೈಕ ಜೀವಿಗಳು ಎಂದು ನಂಬಲಾಗಿದೆ. ಅದು ಪವರ್​ಫುಲ್​ ಈ ಕೀಟ. ಜಿರಲೆ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆ ಎಂದರೆ, ಸಂಗೀತ ಮಾಂತ್ರಿಕ ಸೋನು ನಿಗಮ್ ಅವರಿಗೂ ಜಿರಲೆ ಕಂಡರೆ ಭಯವಂತೆ! ಈ ಕುರಿತು ಹಿಂದೊಮ್ಮೆ ಅವರು ಕಪಿಲ್​ ಶರ್ಮಾ ಷೋನಲ್ಲಿ ಮಾತನಾಡಿದ್ದು, ಅದರ ವಿಡಿಯೋ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಜಿರಲೆ ಕಂಡರೆ ತಮಗೆ ಯಾಕೆ ಭಯ ಎಂಬ ಬಗ್ಗೆ ಸೋನು ನಿಗಮ್​ ಅವರು ರಸವತ್ತಾಗಿ ವಿವರಿಸಿ, ಅಲ್ಲಿ ನೆರೆದವರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ನಾನು ಜಿರಲೆಗೆ ಎಷ್ಟೊಂದು ಹೆದರುತ್ತೇನೆ ಎಂದರೆ ಅಷ್ಟು ದೂರದಲ್ಲಿ ಗೋಡೆಯ ಮೇಲೇನಾದರೂ ಜಿರಲೆ ಕಂಡರೆ ಇಲ್ಲಿಯೇ ಹೊರಗೆ ಓಡಿ ಹೋಗುತ್ತೇನೆ. ಜಿರಲೆ ಕಂಡರೆ ಅಷ್ಟು ಭಯ ನನಗೆ ಎಂದಿದ್ದಾರೆ. ಅದರ ಶೇಪ್​ ಕಂಡರೇನೇ ನನಗೆ ಭಯವಾಗುತ್ತದೆ. ಹಿಂದಿನ ಜನ್ಮದಲ್ಲಿ ಏನೋ ಇದ್ದಿರಬೇಕು ಗೊತ್ತಿಲ್ಲ. ಅದರೆ ನನಗೆ ಜಿರಲೆ ಬಗ್ಗೆ ಒಂದು ದುಃಸ್ವಪ್ನವಿದೆ, ಅದೇನೆಂದರೆ, ಒಂದು ವೇಳೆ   10-15 ಜಿರಲೆಗಳು ಇರುವ ಕೋಣೆಯಲ್ಲಿ ನನ್ನನ್ನೇನಾದ್ರೂ ಕೂಡಿ ಹಾಕಿದ್ರೆ ಅಲ್ಲಿಯೇ ಹಾರ್ಟ್​ ಎಟ್ಯಾಕ್​ ಆಗಿ ಸತ್ತೇ ಹೋಗ್ತೇನೆ. ಅಷ್ಟೊಂದು ಭಯ ನನಗೆ ಎಂದಿದ್ದಾರೆ. 

ಸ ರಿ ಗ ಮ ಪ... ಸೋನು ನಿಗಮ್​ ದನಿಯ ಮೋಡಿಯಲ್ಲಿ ಕಂದಮ್ಮ: ಕ್ಯೂಟ್​ ವಿಡಿಯೋ ವೈರಲ್​

ಜಿರಲೆಯ ಕಂದು ಬಣ್ಣ, ಹೀಗೆ ಹಾಗೆ ಇರುವ ಉದ್ದನೆಯ ಮೀಸೆಗಳನ್ನು ಕಂಡರೆ ಮೈಯೆಲ್ಲಾ ಝುಂ ಎನ್ನುತ್ತದೆ ಎಂದಿದ್ದಾರೆ. ಹಲ್ಲಿ ಇತ್ಯಾದಿಗಳನ್ನು ಕಂಡರೆ ಕೆಲವರಿಗೆ ಭಯ. ಅದರೆ ಹಲ್ಲಿ ಎಲ್ಲವೂ ನಮ್ಮ ಹತ್ತಿರ ಓಡಿ ಬರುವುದಿಲ್ಲವಲ್ಲ, ಅದಕ್ಕೇ ನನಗೆ ಅಂಥವುಗಳನ್ನು ಕಂಡರೆ ಭಯವಿಲ್ಲ. ಆದರೆ ಜಿರಲೆ ಹಾಗಲ್ಲ, ನೋಡು ನೋಡುತ್ತಿದ್ದಂತೆಯೇ ನಮ್ಮ ಮೇಲೆಯೇ ಹಾರಿಬಿಡುತ್ತವೆ. ಹೀಗೆ ಮೈಮೇಲೆ ಹಾರುವುದರಿಂದ ಅದನ್ನು  ಕಂಡರೆ ನನಗೆ ಆಗುವುದಿಲ್ಲ, ಅದರ ನೇಚರ್​ ನನಗೆ ಇಷ್ಟವಾಗುವುದಿಲ್ಲ ಎನ್ನುತ್ತಾ ರಸವತ್ತಾಗಿ ಆ್ಯಕ್ಷನ್​ ಮೂಲಕ ಹೇಳಿದ್ದಾರೆ ಸೋನು ನಿಗಮ್​. 

ಅಷ್ಟಕ್ಕೂ ಜಿರಲೆಯ ಬಗ್ಗೆ ಬರೆಯುತ್ತಾ ಹೋದರೆ ದೊಡ್ಡ ವೃತ್ತಾಂತವೇ ಇದೆ. ಮನುಷ್ಯರಿಗೂ ಜಿರಳೆಗಳ ಸಂಬಂಧ ತಲೆತಲಾಂತರಗಳಿಂದಲೂ ಇವೆ.  ನಮ್ಮ ಪೂರ್ವಜರು ಗುಹೆಗಳಲ್ಲಿ ವಾಸಿಸುತ್ತಿದ್ದ ಕಾಲದಿಂದಲೂ ಜಿರಲೆಯ ಸಂಬಂಧ ಮನುಷ್ಯನ ಜೊತೆಗೆ ಇದೆ. ಗುಹೆಯಿಂದ ಹಿಡಿದು ಈಗ ಗಗನಚುಂಬಿ ಕಟ್ಟಡ ಬಂದರೂ ಜಿರಲೆ ಮಾತ್ರ ಸದಾ ಮನುಷ್ಯನ ಬೆನ್ನುಹತ್ತಿಯೇ ಇವೆ. ಮನೆಗಳನ್ನು ಎಷ್ಟು ಶುಚಿಯಾಗಿ ಇಟ್ಟುಕೊಂಡರೂ, ಎಲ್ಲಿಂದಲೋ ಬಂದು ಒಂದಲ್ಲೊಂದು ಜಿರಲೆ ಸೇರಿಕೊಂಡು ಬಿಟ್ಟರೆ, ಮುಗಿದೇ ಹೋಯ್ತು, ಕೆಲವೇ ದಿನಗಳಲ್ಲಿ ಅದು ತನ್ನ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತದೆ. ಇದೇ ಕಾರಣಕ್ಕೆ,  ಜಿರಳೆಗಳು ಇರದ ಮನೆ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಸ್ಥಿತಿ ಇದೆ. ಇದೇ ವೇಳೆ ಇದನ್ನು ಕಂಡರೆ ಹೆದರುವ ದೊಡ್ಡ ವರ್ಗವೇ ಇದೆ. ಇದೀಗ ಸೋನು ನಿಗಮ್​ ಕೂಡ ಇದರ ಬಗ್ಗೆ ವಿವರಿಸಿದ್ದಾರೆ. 

ಹುಟ್ಟುಹಬ್ಬದ ದಿನ ಮಂತ್ರಾಲಯದಿಂದಲೇ ಕ್ಷಮೆ ಕೋರಿದ ನಟ ಜಗ್ಗೇಶ್: ಸಿನಿಮಾದ ಕುರಿತೂ ನಟ ಹೇಳಿದ್ದೇನು?

Latest Videos
Follow Us:
Download App:
  • android
  • ios