Dr Rajkumar Death Anniversary; ಕುಟುಂಬದವರಿಂದ ಅಣ್ಣಾವ್ರ ಸಮಾಧಿಗೆ ವಿಶೇಷ ಪೂಜೆ

ಏಪ್ರಿಲ್ 12 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. ಕನ್ನಡ ಸಿನಿಮಾ ರಂಗದ ದಂತಕಥೆ ಡಾ. ರಾಜ್ ಕುಮಾರ್ ಅವರನ್ನು ಕಳೆದುಕೊಂಡ ದಿನ. ಅಣ್ಣಾವ್ರು ಅಗಲಿ ಇಂದಿಗೆ (ಏಪ್ರಿಲ್ 12) 16 ವರ್ಷ. ಕುಟುಂಬದವರು ರಾಜ್ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Dr Rajkumar 16th death anniversary fans pay tribute to legendary actor

ಏಪ್ರಿಲ್ 12 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. ಕನ್ನಡ ಸಿನಿಮಾ ರಂಗದ ದಂತಕಥೆ ಡಾ. ರಾಜ್ ಕುಮಾರ್ (Dr Rajkumar) ಅವರನ್ನು ಕಳೆದುಕೊಂಡ ದಿನ. ಅಣ್ಣಾವ್ರು ಅಗಲಿ ಇಂದಿಗೆ (ಏಪ್ರಿಲ್ 12) 16 ವರ್ಷ. ಇಷ್ಟು ವರ್ಷಗಳು ಕಳೆದರು ಕನ್ನಡಿಗರ ಮನದಲ್ಲಿ ರಾಜ್ ಕುಮಾರ್ ಎಂದಿಗೂ ಅಜರಾಮರ.

ಸ್ಯಾಂಡಲ್ ವುಡ್ ನ ರಾಜಣ್ಣನಿಲ್ಲದೇ 16 ವರ್ಷಗಳು ಕಳೆದಿವೆ(Dr Rajkumar 16th death anniversary). 'ಮತ್ತೆ ಹುಟ್ಟಿ ಬಾ ಅಣ್ಣಾ' ಎಂಬ ಮಾತೊಂದೇ ಅಭಿಮಾನಿಗಳ ಪಾಲಿಗೆ ನಿರಂತರವಾಗಿದೆ. 'ಅಭಿಮಾನಿಗಳೇ ದೇವರು' ಎಂದು ಹೇಳಿ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ದೇವರಾಗಿ ಉಳಿದ ನಟ ಡಾ ರಾಜ್ ಕುಮಾರ್. ಭಾಷೆ, ಜಾತಿ, ಧರ್ಮ, ರಾಜಕೀಯ, ಸಿನಿಮಾ ಹೀಗೆ ಎಲ್ಲಾ ವರ್ಗದವರು ಆರಾಧಿಸಿದ ನಟ ರಾಜಕುಮಾರ್. ವರ್ಷಗಳು ಓಡುತ್ತಲೇ ಇವೆ, ಆದರೆ ಅಣ್ಣಾವ್ರ ಮೇಲಿನ ಪ್ರೀತಿ ಕೊಂಚವೂ ಮಾಸಿಲ್ಲ. ಪ್ರತಿ ವರ್ಷ ಹೆಚ್ಚಾಗುತ್ತೇ ಇದೆ. ಇಂದು ಪಣ್ಯಸ್ಮರಣೆ ದಿನ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಮತ್ತೊಮ್ಮೆ ವರನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಡಾ.ರಾಜ ಸ್ಮರಿಸುತ್ತಿದ್ದಾರೆ.

ಕುಟುಂಬದವರಿಂದ ವಿಶೇಷ ಪೂಜೆ

ಇನ್ನು ರಾಜ್ ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿ ಹಾಜರಿತ್ತು. ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಳೆದ ಮೂರು ವರ್ಷಗಳಿಂದ ಅಭಿಮಾನಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಈ ವರ್ಷ ಅಭಿಮಾನಿಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಅಭಿಮಾನಿಗಳು ಸಹ ಅಣ್ಣಾವ್ರ ಸ್ಮಾರಕ್ಕೆ ಪೂಜೆ ಸಲ್ಲಿಸಿ ಧನ್ಯರಾಗುತ್ತಿದ್ದಾರೆ.

Dr.Rajkumar: ವರನಟ ಡಾ. ರಾಜ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಕ್ಲಾಸಿಕ್​ ಚಿತ್ರಕ್ಕೆ 45 ವರ್ಷಗಳು!

ಇಂದು ಪೂಜೆ ಸಲ್ಲಿಸಿ ಮಾಧ್ಯಮದ ಜೊತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, 'ವರ್ಷಗಳ ಓಡುತ್ತವೆ ಇರುತ್ತವೆ. ಆದರೆ ಅಭಿಮಾನಿಗಳ ಪ್ರೀತಿ ಮಾತ್ರ ಹಾಗೆ ಇದೆ. ಕೊರೊನಾ ಕಾರಣದಿಂದ ಕಳೆದ ವರ್ಷ ಆಚರಣೆ ಮಾಡಲು ಆಗಿರಲಿಲ್ಲ. ಈ ವರ್ಷ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಅಭಿಮಾನಿಗಳಿಂದ ಮೊದಲು ಪೂಜೆ ಸಲ್ಲಬೇಕು' ಎಂದು ಹೇಳಿದ್ದಾರೆ.

'ಈ ಜಾಗದಲ್ಲಿ ಮೂರು ಜನ ಇದ್ದಾರೆ. ತಂದೆ, ತಾಯಿ ತಮ್ಮ. ಮೂವರು ಕಣ್ಣು ದಾನ ಮಾಡಿದ್ದಾರೆ. ಅಪ್ಪಾಜಿ ನಮ್ಮ ಜೊತೆ ಇದ್ದಾರೆ, ಅಭಿಮಾನಿಗಳಲ್ಲಿ ಇದ್ದಾರೆ. ಎಲ್ಲರೂ ಅವರ ಫ್ಯಾನ್ಸ್ ಇವರ ಫ್ಯಾನ್ಸ್ ಅಂತಾರೆ ಆದರೆ ಅಪ್ಪಾಜಿಗೆ ಮಾತ್ರ ಅಣ್ಣಾವ್ರ ಭಕ್ತರು ಎನ್ನುತ್ತಾರೆ. ಅಭಿಮಾನಿ ಮತ್ತು ಅಪ್ಪಾಜಿ ನಡುವಿನ ಪ್ರೀತಿ ಸೇತುವೆ ಹಾಗೆ. ಅದು ಹಾಗೆ ಇರುತ್ತದೆ. ಎರಡು ವರ್ಷ ನಿಂತಿದ್ದ ಪೂಜೆ ಮತ್ತೆ ಪ್ರಾರಂಭವಾಗಿದೆ. ನಾವು ಕುಟುಂಬದವರು ಮಾಡುತ್ತಿದ್ದೆವು ಆದರೆ ಅಭಿಮಾನಿಗಳಿಗೆ ಅವಕಾಶ ಇರರಿಲ್ಲ. ಈ ವರ್ಷ ಸಿಕ್ಕಿದೆ' ಎಂದು ರಾಘಣ್ಣ ಹೇಳಿದರು.

Dr Rajkumar Family: 'ಜಾತಿ, ಧರ್ಮ ಇಟ್ಕೊಂಡು ಡಾ. ರಾಜ್​ ಕುಟುಂಬ ಮಾತಾಡಲ್ಲ'

ಇನ್ನು ಶಿವರಾಜ್ ಕುಮಾರ್ ಮಾತನಾಡಿ, 'ಇಷ್ಟು ವರ್ಷಗಳು ಕಳೆಯುತ್ತಾ ಅಂತ ಬೇಸರವಾಗುತ್ತೆ. ಆದರೆ ನಮ್ ಜೊತೆನೇ ಇದ್ದಾರೆ. ಅಮ್ಮ, ಪುನೀತ್ ಎಲ್ಲಾ ಇಲ್ಲೇ ಇದ್ದಾರೆ. ಕುಟುಂಬಕ್ಕೆ ನೋವು ಜಾಸ್ತಿ ಆಗಿದೆ. ನೆನಪುಗಳನ್ನು ಜೀವಂತವಾಗಿ ಇಡುವ ಪ್ರಯತ್ನ ಪಡಬೇಕು. ನೋವಿನ ಜೊತೆಯೇ ಹೋಗುವ ಪ್ರಯತ್ನ ನಡೆಯುತ್ತಿದೆ' ಎಂದು ಭಾವುಕರಾದರು.

 

Latest Videos
Follow Us:
Download App:
  • android
  • ios