Asianet Suvarna News Asianet Suvarna News

DON-3 ಟೀಸರ್​ ಔಟ್:​ ಬಿಗ್​- ಬಿನೂ ಅಲ್ಲ, ಶಾರುಖ್​ ಖಾನೂ ಅಲ್ಲ- ಬಾಯ್ಕಾಟ್‌ ಅಂತಿದ್ದಾರೆ ಫ್ಯಾನ್ಸ್​!

ಬಹು ನಿರೀಕ್ಷಿತ ಡಾನ್​-3 ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ನಾಯಕನನ್ನು ನೋಡಿ ಅಮಿತಾಭ್​, ಶಾರುಖ್​ ಫ್ಯಾನ್ಸ್​ ನಿರಾಶರಾಗಿದ್ದಾರೆ. 
 

Don 3 teaser out fans  refuse to accept Ranveer Singh replacing ShahRukh suc
Author
First Published Aug 9, 2023, 6:23 PM IST

ಬಹು ನಿರೀಕ್ಷಿತ ಡಾನ್​-3 ಚಿತ್ರದ ಟೀಸರ್​ ರಿಲೀಸ್​ ಮಾಡಲಾಗಿದೆ. ಆದರೆ ಅಮಿತಾಭ್​ ​ ಬಚ್ಚನ್ (Amitabh Bhchchan)​ ಹಾಗೂ ಶಾರುಖ್​ ಖಾನ್​ ಫ್ಯಾನ್ಸ್​ಗೆ ಸಕತ್​ ನಿರಾಸೆಯುಂಟಾಗಿದೆ. ಕಳೆದ ಕೆಲ ದಿನಗಳಿಂದ 'ಡಾನ್- 3' ಸಿನಿಮಾ ಬಗ್ಗೆ ಚರ್ಚೆ ನಡೀತಿತ್ತು. ಪ್ರೀ ಪ್ರೊಡಕ್ಷನ್ ವರ್ಕ್ ಕೂಡ ಶುರುವಾಗಿತ್ತು. ಆದರೆ ಹೀರೊ ಯಾರು ಅನ್ನೋದು ಸ್ಪಷ್ಟವಾಗಿರಲಿಲ್ಲ.  70ರ ದಶಕದಲ್ಲಿ ಅಮಿತಾಭ್​ ಬಚ್ಚನ್​ ಡಾನ್ ಆಗಿ ತೆರೆಮೇಲೆ ದರ್ಬಾರ್ ಮಾಡಿದ್ದರು. 5 ವರ್ಷಗಳ ಬಳಿಕ ಅದರ ಸೀಕ್ವೆಲ್‌ನಲ್ಲಿ ಮತ್ತೆ ಶಾರುಖ್​ ಖಾನ್​ ನಟಿಸಿದ್ದರು. ಆದ್ದರಿಂದ ಇವರಿಬ್ಬರಲ್ಲಿ ಒಬ್ಬರು ಡಾನ್​-3ಯಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಆಗಿರುವುದೇ ಬೇರೆ. ಅಷ್ಟಕ್ಕೂ ಡಾನ್​ ಸೀಕ್ವೆಲ್​ನಲ್ಲಿ ಶಾರುಖ್​ ಖಾನ್​ ಅಭಿನಯಿಸುತ್ತಿರುವಾಗಲೇ ಅಮಿತಾಭ್​ ಫ್ಯಾನ್ಸ್​ ಬೇಸರಿಸಿದ್ದರು. ಅವರಂತೆಯೇ ಡಾನ್​ ಪಾತ್ರಕ್ಕೆ ಜೀವ ತುಂಬುವವರು ಯಾರೂ ಇಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಶಾರುಖ್​ ಖಾನ್​ ಅವರು ಈ ಪಾತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಜೀವ ತುಂಬಿದ್ದರು. ಈಗ ಪಾರ್ಟ್​-3 ಟೀಸರ್​ ನೋಡಿದಾಗ ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಕೆಲವರು ತಾವು ಈ ಚಿತ್ರವನ್ನು ನೋಡುವುದಿಲ್ಲ ಎಂದೂ ಹೇಳುತ್ತಿದ್ದಾರೆ.

ಹೌದು.  ಈಗ ಬಿಡುಗಡೆಯಾಗಿರುವ ಟೈಟಲ್‌ನಲ್ಲಿ ಹೇಳಿದಂತೆ ಡಾನ್ ಪಾತ್ರಕ್ಕೆ ರಣವೀರ್ ಸಿಂಗ್ (Ranveer Singh) ಆಯ್ಕೆಯಾಗಿದ್ದಾರೆ.   ಯಶ್, ಹೃತಿಕ್ ರೋಷನ್, ಶಾಹಿದ್​ ಕಪೂರ್ ಅವರ ಹೆಸರು ಡಾನ್​ ಪಾತ್ರಕ್ಕೆ ಕೇಳಿಬರುತ್ತಿದ್ದಾದರೂ ಈಗ  ರಣವೀರ್ ಸಿಂಗ್ 'ಡಾನ್' ಆಗಿ ನಟಿಸುವುದು ತಿಳಿದಿದೆ.  ಟೀಸರ್ ಮೂಲಕ  ಚಿತ್ರತಂಡ ಇದನ್ನು ಸ್ಪಷ್ಟಪಡಿಸಿದೆ. ಇದನ್ನು ನೋಡಿ ಹಲವರು ಬೈಕಾಟ್​ ಡಾನ್​-3 ಎನ್ನುತ್ತಿದ್ದಾರೆ. ಅಮಿತಾಭ್​ ಮತ್ತು ಶಾರುಖ್​ ಬಿಟ್ಟರೆ ಆ ಪಾತ್ರದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಅಪ್ಪ ಶಾರುಖ್​ ಜೊತೆ 120 ಕೋಟಿಯನ್ನೂ ರಿಜೆಕ್ಟ್​ ಮಾಡಿದ ಪುತ್ರ ಆರ್ಯನ್​ ಖಾನ್​?
 
ಅಂದಹಾಗೆ ಡಾನ್​-3 ಚಿತ್ರವನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ.  ರಿತೇಶ್ ಸಿದ್ವಾನಿ (Ritesh Sidwani) ಜೊತೆ ಸೇರಿ ತಮ್ಮದೇ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಇದರ  ನಿರ್ಮಾಣ ಮಾಡುತ್ತಿದ್ದಾರೆ. 'ಡಾನ್- 2' ಬಳಿಕ ಫರ್ಹಾನ್ ಅಖ್ತರ್ ಯಾವುದೇ ಸಿನಿಮಾ ನಿರ್ದೇಶನ ಮಾಡಲಿಲ್ಲ. 'ಜೀ ಲೆ ಝಾರಾ' ಸಿನಿಮಾ ಅನೌನ್ಸ್ ಆಗಿದೆ. ಇದೀಗ 'ಡಾನ್‌- 3' ಸಿನಿಮಾ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. 1978 ರಲ್ಲಿ ಅಮಿತಾಭ್ ಬಚ್ಚನ್ ಈ ಪಾತ್ರಕ್ಕೆ ಜೀವ ತುಂಬಿದ್ದರು. ಈ ಮೂಲಕ ಬಾಲಿವುಡ್‌ನಲ್ಲಿ ಈ ಪಾತ್ರ ಸಕ್ಸಸ್ ಆಗಿತ್ತು. ಡೈರೆಕ್ಟರ್ ಚಂದ್ರ ಬರೋಟ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಈ ಸಿನಿಮಾವನ್ನ ಸಲ್ಮಾನ್ ಖಾನ್ ತಂದೆ ಸಲೀಮ್ ಮತ್ತು ಫರ್ಹಾನ್ ಅಖ್ತರ್ ತಂದೆ ಜಾವೀದ್ ಅಖ್ತರ್ ಬರೆದಿದ್ದರು.

 ಇದೀಗ ಬಿಡುಗಡೆಯಾಗಿರುವ ಟೀಸರ್​ನಲ್ಲಿ,  'ಮಲಗಿರುವ ಸಿಂಹ ಯಾವಾಗ ಎಚ್ಚರಗೊಳ್ಳುತ್ತದೆ? ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುತ್ತಾರೆ. ಅಂತಹವರಿಗೆ ನಾನು ಇಲ್ಲಿದ್ದೇನೆ ಅಂತ ಹೇಳು. ನಾನು ಏನನ್ನು ಮಾಡಿದ್ದೇನೆ, ನನ್ನ ತಾಕತ್ತು ಏನು ಅನ್ನೋದನ್ನು ತೋರಿಸಲು ನಾನು ವಾಪಸ್ ಬಂದಿದ್ದೇನೆ' ಎನ್ನುವ ರಣವೀರ್​ ಸಿಂಗ್​ ಡೈಲಾಗ್​ ಇದೆ.  'ಮೆಹೂಂ ಡಾನ್' ಎಂದು ರಣ್‌ವೀರ್ ಸಿಂಗ್ ಗನ್ ಹಿಡಿದು ದರ್ಶನ ಕೊಟ್ಟಿದ್ದಾರೆ. ಟೀಸರ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.    ಟೀಸರ್ ಏನೋ ಕಲರ್ ಫುಲ್ ಆಗಿದೆ. ಆದರೆ ಅಮಿತಾಭ್​ ಬಿಟ್ಟರೆ  ಡಾನ್‌ಗೆ ಇರಬೇಕಿರೋ  ಗಟ್ಟಿ ಧ್ವನಿ ಯಾರಿಗೂ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಡಾನ್​-3ಗೆ  ನಾಯಕಿ ಯಾರು ಎಂದು ಇನ್ನೂ ಬಹಿರಂಗಗೊಂಡಿಲ್ಲ.  ಡಾನ್- 2 ಸಿನಿಮಾ ಬಂದು 12 ವರ್ಷಗಳ ಬಳಿಕ ಹೊಸ ಡಾನ್​ ಎಂಟ್ರಿಯಾಗಿದ್ದು,  ಬಾಲಿವುಡ್‌ನಲ್ಲಿ ಸಹಜವಾಗಿಯೇ ನಿರೀಕ್ಷೆ ಮೂಡಿದೆ.  

RRPK: ಶಬನಾ ಅಜ್ಮಿ- ಧರ್ಮೇಂದ್ರ ಸುದೀರ್ಘ ಚುಂಬನ: ಪತ್ನಿ ಹೇಮಾಮಾಲಿನಿ ಪ್ರತಿಕ್ರಿಯೆ ಏನು?

 

 
 
 
Latest Videos
Follow Us:
Download App:
  • android
  • ios