ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಬಾಲಿವುಡ್‌ನ ಕ್ಯೂಟ್ ಜೋಡಿ. ಇಬ್ಬರಿಗೂ ದೊಡ್ಡ ಫ್ಯಾನ್ಸ್ ಬೇಸ್ ಇದೆ. ಫ್ಯಾನ್ಸ್‌ಗೆ ಈ ಜೋಡಿ ಅಂದ್ರೆ ಎಷ್ಟು ಇಷ್ಟ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ

ಕ್ಯೂಟ್ ಜೋಡಿ ನೋಡಿ ಪ್ರೇರೇಪಿತವಾಗಿ ತಯಾರಾದ ಡಾಲ್‌ಗಳು ಎಷ್ಟು ಮುದ್ದಾಗಿವೆ ನೋಡಿ. ದೀಪಿಕಾ ಹಾಗೂ ರಣವೀರ್ ಮದುವೆ ರಿಸೆಪ್ಶನ್ ಲುಕ್‌ನಲ್ಲಿ ಇರೋ ಡಾಲ್ ಫೋಟೋ ವೈರಲ್ ಆಗಿದೆ.

ಹೋಟೆಲ್‌ ಬಿಲ್‌ ಕೊಡೋಕೆ ಹೇಳಿದ ಸಿದ್ಧಾರ್ಥ್ ಮಲ್ಯ; ಈ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡ್ರಾ ದೀಪಿಕಾ?

ರಣವೀರ್ ಬಗ್ಗಿ ನಿಂತು ದೀಪಿಕಾ ಸೆರಗನ್ನು ಬಿಡಿಸಿ ಸರಿ ಮಾಡುವ ಫೋಟೋ ಅವರ ರಿಸೆಪ್ಶನ್ ಟೈಂನಲ್ಲಿ ವೈರಲ್ ಆಗಿತ್ತು. ಇದೀಗ ಇದೇ ಮಾದರಿಯ ಡಾಲ್‌ಗಳು ಸಿದ್ಧವಾಗಿದೆ. ಸೆಲೆಬ್ರಿಟಿ ಜೋಡಿಯ ರಿಸೆಪ್ಶನ್ ಬೆಂಗಳೂರಿನಲ್ಲಿ ನಡೆದಿತ್ತು. 

ಒರಿಜಿನಲ್ ಫೋಟೋದಲ್ಲಿ ದೀಪಿಕಾ ಧರಿಸಿದ ಆಭರಣ, ಸೀರೆ, ರಣವೀರ್ ಹೇರ್‌ಸ್ಟೈಲ್ ಎಲ್ಲವೂ ಸೇಮ್ ಟು ಸೇಮ್. 2018ರಲ್ಲಿ ಬೆಂಗಳೂರಿನಲ್ಲಿ ನಡೆದ ರಿಸೆಪ್ಶನ್‌ಗೆ ನಟಿ ದೀಪಿಕಾ ಸಬ್ಯಸಾಚಿ  ಡಿಸೈನ್ ಸಾರಿಯಲ್ಲಿ ಮಿಂಚಿದ್ದರು. ರೋಹಿತ್ ಬಾಲ್ ರಣವೀರ್‌ನ ಬಂಧಾಗಲಾ ಡಿಸೈನ್ ಮಾಡಿದ್ದರು.

ಕಂಗನಾ To ದೀಪಿಕಾ: ಕಾಲೇಜು ಮೆಟ್ಟಿಲು ಹತ್ತದ ಬಾಲಿವುಡ್‌ನ ಸ್ಟಾರ್‌ಗಳಿವರು

ಈ ಮೊದಲು ದೀಪಿಕಾಳ ಪದ್ಮಾವತ್ ಲುಕ್‌ನ ಡಾಲ್ ವೈರಲ್ ಆಗಿತ್ತು. ದೀಪಿಕಾ ಹಾಗೂ ರಣವೀರ್ 2018ರಲ್ಲಿ ದಕ್ಷಿಣ ಭಾರತದ ಕೊಂಕಣಿ ಸಂಪ್ರದಾಯದಂತೆ ವಿವಾಹಿತರಾಗಿದ್ದರು. ಹಾಗೆಯೇ ಉತ್ತರ ಭಾರತ ಶೈಲಿಯ ವಿವಾಹವೂ ನಡೆದಿತ್ತು.

 
 
 
 
 
 
 
 
 
 
 
 
 
 
 

A post shared by Deepika Padukone (@deepikapadukone) on Nov 21, 2018 at 6:04am PST

ಇಟಲಿ ಲೇಕ್‌ ಕೊಮೊನಲ್ಲಿ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಕೂಡಾ ನಡೆದಿತ್ತು. ಇವರಿಬ್ಬರೂ 2013ರಲ್ಲಿ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಗೋಲಿಯೋಂಕ ರಾಸ್‌ ಲೀಲ-ರಾಮ್‌ಲೀಲಾ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು.

ನಂತರ ಬಾಜಿರಾವ್ ಮಸ್ತಾನಿ ಹಾಗೂ ಪದ್ಮಾವತ್‌ನಲ್ಲಿಯೂ ಜೋಡಿಯಾದರು. ಈ ಜೋಡಿ ಕಬೀರ್ ಖಾನ್‌ ಅವರ 83ಯಲ್ಲಿ ಕಾಣಿಸಿಕೊಳ್ಳಲಿದ್ದು, ರಣವೀರ್ ಕಪಿಲ್ ದೇವ್ ಆಗಿ ಹಾಗೂ ದೀಪಿಕಾ ಕಪಿಲ್ ಪತ್ನಿ ರೋಮಿ ಭಾಟಿಯಾ ಆಗಿ ಕಾಣಿಸಿಕೊಳ್ಳಲಿದ್ದಾರೆ.