ಲತಾ ಮಂಗೇಶ್ಕರ್ ಲೋಕವೇ ಬಲ್ಲ ಹೆಸರು. ಐವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಮುಖ್ಯವಾಗಿ ಹಿಂದಿಯಲ್ಲಿ, ಭಾರತದ ಇತರ ಭಾಷೆಗಳಲ್ಲೂ ಹಾಡಿದ್ದಾರೆ. ಅವರ ಹಾಡುಗಳು ಇಂದು ಭಾರತದ ಎಲ್ಲ ಗಾಯಕರಿಗೂ ಗಾಯಕಿಯರಿಗೂ ಸ್ಫೂರ್ತಿ. ಈಕೆ ಲಿವಿಂಗ್‌ ಲೆಜೆಂಡ್. ಈಗಲೂ ಹಾಡಬಲ್ಲರು. ಅವರ ಧ್ವನಿಯಲ್ಲಿ ಮೊದಲಿನ ಮಾಧುರ್ಯ ಉಳಿದಿಲ್ಲವಾದರೂ ಈಗಲೂ ಕೇಳಿದರೆ ಹಾಡಬಲ್ಲರು. ಯೌವನದ ಕಾಲದಲ್ಲಿ ಅವರು ಇಲ್ಲದೆ ಹಿಂದಿಯ ಚಿತ್ರಗಳೇ ಇರುತ್ತಿರಲಿಲ್ಲ. ಈಕೆಯ ಧ್ವನಿಯಿಂದಲೇ ಚಲನಚಿತ್ರಗಳು ಪಾಪ್ಯುಲರ್ ಆಗುತ್ತಿದ್ದವು. 

ಇಂಥ ಜನಪ್ರಿಯ ಗಾಯಕಿ, ಹಾಡುಗಾರ್ತಿಗೂ ಹಿಂದೊಮ್ಮೆ ವಿಷ ಉಣಿಸಲಾಗಿತ್ತು ಎಂದರೆ ನಂಬುತ್ತೀರಾ? ಹೌದು. ಆಗ ಲತಾ ದೀದಿಗೆ 33 ವರ್ಷ. ಈಕೆಯ ಹಾಡುಗಳು ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದ್ದವು. ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು ತಮ್ಮ ಚಿತ್ರಕ್ಕೆ ಈಕೆಯೇ ಬೇಕು ಎಂದು ಬಯಸಿ ಈಕೆಯ ಮನೆಯ ಮುಂದೆ ಸಾಲುಗಟ್ಟುತ್ತಿದ್ದರು. ಆಗ ಒಮ್ಮೆ ಈಕೆಗೆ ಸಿಕ್ಕಾಪಟ್ಟೆ ಹೊಟ್ಟೆನೋವು ಆರಂಭವಾಯಿತು. ಜೋರಾಯಿತು. ನಾಲ್ಕಾರು ಬಾರಿ ವಾಂತಿಯೂ ಆಯಿತು. ಹಸಿರು ಬಣ್ಣದ ವಾಂತಿ. ದೀದಿಯನ್ನು ಆಸ್ಪತ್ರೆಗೆ ಒಯ್ಯಲಾಯಿತು. ಡಾಕ್ಟರ್ ದೀದಿಗೆ ವಿಷ ಉಣಿಸಲಾಯಿತು ಎಂದು ಘೋಷಿಸಿದರು. ಕರುಳಿಗೆ ತುಂಬಾ ಡ್ಯಾಮೇಜ್ ಆಗಿತ್ತು. ಡಾಕ್ಟರ್ ಡ್ರಿಪ್ ಹಾಕಿ, ಕರುಳು ಕ್ಲೀನ್ ಮಾಡಿ, ಒಳಗಿದ್ದ ವಿಷವನ್ನು ತೆಗೆದುಹಾಕಿದರು. ಇದು ಒಂದೇ ದಿನದ ವಿಷಪ್ರಾಶನ ಅಲ್ಲ, ಬದಲು ಬಹಳ ದಿನಗಳಿಂದ ವಿಷ ಉಣಿಸಲಾಗುತ್ತಿದೆ ಎಂದು ಡಾಕ್ಟರ್ ಹೇಳಿದರು. ಹಾಗಾದರೆ ಈಕೆಗೆ ವಿಷ ಉಣಿಸಿದವರು ಯಾರು?

16ರ ವರ್ಷಕ್ಕೆ ಓಡಿ ಹೋಗಿ ಮದುವೆಯಾಗಿದ್ರಂತೆ ಗಾಯಕಿ ಆಶಾ ಭೋಸ್ಲೆ ! 
ಆ ದಿನವೇ ಲತಾ ದೀದಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾದ. ಆಮೇಲೆ ಎಂದೂ ಆತ ಪತ್ತೆಯಾಗಲೇ ಇಲ್ಲ. ಹಾಗಾದರೆ ಆತ ಎಲ್ಲಿ ಹೋದ? ಆತನೇ ಲತಾ ಮಂಗೇಶ್ಕರ್‌ಗೆ ವಿಷ ಉಣಿಸಿದನೇ? ಆತನ ಹಿಂದೆ ಯಾರಿದ್ದರು. ಅವನನ್ನೂ ಮುಗಿಸಲಾಯಿತೇ? ಈ ಯಾವ ಸಂಗತಿಗಳೂ ಪತ್ತೆಯಾಗಲೇ ಇಲ್ಲ. ಇದು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಲತಾಗೆ ವೈರಿಗಳೂ ಅನ್ನುವವರು ಯಾರೂ ಇರಲಿಲ್ಲ. ಆದರೆ ಲತಾ ಜನಪ್ರಿಯತೆಯಿಂದ ಕರುಬುವವರು, ಆಕೆಯ ಯಶಸ್ಸನ್ನು ತಮ್ಮದಾಗಿ ಮಾಡಿಕೊಳ್ಳಲು ಹವಣಿಸುವವರು ಇದ್ದೇ ಇದ್ದರು. ಆದರೆ ಯಾರ ವಿರುದ್ಧವೂ ಸಾಕ್ಷಿ ಸಿಗಲಿಲ್ಲ. ಇದಾದ ಬಳಿಕ ಬಾಲಿವುಡ್‌ನ ಹಾಡು ಬರಹಗಾರ ಮಜ್ರೂಹ್‌ ಸುಲ್ತಾನ್‌ಪುರಿ ಪ್ರತಿದಿನ ಬೆಳಿಗ್ಗೆ ಲತಾ ಮನೆಗೆ ಬಂದು, ಅವರಿಗಾಗಿ ಮಾಡಿದ ಅಡುಗೆಯನ್ನು ಮೊದಲು ತಾವೇ ಉಂಡು, ಅದರಲ್ಲಿ ವಿಷ ಇಲ್ಲ ಎಂದು ಖಚಿತಪಡಿಸಿಕೊಂಡು ನಂತರವೇ ಲತಾ ಉಣ್ಣುತ್ತಿದ್ದರಂತೆ.

ಈ ವಿವರಗಳನ್ನು ಲತಾ ಅವರ ಆತ್ಮಕತೆ ಬರೆದಿರುವ ಪದ್ಮಾ ಸಚ್‌ದೇವ್‌ ಎಂಬ ಬರಹಗಾರ್ತಿ ಬಹಿರಂಗಪಡಿಸಿದ್ದಾರೆ. ಐಸಾ ಕಹಾ ಸೆ ಲಾವೂ ಎಂಬುದು ಆ ಕೃತಿಯ ಹೆಸರು.

ಕನ್ನಡದಲ್ಲೇ SPBಗೆ ಸಂತಾಪ‌ ಸೂಚಿಸಿ ಖ್ಯಾತ ಗಾಯಕಿ ಎಸ್‌ .ಜಾನಕಿ ಕಣ್ಣೀರು ...

ಲತಾ ಮಂಗೇಶ್ಕರ್‌ ಅವರ ಗಾಯನದ ಘರಾನಾ- ಭೆಂಡಿ ಬಜಾರ್‌ ಘರಾನಾ. ಇದನ್ನು ಇಂದು ಅಳವಡಿಸಿಕೊಂಡಿರುವವರು ಕಡಿಮೆ ಮಂದಿ, ಇದು ನೇರವಾಗಿ ಅಕ್ಬರನ ಆಸ್ಥಾನದಲ್ಲಿದ್ದ ತಾನಸೇನ್‌ ಸ್ಥಾಪಿಸಿದ ಘರಾನಾ. ಆತನ ಶಿಷ್ಯರ ಶಿಷ್ಯರ ಶಿಷ್ಯರಿಂದ ಅದು ಲತಾ ಮಂಗೇಶ್ಕರ್‌ವರೆಗೂ ಸಾಗಿಬಂದಿದೆ. ಲತಾ ಮಂಗೇಶ್ಕರ್ ಶಾಲೆಗೆ ಹೋದವರೇ ಅಲ್ಲ! ಒಂದೇ ಒಂದು ದಿನ ಹೋಗಿದ್ದರಂತೆ. ಅಲ್ಲಿ ಪಾಠ ಕಲಿಯುವುದು ಬಿಟ್ಟು ಇತರ ಮಕ್ಕಳಿಗೆ ಹಾಡುವುದು ಹೇಳಿಕೊಡಲು ಆರಂಭಿಸಿದರು. ಇದನ್ನು ನೋಡಿ ಶಿಕ್ಷಕಿಯರು ಆಕೆಯನ್ನು ಬೈದರು. ಇದರಿಂದ ಮುಖಭಂಗಿತರಾದ ಲತಾ ಮುಂದೆ ಎಂದೂ ಶಾಲೆಗೆ ಹೋಗಲೇ ಇಲ್ಲವಂತೆ. 1958ರಲ್ಲಿ, ಆಗಿನ್ನೂ ಫಿಲಂಫೇರ್‌ ಅವಾರ್ಡ್‌ಗಳನ್ನು ನಟಿ ನಟಿಯರಿಗೆ ಮಾತ್ರ ಕೊಡುತ್ತಿದ್ದರು. ಲತಾ ಅವರ ಜನಪ್ರಿಯತೆಯಿಂದಾಗಿ, ಬೆಸ್ಟ್ ಪ್ಲೇಬ್ಯಾಕ್‌ ಸಿಂಗರ್‌ ಎಂಬ ಪ್ರಶಸ್ತಿಯನ್ನೂ ಕೊಡಲು ಆರಂಭಿಸಿದರು. ಇದರ ಮೊದಲ ವಿಜೇತೆ ಸ್ವತಃ ಲತಾ ದೀದಿಯೇ ಆಗಿದ್ದರು. 

ಸಿಗರೇಟ್, ಮದ್ಯ, ಐಸ್‌ಕ್ರೀಂ ಅಂದ್ರೆ ಪಂಚಪ್ರಾಣ..! ಸ್ವರ ಸಾಮ್ರಾಟ SPB ಬಗ್ಗೆ ನೀವರಿಯದ ವಿಚಾರಗಳಿವು ...