Asianet Suvarna News Asianet Suvarna News

ಸಲಾರ್ 3 ದಿನದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ?: ಕೆಜಿಎಫ್ 2 ದಾಖಲೆ ಬ್ರೇಕ್ ಮಾಡೋ ಕನಸಿನಲ್ಲಿ ಪ್ರಭಾಸ್!

ಡಾರ್ಲಿಂಗ್ ಪ್ರಭಾಸ್. ಇದೇ ದಿನಕ್ಕೆ ಕಾಯ್ತಾ ಇದ್ರು. ನಾನು ಮತ್ತೆ ಬಾಕ್ಸಾಫೀಸ್ನಲ್ಲಿ ಮಿಂಚಿ ಮೆರೆದಾಡಬೇಕು ಅಂತ ಆಸೆ ಪಟ್ಟಿದ್ರು. ಅದಕ್ಕಾಗಿ ಸಲಾರ್ ಸಿನಿಮಾದ ಮೇಲೆ ನಂಬಿಕೆಯನ್ನೂ ಇಟ್ಟುಕೊಂಡಿದ್ರು. ಈಗ ಆ ನಂಬಿಕೆ ನಿಜವಾಗಿದೆ. 

Do you know how much is the total collection of Darling Prabhas Starrer Salaar 3 days gvd
Author
First Published Dec 27, 2023, 8:40 PM IST

ಡಾರ್ಲಿಂಗ್ ಪ್ರಭಾಸ್. ಇದೇ ದಿನಕ್ಕೆ ಕಾಯ್ತಾ ಇದ್ರು. ನಾನು ಮತ್ತೆ ಬಾಕ್ಸಾಫೀಸ್ನಲ್ಲಿ ಮಿಂಚಿ ಮೆರೆದಾಡಬೇಕು ಅಂತ ಆಸೆ ಪಟ್ಟಿದ್ರು. ಅದಕ್ಕಾಗಿ ಸಲಾರ್ ಸಿನಿಮಾದ ಮೇಲೆ ನಂಬಿಕೆಯನ್ನೂ ಇಟ್ಟುಕೊಂಡಿದ್ರು. ಈಗ ಆ ನಂಬಿಕೆ ನಿಜವಾಗಿದೆ. ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಸಲಾರ್ ಸುನಾಮಿ ಎದ್ದಿದೆ. ನಾಲ್ಕೇ ದಿನದಲ್ಲಿ ಡಾರ್ಲಿಂಗ್ ಪ್ರಭಾಸ್ ಇತಿಹಾಸ ಸೃಷ್ಟಿಸಿದ್ದಾರೆ. ಸಲಾರ್ ಭಾಗ 1 - ಕದನ ವಿರಾಮ ವಿಶ್ವಾದ್ಯಂತ ಡಿಸೆಂಬರ್ 22ರ ಶುಕ್ರವಾರ ಬಿಡುಗಡೆಯಾಗಿತ್ತು. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಸಲಾರ್ ರಿಲೀಸ್ ಆಗಿತ್ತು. ಎರಡೇ ದಿನದಲ್ಲಿ ರೆಕಾರ್ಡ್ ಬ್ರೇಕಿಂಗ್ ಬ್ಲಾಕ್ ಬಸ್ಟರ್ ಹಿಟ್ ಆದ ಸಲಾರ್ ವಿಶ್ವಾದ್ಯಂತ 295.7 ಕೋಟಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಭೇಟೆ ಶುರು ಮಾಡಿದ್ರು ಪ್ರಭಾಸ್. 

ಈಗ ಸಲಾರ್ ರಿಲೀಸ್ ಆಗಿ ನಾಲ್ಕು ದಿನ ಕಳೆದಿದೆ. ನಿನ್ನೆ ಮತ್ತು ಮೊನ್ನೆ ದೇಶಾದ್ಯಂತ ಹಾಲಿಡೇ ಇದ್ದಿದ್ರಿಂದ ಸಲಾರ್ ಗಲ್ಲಾಪೆಟ್ಟಿಗೆ ಗಳಿಕೆ ಗಗನಕ್ಕೇರಿದೆ. ಸಲಾರ್ ಎರಡೇ ದಿನಕ್ಕೆ 295.7 ಕೋಟಿ ಗಳಿಸಿತ್ತು. ಕಳೆದ ಭಾನುವಾರ ಒಂದೇ ದಿನ ಈ ಸಿನಿಮಾ ಗಳಿಕೆ 100 ಕೋಟಿ ದಾಟಿದೆ. ಹೀಗಾಗಿ ಮೂರು ದಿನದಲ್ಲಿ 402 ಕೋಟಿ ಅಂತ ಸಲಾರ್ ತಂಡ ಅಫೀಷಿಯಲ್ ಆಗಿ ಅನೌನ್ಸ್ ಮಾಡಿದೆ. ಸಲಾರ್ ಕ್ರೇಜ್ ದಿನೇ ದಿನೇ ಹೆಚ್ಚಾಗ್ತಿದೆ. ಪ್ರಶಾಂತ್ ನೀಲ್ ಪ್ರಪಂಚದೊಳಗೆ ಹೋದ ಪ್ರೇಕ್ಷಕ ಥ್ರಿಲ್ ಆಗಿ ಹೊರ ಬರುತ್ತಿದ್ದಾರೆ. ಇದರ ಫಲವೇ ನಾಲ್ಕನೇ ದಿನವೂ ಸಲಾರ್ ಸುಂಟರಗಾಳಿ ಜೋರಾಗೇ ಇತ್ತು. ಹೀಗಾಗಿ ನಾಲ್ಕನೇ ದಿನ ಸಲಾರ್ 102 ಕೋಟಿ ಗಳಿಸೋ ಮೂಲಕ ಸಾಲಾರ್ ಒಟ್ಟು ಕಲೆಕ್ಷನ್ 504 ಕೋಟಿ ದಾಟಿದೆ. ಬಾಹುಬಲಿ ಬಂದ ಮೇಲೆ ಪ್ರಭಾಸ್ಗೆ ದೊಡ್ಡ ಸಕ್ಸಸ್ ಮರೀಚಿಗೆಯಾಗಿತ್ತು. 

ಪ್ರಭಾಸ್ ಟೈಂ ಮುಗಿದೇ ಹೋಯ್ತು ಅಂತೆಲ್ಲಾ ಸಿನಿ ರಂಗದ ದಿಗ್ಗಜರು ಮಾತಾಡಿದ್ರು. ಆದ್ರೆ ಇಲ್ಲ ಇಲ್ಲ ಪ್ರಭಾಸ್ ಬಳಿ ಇನ್ನೂ ಪವರ್ ಇದೆ ಅಂತ ನಂಬಿ ಬಂಡವಾಳ ಹಾಕಿದ್ದು ಕನ್ನಡದ ಹೊಂಬಾಳೆ ಫಿಲಮ್ಸ್. ಪ್ರಭಾಸ್ಗೆ ದೇಶಾದ್ಯಂತ ಕ್ರೇಜ್ ಇದೆ ಅಂತ ನಂಬಿ ಡೈರೆಕ್ಷನ್ ಮಾಡಿದ್ರು ಪ್ರಶಾಂತ್ ನೀಲ್.. ಇವರಿಬ್ಬರನ್ನ ನಂಬಿ ನಾನು ಮತ್ತೆ ಗೆಲ್ಲುತ್ತೇನೆ ಅಂತ ಸಲಾರ್ ಹಿಡಿದಿದ್ರು ಪ್ರಭಾಸ್.. ಈಗ ಅದೆಲ್ಲೂ ಕೂಡಿ ಬಂದಿದೆ. ಸಲಾರ್ ನಾಲ್ಕೇ ದಿನದಲ್ಲಿ 504 ಕೋಟಿ ಗಳಿಸಿದೆ. ಪ್ರಭಾಸ್ ಮತ್ತೆ ಗೆಲುವಿನ ಹಾದಿ ಹಿಡಿದಿದ್ದಾರೆ. ನಾಲ್ಕೇ ದಿನದಲ್ಲಿ ಕೆಜಿಎಫ್2 ಸಿನಿಮಾ 535 ಕೋಟಿ ಕಲೆಕ್ಷನ್ ಮಾಡಿತ್ತು. 

ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಲ್ಲಿ ಸ್ಟಾರ್ಸ್ ಮೆರಗು: ರಿಷಬ್ ಬಳಿಕ ಯಶ್‌ಗೂ ಬಂತು ಆಹ್ವಾನ!

ಆದ್ರೆ ಸಲಾರ್ 504 ಕೋಟಿ ಮಾಡಿದೆ. ಕೆಜಿಎಫ್ 2 ರೆಕಾರ್ಡ್ ಬ್ರೇಕ್ ಮಾಡೋ ಸನಿಹಕ್ಕೆ ಬಂದಿರೋ ಪ್ರಭಾಸ್ ಅದನ್ನ ಮಾಡಿಯೇ ತೀರುತ್ತೇನೆ ಅನ್ನೋ ಕನಸು ಕಂಡಂತಿದೆ. ಯಾಕಂದ್ರೆ ಸಾಲಾರ್ ಬಟ್ಟರೆ ಭಾರತೀಯ ಚಿತ್ರರಂಗದಲ್ಲಿ ಸಧ್ಯಕ್ಕೆ ಯಾವ್ ದೊಡ್ಡ ಸಿನಿಮಾನೂ ಬರುತ್ತಿಲ್ಲ.. ಹೀಗಾಗಿ ಪ್ರಭಾಸ್ ಮತ್ತೆ ಗೆಲುವಿನ ಕುದುರೆಯಾಗಿ ಓಡುತ್ತಿದ್ದಾರೆ. ಸಾಹೋ ಸಿನಿಮಾ ಪ್ರಭಾಸ್ ಗೆ ದೊಡ್ಡ ಸಕ್ಸಸ್ ಸಿಗ್ಲಿಲ್ಲ. ಆದಿಪುರುಷ್ ಸಿನಿಮಾ ಅದೃಷ್ಟ ತಂದುಕೊಡ್ಲಿಲ್ಲ. ರಾಧೆ ಶ್ಯಾಮ್ ಸಿನಿಮಾ ಸೋಲುಂಡು ಹುಯ್ತು. ಪ್ರಾಣ ಹೋಗೋ ಟೈಂಣಲ್ಲಿ ಒಂದು ಹುಲ್ ಕಡ್ಡಿ ಸಿಕ್ಕರೆ ಸಾಕು ಹೇಗಾದ್ರು ಮಾಡಿ ಜೀವ ಉಳಿಸಿಕೊಳ್ಳಬಹುದು ಅಂತಾರಲ್ಲ ಹಾಗೆ ಸಲಾರ್ ಸಿನಿಮಾದಿಂದ ಪ್ರಭಾಸ್ ಮತ್ತೆ ಗೆಲುವಿನ ಹಾರ ಹಾಕಿಸಿಕೊಂಡಿದ್ದಾರೆ. ಈ ವರ್ಷ ಮುಗಿಯೋ ಒಳಗೆ ಸಾಲಾರ್  ಕಲೆಕ್ಷನ್ 800 ಕೋಟಿ ದಾಟುತ್ತೆ ಅಂತ ಅಂದಾಜಿಸಲಾಗ್ತಿದೆ.

Follow Us:
Download App:
  • android
  • ios