'ಡಿಜೆ ಟಿಲ್ಲು' ಸಿನಿಮಾ ಪ್ರಚಾರದ ವೇಳೆ ನಟ ಸಿದ್ದು ಜೊನ್ನಲಗಡ್ಡಗೆ ಇಂಟಿಮೇಟ್ ದೃಶ್ಯದ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತ. ಅದಕ್ಕೆ ನಟ ಕೊಟ್ಟ ಉತ್ತರವಿದು...
ನಟ ಸಿದ್ದು ಜೊನ್ನಲಗಡ್ಡ ಮತ್ತು ನೇಹಾ ಶೆಟ್ಟಿ ನಟನೆಯ' ಡಿಜೆ ಟಿಲ್ಲು' ಸಿನಿಮಾ ಫೆಬ್ರವರಿ 11 ರಂದು ರಿಲೀಸ್ ಆಗುತ್ತಿದೆ. ಹೀಗಾಗಿ ನಿರ್ದೇಶಕ ಸೂರ್ಯದೇವರ ನಾಗ ವಂಶಿ ಜೊತೆ ಇಡೀ ತಂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು ಈ ವೇಳೆ ಪತ್ರಕರ್ತ ಕೇಳಿರುವ ಪ್ರಶ್ನೆಗೆ ಇಬ್ಬರೂ ಸ್ಟಾರ್‌ಗಳು ಗರಂ ಆಗಿದ್ದಾರೆ.
'ಡಿಜೆ ಟಿಲ್ಲು' ಒಂದು ಕ್ಯೂಟ್ ಲವ್ ಸ್ಟೋರಿ ಆಗಿದ್ದು ಟೀಸರ್‌ನಲ್ಲೂ ಇಬ್ಬರು ತುಂಬಾನೇ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಪತ್ರಕರ್ತನೊಬ್ಬ 'ನಟಿ ನೇಹಾ ಶೆಟ್ಟಿ ಮೈ ಮೇಲೆ ಎಷ್ಟು ಮಚ್ಚೆ ಇದೆ ಎಂದು ಎಣಿಸಿದ್ದೀರಾ' ಎಂದು ಸಿದ್ದುಗೆ ಪ್ರಶ್ನೆ ಮಾಡಿದ್ದರು. ಒಂದು ನಿಮಿಷ ಇಡೀ ಕಾರ್ಯಕ್ರಮದಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇತ್ತು. ನಟ ಸಿದ್ದು ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೆ ಕುಳಿತುಬಿಟ್ಟರು. ಆದರೆ ಚಿತ್ರದ ಟ್ರೈಲರ್ ಹಂಚಿಕೊಂಡು ನಟಿ ಪೋಸ್ಟ್ ಮಾಡಿದ ಕಾರಣ ಮತ್ತೆ ಎಲ್ಲರೂ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ.
Prithviraj ಸಿನಿಮಾದಿಂದ ರಜಪೂತ ಸಮುದಾಯದ ಭಾವನೆಗೆ ಧಕ್ಕೆಯಾಗಿದೆ; ಹೈಕೋರ್ಟ್ ಮೆಟ್ಟಿಲೇರಿದ ಕರಿನ್ ಸೇನೆ
'ಇವತ್ತು ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರು ಈ ಪ್ರಶ್ನೆ ಕೇಳಿದ್ದರು. ಆದರೆ ಇದರ ಬಗ್ಗೆ ನಾನು ಹೇಳಲೇಬೇಕು, ಹೆಣ್ಣು ಮಕ್ಕಳ ಬಗ್ಗೆ ಅವರಿಗೆ ಇರುವ ಗೌರವ ಏನೆಂದು ಎತ್ತಿ ತೋರಿಸುತ್ತದೆ ಹಾಗೆಯೇ ಅವರ ಸುತ್ತ ಆಫೀಸ್‌ನಲ್ಲಿ ಮನೆಯಲ್ಲಿ ಕೆಲಸ ಮಾಡುವವರನ್ನು ಹೇಗೆ ನೋಡುತ್ತಾರೆ ಎಂದು ಗೊತ್ತಾಗುತ್ತದೆ'ಎಂದು ನೇಹಾ ಟ್ಟಿಟ್ ಮಾಡಿದ್ದರು. 'ಇದೊಂದು ರೊಮ್ಯಾಂಟಿಕ್ ಸಿನಿಮಾ ಹೀಗಾಗಿ ನಾನು ರೊಮ್ಯಾಂಟಿಕ್ ಪ್ರಶ್ನೆ ಕೇಳಿದೆ. ಇರಲಿ ಬಿಡಿ, ಟ್ರೈಲರ್ ಚೆನ್ನಾಗಿದೆ' ಎಂದು ಅದೇ ಪತ್ರಕರ್ತ ಮತ್ತೆ ನೇಹಾ ಫೋಸ್ಟ್‌ಗೆ ಕಾಮೆಂಟ್ ಮಾಡಿದ್ದರು. ಈ ಸಮಯದಲ್ಲಿ ಸಿದ್ದು ಯಾಕೆ ಮೌನವಾಗಿದ್ದರು ಎಂದು ಹಲವರು ಕೇಳಿದ್ದಾರೆ.
'ನನಗೆ ತುಂಬಾನೇ ನೋವಾಗಿದೆ, ನಾವು ಕಲ್ಪನೆ ಮಾಡಿಕೊಳ್ಳದ ಪ್ರಶ್ನೆಯನ್ನು ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕೇಳಲಾಗಿತ್ತು. ನಾನು ಪ್ರತಿಕ್ರಿಯೆ ನೀಡಿರುವ ರೀತಿ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ತುಂಬಾ ತಾಳ್ಮೆ ಮತ್ತು ಒಳ್ಳೆ ವರ್ತನೆಯಿಂದ ನಾನು ಈ ಪ್ರಶ್ನೆಯನ್ನು ignore ಮಾಡಿರುವೆ. ಕೋಪ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟವಿರಲಿಲ್ಲ. ನಾನು ಅವರ ಪ್ರಶ್ನೆಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡುತ್ತಿರಲಿಲ್ಲ ಅದಕ್ಕೆ ಸುಮ್ಮನಾದೆ' ಎಂದು ಸಿದ್ದು ಹೇಳಿದ್ದಾರೆ.
B-ಟೌನಲ್ಲಿ ಆಕೆ ಒಬ್ಬಳೇ ಪ್ರಾಮಾಣಿಕವಾದ ವ್ಯಕ್ತಿ, ಅವಳನ್ನು ಮೆಚ್ಚುತ್ತೇನೆ: Raj Kundra
ನೇಹಾ ಜೊತೆ ರೊಮ್ಯಾನ್ಸ್ ಮಾಡಿದ ದೃಶ್ಯದ ಬಗ್ಗೆ ಮಾತನಾಡಿದ್ದಾರೆ ಸಿದ್ದು. 'ಈ ರೀತಿ ದೃಶ್ಯಗಳನ್ನು ಮಾಡುವುದರಿಂದ ಜನರಿಗೆ ನಟನ ಮೇಲಿರುವ ಅಭಿಪ್ರಾಯ ಬದಲಾಗುತ್ತದೆ. ರೊಮ್ಯಾಂಟಿಕ್ ದೃಶ್ಯಗಳನ್ನು ಚಿತ್ರೀಕರಣ ಮಾಡುವಾಗ ನಟರು ತುಂಬಾನೇ ಕಷ್ಟ ಪಡುತ್ತಾರೆ. ಹೆಣ್ಣುಮಕ್ಕಳಿಗೆ ಇನ್ನೂ ಕಷ್ಟ ಏಕೆಂದರೆ ಸೆಟ್‌ನಲ್ಲಿ ಕನಿಷ್ಠ 100 ಮಂದಿ ಇದ್ದೇ ಇರುತ್ತಾರೆ ದೃಶ್ಯ ಸರಿಯಾಗಿ ಬರಲಿಲ್ಲ ಅಥವಾ ಲೈಟ್ ಸರಿ ಇಲ್ಲ ಅಂದ್ರೆ ಪದೇ ಪದೇ ಮಾಡಬೇಕು. ಈ ರೀತಿ ಮಾಡಲು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಧೈರ್ಯ ಬೇಕು. ಆ ಧೈರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಬೇಕು ಹಾಗೇ ಅವರಿಗೆ ಶಭಾಶ್ ಹೇಳಬೇಕು. ನಾವು ಕಥೆ ಹೇಳುತ್ತಿರುವು ನಿಮ್ಮನ್ನು ಮನರಂಜಿಸುತ್ತಿರುವುದು ಆದರೆ ನೀವು ನಮ್ಮನೇ ಜಡ್ಜ್ ಮಾಡುತ್ತಿದ್ದೀರಿ' ಎಂದಿದ್ದಾರೆ ಸಿದ್ದು.
ಸಿದ್ಧುಗೆ ಈ ರೀತಿ ಪ್ರಶ್ನೆ ಕೇಳಿದವರನ್ನು ಅನೇಕರು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರಂತೆ ಆದರೆ ಯಾವ ಕಾರಣಕ್ಕೆ ತಿಳಿದು ಬಂದಿಲ್ಲ.'ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ ನಾವು ಸಿನಿಮಾವನ್ನು ಪ್ರಚಾರ ಮಾಡಬೇಕು ಆದರೆ ಅದರಿಂದ ಆಗಿರುವ ಗಾಸಿಪ್ ಮಾಡುವುದಲ್ಲ' ಎಂದಿದ್ದಾರೆ.
