ನಿರ್ದೇಶಕರಾದ ಎಸ್‌ಎಸ್‌ ರಾಜಮೌಳಿ ಮತ್ತು ಪ್ರಶಾಂತ್‌ ನೀಲ್ ನಡುವಿನ ಸಂಭಾಷಣೆಯ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪ್ರಶಾಂತ್ ನೀಲ್ ಹಾಗೂ ಎಸ್‌ಎಸ್‌ ರಾಜಮೌಳಿ ಅವರಿಬ್ಬರೂ ಇಂದು ಭಾರತದ ನಿರ್ದೇಶಕರುಗಳಲ್ಲಿ ದಿಗ್ಗಜರು ಎನಿಸಿದ್ದಾರೆ. 

ನಿರ್ದೇಶಕರಾದ ಎಸ್‌ಎಸ್‌ ರಾಜಮೌಳಿ ಮತ್ತು ಪ್ರಶಾಂತ್‌ ನೀಲ್ ನಡುವಿನ ಸಂಭಾಷಣೆಯ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಜಮೌಳಿ ಅವರು ಪ್ರಶಾಂತ್ ನೀಲ್ ಬಳಿ 'ನೀವು ನಿಮ್ಮ ಗನ್‌ಗಳನ್ನು ಯಾವ ರೀತಿ, ಅಂದರೆ ಯಾವುದರ ಆಧಾರದ ಮೇಲೆ ಡಿಸೈನ್‌ ಮಾಡುತ್ತೀರಿ? ಅಂದರೆ ಕೆಜೆಎಫ್‌ನಲ್ಲಿ ಕನ್ಸಾರ್ ಗೇಟ್‌ ಮೇಲೆ ಗಾರ್ಡನಿಂಗ್ ಗನ್ಸ್‌ ಬಳಸಿದ್ದೀರಿ' ಎಂದು ಕೇಳಿದ್ದಾರೆ. ಅದಕ್ಕೆ ಪ್ರಶಾಂತ್ ನೀಲ್ ಕೂಲ್‌ ಆಗಿ ಉತ್ತರಿಸಿದ್ದಾರೆ. 

'ಅದು ನಮ್ಮ ಸಿನಿಮಾದ ಅಗತ್ಯಕ್ಕೆ ತಕ್ಕಂತೆ ಮಾಡಿರುತ್ತೇವೆ ಸರ್. ಕೆಜಿಎಫ್‌ನಲ್ಲಿ ಗನ್ ಮೂಲಕವೇ ಸೀನ್ ಇವಾಲ್ವ್ ಆಗಬೇಕಿತ್ತು. ಅದಕ್ಕೇ ಹಾಗೆ ಡಿಸೈನ್ ಮಾಡಿದ್ದೇವೆ. ಆದರೆ ಸಲಾರ್‌ನಲ್ಲಿ ಹಾಗಿರಲಿಲ್ಲ, ಗನ್ ಬೇರೆಯದೇ ರೀತಿಯಲ್ಲಿ ಕೆಲಸ ಮಾಡಬೇಕಿತ್ತು, ಅದಕ್ಕೇ ವಿಭಿನ್ನವಾಗಿ ವಿನ್ಯಾಸ ಮಾಡಿದ್ದೇವೆ. ಗನ್ ಮಾತನಾಡುವ, ಕೆಲಸ ಮಾಡುವ ಕಡೆ ನನಗೆ ಗನ್ ತುಂಬಾ ದೊಡ್ಡದಾಗಿರಬೇಕು ಎನ್ನಿಸಿದೆ, ಹಾಗೇ ಬಳಸಿದ್ದೇನೆ. ಆದರೆ, ಕೆಲವು ಕಡೆ ಗನ್‌ ಏನನ್ನೋ ಅದಕ್ಕಿಂತ ದೊಡ್ಡದನ್ನು ರಕ್ಷಣೆ ಮಾಡಬೇಕಿತ್ತು' ಎಂದಿದ್ದಾರೆ. 

ಪೋಷಕ ಪಾತ್ರವೇ ನನಗೆ ಹೆಚ್ಚು ಆರಾಮದಾಯಕ ಎನಿಸುತ್ತದೆ; ಹೀಗಂದಿದ್ಯಾಕೆ ಶಿವಕಾರ್ತಿಕೇಯನ್?

ಪ್ರಶಾಂತ್ ನೀಲ್ ಹಾಗೂ ಎಸ್‌ಎಸ್‌ ರಾಜಮೌಳಿ ಅವರಿಬ್ಬರೂ ಇಂದು ಭಾರತದ ನಿರ್ದೇಶಕರುಗಳಲ್ಲಿ ದಿಗ್ಗಜರು ಎನಿಸಿದ್ದಾರೆ. 15ಕ್ಕಿಂತ ಹೆಚ್ಚು ಯಶಸ್ವಿ ಸಿನಿಮಾಗಳನ್ನು ಮಾಡಿರುವ ರಾಜಮೌಳಿಯವರ ಜತೆ ಇನ್ನೂ 5 ಸಿನಿಮಾ ಮಾಡದ ಪ್ರಶಾಂತ್‌ ನೀಲ್ ಅವರನ್ನು ಹೋಲಿಕೆ ಮಾಡಲು ಅಸಾಧ್ಯವಾದರೂ, ಇಬ್ಬರೂ ಸದ್ಯಕ್ಕೆ ಮಾಡಿರುವ ಎಲ್ಲ ಸಿನಿಮಾಗಳು ಸಕ್ಸಸ್ ಆಗಿವೆ. ಈ ಕಾರಣಕ್ಕೆ ಇಬ್ಬರನ್ನು ಭಾರತದ ಗ್ರೇಟ್ ಡೈರೆಕ್ಟರ್‌ಗಳ ಸಾಲಿನಲ್ಲಿ ನಿಲ್ಲಿಸಲಾಗಿದೆ.

ಕತ್ರಿನಾ ಕೈಫ್ ತುಂಬಾ ಸೆನ್ಸಿಬಲ್ & ಬ್ಯೂಟಿಫುಲ್ ಅಂದ್ರು ವಿಜಯ್ ಸೇತುಪತಿ; ಯಡವಟ್ಟಾಗಿದ್ದು ಎಲ್ಲಿ?

ರಾಜಮೌಳಿಯವರು ಮಾಡಿದ ಎಲ್ಲಾ ಸಿನಿಮಾಗಳೂ ವಿಭಿನ್ನವಾಗಿದ್ದರೆ ಪ್ರಶಾಂತ್ ನೀಲ್ ಮಾಡಿರುವ ಎಲ್ಲಾ ಸಿನಿಮಾಗಳು ಒಂದೇ ತರಹ ಕಾಣಿಸುತ್ತವೆ, ಒಂದೇ ಝೋನರ್ ಎನಿಸಿಕೊಳ್ಳುತ್ತವೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಎಸ್‌ಎಸ್ ರಾಜಮೌಳಿಯವರ 'ಆರ್‌ಆರ್‌ಆರ್‌' ಸಿನಿಮಾ ಸೂಪರ್ ಸಕ್ಸಸ್ ಆಗಿದ್ದರೆ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಹಿಟ್ ದಾಖಲಿಸಿದೆ.

ಬೇಬಿ ಶ್ಯಾಮಿಲಿಗೆ 'ಕರ್ಮ' ಅನುಭವಿಸಲೇಬೇಕು, ಮಾಡಿದ್ದುಣ್ಣೋ ಮಾರಾಯ ಅಂತಿರೋದ್ಯಾಕೆ?

ಈಗ ಇಬ್ಬರೂ ಹೊಸ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಜೂನಿಯರ್ ಎನ್‌ಟಿಆರ್ ನಟನೆಯ ಸಿನಿಮಾ ಕೈಗೆತ್ತಿಕೊಂಡಿದ್ದರೆ, ರಾಜಮೌಳಿಯವರು ಮಹೇಶ್ ಬಾಬು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಇಬ್ಬರೂ ಇಂದು ಭಾರತದ ಸಿನಿಮಾಗಳು ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎನ್ನಬಹುದು.