ಮಾಧ್ಯಮ ಬದಲಾಗುತದ್ದೆ. ಆದರೆ, ಬಂಧ ಅಲ್ಲ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ ಆಚಾರ್ಯ ನಿರ್ದೇಶಕ.
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಿಗಿಂತ ಸೋಷಿಯಲ್ ಮೀಡಿಯಾ ಮೂಲಕವೇ ಸಿನಿಮಾಗೆ ಸಂಬಂಧಿಸಿದ ವಿಚಾರಗಳು ಪಬ್ಲಿಟಿಸಿ ಪಡೆಯುತ್ತಿವೆ. ನಟ-ನಟಿ, ನಿರ್ದೇಶಕರು ಒಂದು ಫೋಟೋ ಹಂಚಿಕೊಂಡರೆ ಸಾಕು, ದೊಡ್ಡ ಮಟ್ಟದ ಸುದ್ದಿ ಆಗುತ್ತದೆ ಹಾಗೂ ಅಭಿಮಾನಿಗಳಿಗೂ ಬೇಗ ತಲುಪುತ್ತದೆ. ಆದರೆ ಸ್ಟಾರ್ ನಿರ್ದೇಶಕ ಕೊರೊಟಾಲ ಶಿವ ಇದರಿಂದ ಹೊರ ಬಂದಿದ್ದಾರೆ.
ಚಿರಂಜೀವಿ 152ನೇ ಚಿತ್ರ 'ಆಚಾರ್ಯ' ಟೀಸರ್ ರಿಲೀಸ್!
'ನಾನು ಸಾಮಾಜಿಕ ಮಾಧ್ಯಮಗಳಿಂದ ದೂರ ಸರೆಯುತ್ತಿದ್ದೇನೆ. ಈ ತಾಣಗಳಲ್ಲಿ ನನ್ನ ಅಪಾರ ನೆನಪುಗಳಿವೆ. ಆದರೀಗ ದೂರ ಸರಿಯುವ ಸಮಯ. ಮಾಧ್ಯಮ ಸ್ನೇಹಿತರ ಮೂಲಕ ನಾನು ಯಾವಾಗಲೂ ನಿಮ್ಮೊಂದಿಗೆ ಸಂಪರ್ಕದಲ್ಲಿ ಇರುತ್ತೇನೆ. ಮಾಧ್ಯಮ ಬದಲಾಗುತ್ತದೆ. ಆದರೆ ನಮ್ಮ ಬಂಧ ಅಲ್ಲ,' ಎಂದು ಕೊರೊಟಾಲ ಬರೆದುಕೊಂಡಿದ್ದಾರೆ.
![]()
ಸದ್ಯ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಆಚಾರ್ಯ' ಸಿನಿಮಾ ನಿರ್ದೇಶಿಸುತ್ತಿರುವ ಕೊರೊಟಾಲ ಶಿವ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಆಚಾರ್ಯ' ಚಿತ್ರದ ನಂತರ ಜೂ. ಎನ್‌ಟಿಆರ್ 'ಜನತಾ ಗ್ಯಾರೇಜ್' ಸಿನಿಮಾ ನಿರ್ದೇಶಿಸುವ ಮೂಲಕ ಎರಡನೇ ಬಾರಿ ಒಂದಾಗಿದ್ದಾರೆ.
