ಚೆನ್ನೈ(ಆ. 23)  ಕೊರೋನಾ ಕಾರಣಕ್ಕೆ ಚಿಕಿತ್ಸೆ ಪಡೆದುಕೊಳ್ಳುಉತ್ತಿರುವ ಹಿರಿಯ ಗಾಯ ಯ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗೆ ಎಲ್ಲ ಕಡೆಯಿಂದ ಪ್ರಾರ್ಥನೆ ಹರಿದು ಬರುತ್ತಿದೆ.

ಎಸ್‌ಪಿಬಿ ಚೇತರಿಕೆಗಾಗಿ ಚಲನಚಿತ್ರ ನಿರ್ದೇಶಕ-ನಟ ಭಾರತೀರಾಜ  ಪ್ರಾರ್ಥನೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಭಾನುವಾರ ಸಂಜೆ 6 ಗಂಟೆಯಿಂದ 6.05ರವರೆಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಭಾಗವಹಿಸಿ ಗಾಯಕನ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಭಾರತೀರಾಜ   ಧನ್ಯವಾದ ಸಲ್ಲಿಸಿದ್ದಾರೆ.

ರಜನಿಕಾಂತ್ ಮತ್ತು ಬಾಲು ಗೆಳೆತನ

ಸಿವಕುಮಾರ್, ಸರೋಜಾ ದೇವಿ, ಸತ್ಯರಾಜ್, ಪ್ರಭು, ರಾಧಿಕಾ ಶರತ್ ಕುಮಾರ್, ಶರತ್‌ ಕುಮಾರ್, ಪ್ರತಿಭಾ, ಮನೋ, ಚಿತ್ರಾ, ಎಸ್‌ ಎ ಚಂದ್ರಶೇಖರ್, ಕೆಎಸ್‌ ರವಿಕುಮಾರ್ ಸೇರಿದಂತೆ ದಿಗ್ಗಜ ನಟರು ಮತ್ತು ಗಾಯಕರು ಎಸ್‌ಪಿಬಿ ಚೇತರಿಗೆಗೆ ಪ್ರಾರ್ಥಿಸಿದರು.

ರಜನೀಕಾಂತ್, ಕಮಲ್ ಹಾಸನ್, ಸಂಗೀತ ನಿರ್ದೇಶಕ ಇಳಯರಾಜ, ಎ.ಆರ್. ರಹಮಾನ್, ಚಲನಚಿತ್ರ ನಟರು ಮತ್ತು ನಟಿಯರು, ನಿರ್ದೇಶಕರು, ಸಂಗೀತಗಾರರು ಸಹ ಹಿರಿಯ  ಗಾಯಕನ ಚೇತರಿಗೆಗೆ ಪ್ರಾರ್ಥಿಸಿದರು.

ಕೊರೋನಾ ಸೋಂಕಿಗೆ ಗುರಿಯಾಗಿರುವ ಎಸ್‌ಪಿಬಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿತಿ ಒಂದೇ ರೀತಿಯಾಗಿದೆ ಎಂದು ಪುತ್ರ ಎಸ್‌ಪಿ ಚರಣ್ ತಿಳಿಸಿದ್ದಾರೆ.