ಸಸುರಾಲ್‌ ಸಿಮರ್‌ಕಾ ಧಾರಾವಾಹಿ ಮೂಲಕ ಮನೆಮಾತಾಡಿರುವ ನಟಿ ದೀಪಿಕಾ ಕಾಕರ್‌ ಮುಸ್ಲಿಂ ಯುವಕನನ್ನ ಮದುವೆಯಾಗಿ ಹೆಸರು, ಧರ್ಮ ಬದಲಾಯಿಸಿದ್ದಾರೆ. ಇವರು ಈಗ ಗರ್ಭಿಣಿಯಾಗಿದ್ದು ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಏನಿದು ವಿಷಯ? 

ಮುಂಬೈ: ಹಿಂದೂ ನಟಿಯರು ಮುಸ್ಲಿಂ ಯುವಕರನ್ನು ಮದುವೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಹೀಗೆ ಮದುವೆಯಾದಾಗಲೆಲ್ಲ ನಟಿಯರು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಈ ಹಿಂದೆ ಕರೀನಾ ಕಪೂರ್‌ ಸೈಫ್‌ ಅಲಿ ಖಾನ್‌ ಅವರ ಎರಡನೆಯ ಪತ್ನಿಯಾಗಿ ಹೋದಾಗಲೂ ಹೀಗೆಯೇ ಆಗಿತ್ತು. ಮೊನ್ನೆ ಮೊನ್ನೆ ತಾನೇ ನಟಿ ಸ್ವರಾ ಭಾಸ್ಕರ್‌ ಅವರು ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಅವರನ್ನು ಮದುವೆಯಾದಾಗಲೂ ಟ್ರೋಲ್‌ಗೆ ಒಳಗಾಗಿದ್ದರು. ಇದೀಗ ಕಿರುತೆರೆಯ ಖ್ಯಾತ ನಟಿ ದೀಪಿಕಾ ಕಾಕರ್ (Deepika Kakar) ಅವರ ಸರದಿ. ಸಸುರಾಲ್ ಸಿಮರ್ ಕಾ ಎಂಬ ಟಿವಿ ಧಾರಾವಾಹಿಯ ಮೂಲಕ ಖ್ಯಾತಿ ಪಡೆದಿರುವ ನಟಿ ದೀಪಿಕಾ ತಮ್ಮ ಮೊದಲ ಪತಿ ರೌಣಕ್‌ ಮೆಹ್ತಾ ಅವರಿಗೆ ವಿಚ್ಛೇದನ ನೀಡಿ ಕಿರುತೆರೆ ನಟ ಶೋಬೆಯ್‌ ಇಬ್ರಾಹಿಂ (Shoaib Ibrahim) ಅವರೊಂದಿಗೆ ಮದುವೆಯಾಗಿದ್ದಾರೆ. ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಅವರು ತಮ್ಮ ಹೆಸರನ್ನು ಫೈಜಾ ಎಂದು ಇಟ್ಟುಕೊಂಡಿದ್ದಾರೆ.

2018ರಲ್ಲಿ ಇವರ ಮದುವೆ ನಡೆದಿದೆ. ದೀಪಿಕಾ ಹಿಂದಿ ಕಿರುತೆರೆಯ `ಬಿಗ್ ಬಾಸ್’ 12 (Bigg Boss Hindi 12) ನಲ್ಲಿ ಭಾಗವಹಿಸಿ ವಿನ್ನರ್ ಕೂಡ ಆಗಿದ್ದರು. ಇದಕ್ಕೂ ಮುನ್ನ ಇವರು ಶೋಯೆಬ್ ಜೊತೆ ಧಾರಾವಾಹಿಯೊಂದರಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಇಬ್ಬರಿಗೂ (Love) ಪ್ರೇಮಾಂಕುರವಾಗಿತ್ತು. ಬಳಿಕ 2018ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇನ್ನೂ ಕಳೆದ ವರ್ಷ ದೀಪಿಕಾ ಅವರಿಗೆ ಗರ್ಭಪಾತವಾಗಿತ್ತು. ಹಾಗಾಗಿ ಈ ವರ್ಷ ಕೊಂಚ ಸಮಯ ತೆಗೆದುಕೊಂಡು, ಈ ಸಿಹಿಸುದ್ದಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ತಮ್ಮ ಪ್ರೆಗ್ನೆನ್ಸಿ (Pregnancy) ಅವಧಿಯ ಅನುಭವವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇದ್ದಾರೆ.

Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್​ಲಾಕ್​ ಅನುಭವ

ಆದರೆ ಧರ್ಮ ಬದಲಾಯಿಸಿ ದಿನದಿಂದಲೂ ಟ್ರೋಲ್‌ಗೆ ಒಳಗಾಗುತ್ತಿರುವ ನಟಿ ಈ ಖುಷಿಯ ವಿಷಯ ತಿಳಿಸಿದಾಗಲೂ ನೆಟ್ಟಿಗರು ಬಿಡುತ್ತಿಲ್ಲ. ಗರ್ಭಧಾರಣೆಯನ್ನು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ. ಇದರಿಂದ ದೀಪಿಕಾ ಅಲಿಯಾ ಫೈಜಾ ಗರಂ ಆಗಿದ್ದಾರೆ. ಟ್ರೋಲರ್‌ಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ತಮ್ಮ ವ್ಲಾಗ್‌ನಲ್ಲಿ ಬರೆದುಕೊಂಡಿರುವ ದೀಪಿಕಾ- "ಕೆಲವರು ನಕಲಿ ಬೇಬಿ ಬಂಪ್ ಅನ್ನು ತೋರಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಕೆಟ್ಟ ಕಾಮೆಂಟ್‌ಗಳನ್ನು (Comment) ಮಾಡಲಾಗುತ್ತಿದೆ. ಇದನ್ನು ನಾನು ಸಹಿಸುವುದಿಲ್ಲ" ಎಂದಿದ್ದಾರೆ. ಅಷ್ಟಕ್ಕೂ ಟ್ರೋಲಿಗರು ಹೀಗೆ ಹೇಳಲು ಕಾರವೂ ಇದೆ. ತಾವು ಗರ್ಭಿಣಿ ಎಂದು ತಿಳಿದಾಗಿನಿಂದ ದೀಪಿಕಾ ತಮ್ಮ ಆರೋಗ್ಯ ಸರಿಯಿಲ್ಲವೆಂದೂ, ನಂತರ ಆರೋಗ್ಯ ಉತ್ತಮಗೊಂಡಿದೆ ಎಂದೂ ದಿನವೂ ಪೋಸ್ಟ್‌ ಮಾಡುತ್ತಲಿದ್ದಾರೆ. ತಾವು ಶಾಪಿಂಗ್‌ ಹೋಗಿರುವುದು ಇತ್ಯಾದಿಗಳ ಬಗ್ಗೆಯೂ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಇದನ್ನು ಮುಂದಿಟ್ಟುಕೊಂಡ ಟ್ರೋಲಿಗರು, (Troll) ’ಇದ್ದಕ್ಕಿದ್ದಂತೆ ನಿಮ್ಮ ಆರೋಗ್ಯವು ಹಾಳಾಗುತ್ತದೆ, ನಂತರ ಅದು ಉತ್ತಮಗೊಳ್ಳುತ್ತದೆ. ನಂತರ ಶಾಪಿಂಗ್ ಪ್ರಾರಂಭಿಸುತ್ತೀರಿ, ಇದು ನಿಮ್ಮ ಆರೋಗ್ಯವೋ ಅಥವಾ ಊಸರವಳ್ಳಿಯೋ?’ ಎಂದು ಪ್ರಶ್ನಿಸಿದ್ದು ದೀಪಿಕಾ ಅವರ ಕೋಪಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೀಪಿಕಾ, ’ನೀವು ಎಷ್ಟು ನಕಾರಾತ್ಮಕತೆಯನ್ನು ಹರಡುತ್ತಿದ್ದೀರಿ ಎಂದು ಎನಿಸುವುದಿಲ್ಲ. ನನ್ನನ್ನು ಗಿಮಿಕ್ ಎಂದು ಕರೆಯುತ್ತೀರಿ, ಕೆಲವೊಮ್ಮೆ ನನ್ನ ಗರ್ಭಧಾರಣೆಯ ಬಗ್ಗೆ ಗೇಲಿ ಮಾಡುತ್ತೀರಿ. ಈ ರೀತಿ ಮಾಡಿ ನಿಮಗೇನು ಸಿಗುತ್ತದೆ. ನಮ್ಮ ಜೀವನದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವಾಗ ಹೀಗೆ ಗರ್ಭಿಣಿ ಹೆಣ್ಣು ಒಬ್ಬಳನ್ನು ಹೀಗೆಲ್ಲಾ ಹಿಂಸಿಸುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ. 

ಮದುಮಗಳ ಲುಕ್​ನಲ್ಲಿ ಮಿಂಚಿಂಗ್​! ಮೂರನೆ ಮದ್ವೆಯಾಗ್ತಿದ್ದಾರಾ Rakhi Sawant?


’ನೀವು ಜೀವನದಲ್ಲಿ ಏನನ್ನೂ ಸಾಧಿಸದ ಹತಾಶ ವ್ಯಕ್ತಿಗಳು. ನೀವು ಪ್ರೀತಿಯನ್ನು ಕಂಡುಕೊಂಡಿಲ್ಲ, ಅಥವಾ ನಿಮ್ಮ ಜೀವನದಲ್ಲಿ ಶಾಂತಿ ಇಲ್ಲ, ನೀವು ಯಾರಿಗೂ ಶಾಂತಿಯನ್ನು ನೀಡಲು ಸಾಧ್ಯವಿಲ್ಲ. ಇತ್ತೀಚೆಗೆ ನನ್ನ ಪತಿ ಶೋಯೆಬ್ ಜೊತೆ ಐದನೇ ವಿವಾಹ ವಾರ್ಷಿಕೋತ್ಸವವನ್ನು (Wedding Anniversary) ಆಚರಿಸಿದಾಗ, ಅವರ ಬಗ್ಗೆಯೂ ಕೆಟ್ಟ ಕಮೆಂಟ್‌ ಮಾಡಿದ್ದೀರಿ. ನೀವು ಏನೇ ಹೇಳಿದರೂ ನಾನು ತಲೆ ಕೆಡಿಸಿಕೊಳ್ಳುವುದು. ಸದಾ ನನ್ನ ಪತಿಯನ್ನು ಹೆಚ್ಚು ಹೊಗಳುತ್ತೇನೆ. ಶೋಯೆಬ್ ನನ್ನ ಜೀವನದ ಹೆಮ್ಮೆ. ನೀವು ಯಾರನ್ನಾದರೂ ಮೂಲೆಗುಂಪು ಮಾಡಲು ಬಯಸಿದರೆ, ಅದು ನಿಮಗೆ ಒಂದು ನಿಮಿಷ ತೆಗೆದುಕೊಳ್ಳುವುದಿಲ್ಲ. ಆದರೆ ನಮ್ಮ ಪ್ರೀತಿಯ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ’ ಎಂದಿದ್ದಾರೆ.

View post on Instagram