Asianet Suvarna News

ಸಲ್ಮಾನ್ ಖಾನ್‌ಗೆ ಹದಿನೇಳು ವರ್ಷದ ಮಗಳಿದ್ದಾಳಂತೆ, ಹೌದಾ!

ಎವರ್‌ಗ್ರೀನ್‌ ಬ್ಯಾಚ್ಯುಲರ್ ಸಲ್ಮಾನ್ ಖಾನ್ ಹದಿನೇಳರ ಹರೆಯ ಮಗಳ ತಂದೆಯಾ ? ಇಷ್ಟು ವರ್ಷ ಯಾಕೆ ಈ ಸತ್ಯ ಮುಚ್ಚಿಟ್ಟರು ಬಾಲಿವುಡ್‌ ಬ್ಯಾಡ್‌ ಬಾಯ್‌..

 

Did Salman Khan have a daughter in Dubai
Author
Bengaluru, First Published Jul 22, 2021, 3:14 PM IST
  • Facebook
  • Twitter
  • Whatsapp

ಬಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಸಲ್ಮಾನ್ ಖಾನ್ ಎಂದೆ ಈವರೆಗೆ ಭಾವಿಸಲಾಗಿತ್ತು. ಆ ಮಾತನ್ನು ಜನ ಈಗ ಸಂಶಯದಿಂದ ನೋಡಲು ಶುರು ಮಾಡಿದ್ದಾರೆ. ಇದಕ್ಕೆ ಕಾರಣ ಸಲ್ಮಾನ್ ಖಾನ್‌ ಗೆ 17 ವರ್ಷದ ಹೆಣ್ಣು ಮಗು ಇದೆ ಎಂಬ ಸುದ್ದಿ.

ಅಷ್ಟಕ್ಕೂ ಸಲ್ಮಾನ್‌ ಖಾನ್ ಅವರ ಮೇಲಿನ ಈ ಗಾಸಿಪ್‌ ಅನ್ನು ಜನ ನಂಬಲೂ ಕಾರಣ ಇದೆ. ಆರಂಭದಿಂದಲೂ ಸಲ್ಮಾನ್‌ ಖಾನ್ ಹೆಸರು ಒಬ್ಬರಲ್ಲಾ ಒಬ್ಬರು ನಟಿಯ ಜೊತೆಗೆ ಕೇಳಿ ಬರುತ್ತಲೇ ಇತ್ತು. ಇದೀಗ ಸಲ್ಮಾನ್ ಅವರಿಗೆ ದೊಡ್ಡ ಮಗಳಿದ್ದಾಳೆ ಅನ್ನೋ ಸುದ್ದಿಯಿಂದ ಅವರ ರಿಲೇಶನ್‌ಶಿಪ್‌ಗೆ ಇನ್ನಷ್ಟು ರೆಕ್ಕೆ ಪುಕ್ಕ ಮೂಡಿದೆ.

ನಾನು ಬಿಟ್ಮೇಲೆ ಅದೆಷ್ಟು ಗರ್ಲ್‌ಫ್ರೆಂಡ್ಸ್ ಬಂದ್ರೋ ? ಸಲ್ಲು 12 ವರ್ಷ ಹಳೆಯ ಪ್ರೇಯಸಿ ಹೀಗಂದಿದ್ದೇಕೆ ?

ಅಷ್ಟಕ್ಕೂ ಈವರೆಗೆ ಸುದ್ದಿಯಲ್ಲೇ ಇಲ್ಲದ ಸಲ್ಮಾನ್ ಖಾನ್ ಮಗಳು ದಿಢೀರಂತ ಪ್ರತ್ಯಕ್ಷವಾದದ್ದು ಹೇಗೆ, ಇಷ್ಟು ಕಾಲ ಸಲ್ಮಾನ್ ಖಾನ್ ಇದನ್ನು ರಹಸ್ಯವಾಗಿಟ್ಟಿದ್ದರಾ ಅನ್ನೋ ಮಾತುಗಳೂ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ. ಆದರೆ ಈ ಎಲ್ಲ ಪುಕಾರುಗಳಿಗೆ ಕಾರಣ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಹಾಕಿದ ಪೋಸ್ಟ್. ಅದರಲ್ಲಿ ಸಲ್ಮಾನ್ ಖಾನ್ ಪತ್ನಿ ಹೆಸರು ನೂರ್. ಆಕೆ ದುಬೈನಲ್ಲಿದ್ದಾರೆ.

ಸಲ್ಮಾನ್ ಹಾಗೂ ನೂರ್ ದಾಂಪತ್ಯದ ಫಲವಾಗಿ ಅವರಿಗೆ 17 ವರ್ಷದ ಮಗಳೊಬ್ಬಳಿದ್ದಾಳೆ ಎಂಬ ಸುದ್ದಿಯನ್ನು ಆತ ಹಾಕಿದ್ದ. 'ಸಲ್ಮಾನ್ ಭಯದಲ್ಲಿ ಎಲ್ಲಿ ಅಡಗಿ ಕೂತಿದ್ದೀ? ನೂರ್ ಅನ್ನೋ ಹೆಸರಿನ ನಿನ್ನ ಪತ್ನಿ ಹಾಗೂ 17 ವರ್ಷದ ಮಗಳ ಜೊತೆಗೆ ನೀನು ದುಬೈನಲ್ಲಿ ಸಂಸಾರ ಮಾಡುತ್ತಿದ್ದೀಯ ಅನ್ನೋದು ಈಗ ಎಲ್ಲರಿಗೂ ಗೊತ್ತಿದೆ' ಎಂಬುದಾಗಿ ವ್ಯಕ್ತಿಯೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್ ಹಾಕಿದ್ದ.

ನಾನು ಬಿಟ್ಮೇಲೆ ಅದೆಷ್ಟು ಗರ್ಲ್‌ಫ್ರೆಂಡ್ಸ್ ಬಂದ್ರೋ ? ಸಲ್ಲು 12 ವರ್ಷ ಹಳೆಯ ಪ್ರೇಯಸಿ ಹೀಗಂದಿದ್ದೇಕೆ ?

ಬಹುಶಃ ಸೆಲೆಬ್ರಿಟಿ ಅದರಲ್ಲೂ ಸಲ್ಮಾನ್ ಖಾನ್ ರಂಥಾ ಸೆಲೆಬ್ರಿಟಿಗಳ ವಿಚಾರದಲ್ಲಿ ಇಂಥಾ ಮಾತುಗಳು ಬರುವುದು ಬಹಳ ಕಾಮನ್. ಇಷ್ಟೇ ಆಗಿದ್ದರೆ ಜನ ಅದನ್ನೋದಿ ನಕ್ಕು ಸುಮ್ಮನಾಗುತ್ತಿದ್ದರೋ ಏನೋ, ಆದರೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಗೆ ತಮ್ಮನನ್ನು ಕೀಟಲೆ ಮಾಡಿ ಕಾಲೆಳೆಯುವ ಮನಸ್ಸಾಗಿದೆ. ಅವರು ತಮ್ಮ 'ಕ್ವಿಕ್ ಹೀಲ್ ಪಿಂಚ್ ಬೈ ಅರ್ಬಾಜ್' ಅನ್ನೋ ಶೋನಲ್ಲಿ ತಮ್ಮ ಸಲ್ಮಾನ್ ಖಾನ್ ಅವರನ್ನು ಗೆಸ್ಟ್ ಆಗಿ ಕರೆದಿದ್ದಾರೆ.

ರಾಜ್‌ ಕುಂದ್ರಾ ನೀಲಿ ಚಿತ್ರ ಕಳಿಸುತ್ತಿದ್ದ ಆ್ಯಪ್‌ ಹಾಟ್‌ ಶಾಟ್ಸ್‌ನೊಳಗೇನಿದೆ ಗೊತ್ತಾ!

ಈ ಶೋನ ಉದ್ದೇಶವೇ ಸೆಲೆಬ್ರಿಟಿಗಳನ್ನು ಚಿವುಟುವಂಥಾ ಪ್ರಶ್ನೆ ಕೇಳಿ ಮಜಾ ತೆಗೆದುಕೊಳ್ಳೋದಾದ ಕಾರಣ ಸಲ್ಮಾನ್ ಖಾನ್‌ಗೂ ಪಿಂಚ್ ಮಾಡುವಂಥಾ ಪ್ರಶ್ನೆ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಬಗೆಗೆ ಬಂದ ಕಮೆಂಟ್ ಗಳ ಬಗೆಗೆಲ್ಲ ಹತ್ತಾರು ಪ್ರಶ್ನೆಗಳನ್ನು ಕೇಳ್ತಾರೆ ಅರ್ಬಾಜ್. ಅಷ್ಟೊತ್ತಿಗೆ ಸಲ್ಮಾನ್ ಮದುವೆ, ಮಗಳ ವಿಚಾರವೂ ಬಂದಿದೆ.

ಎಷ್ಟೇ ಲವ್ ಮಾಡಿದ್ರು ಸಲ್ಮಾನ್ ಸಂಬಂಧ ಮದುವೆಗೆ ತಲುಪೋದೇ ಇಲ್ಲ

ನೆಟ್ಟಗ ಕೇಳಿದ ಸಲ್ಮಾನ್ ಎಲ್ಲಿ ಅಡಗಿದ್ದೀಯ, ನೀನು ಪತ್ನಿ ನೂರ್ ಹಾಗೂ ಹದಿನೇಳು ವರ್ಷದ ಮಗಳೊಂದಿಗೆ ದುಬೈಯಲ್ಲಿರುವುದು ಎಲ್ಲಿರಿಗೂ ಗೊತ್ತು ಅನ್ನೋ ಮಾತನ್ನೂ ಸಲ್ಮಾನ್ ಗೆ ತಿಳಿಸಲಾಯ್ತು. ಆಗ ಅಚ್ಚರಿ ಪಡುವ ಸರದಿ ಸಲ್ಮಾನ್ ಅವರದ್ದು. ತನಗೇ ಗೊತ್ತಿಲ್ಲದ ಹೆಂಡತಿ, ಮಗಳ ಬಗ್ಗೆ ಹೀಗೊಂದು ಮಾತು ಹರಿದಾಡುತ್ತಿರುವುದು ಅವರ ಹುಬ್ಬು ಮೇಲೇರಲು ಕಾರಣವಾಯ್ತು.

ಬ್ಲೂಫಿಲಂ ಕೂಪಕ್ಕೆ ತಳ್ಳಿದ್ದು ಕುಂದ್ರಾ: ಪೂನಂ, ಶೆರ್ಲಿನ್‌ ಆರೋಪ!

ತನ್ನ ಬಗ್ಗೆ ಹೀಗೆಲ್ಲ ಬರೆದುಕೊಂಡ ನೆಟ್ಟಿಗನಿಗೆ ಬ್ಯಾಡ್ ಬಾಯ್ ಚೆನ್ನಾಗಿ ಝಾಡಿಸಿದ್ರು. 'ನಮ್ಮ ಜನರಿಗೆ ನಾನೇನು ಅನ್ನುವುದು ಗೊತ್ತಿದೆ. ಇದೆಲ್ಲ ನಾನ್‌ ಸೆನ್ಸ್. ಇಂಥದ್ದನ್ನೆಲ್ಲ ಎಲ್ಲಿ ಪೋಸ್ಟ್ ಮಾಡ್ತಾರೆ ಅನ್ನೋದೂ ನನಗೆ ಗೊತ್ತಿಲ್ಲ. ಆದರೆ ನಾನು ಇಂಥಾ ಮಾತುಗಳಿಗೆ ರೆಸ್ಪಾನ್ಸ್ ಮಾಡಬಹುದು, ಅವರಿಗೆ ಮರ್ಯಾದೆ ಕೊಡಬಹುದು ಅಂತ ಅವರು ಅಂದುಕೊಂಡಿದ್ದರೆ ನಾನೇನು ಮಾಡೋಕೋ ಆಗಲ್ಲ. ನನಗೆ ಹೆಂಡತಿ ಇಲ್ಲ. ನಾನಿರೋದು ಭಾರತದಲ್ಲೇ. ನನ್ನ 9ನೇ ವರ್ಷದಿಂದಲೂ ಮುಂಬೈಯ ಗೆಲ್ಯಾಕ್ಸಿ ಅಪಾರ್ಟ್ ಮೆಂಟ್‌ನಲ್ಲಿ ಬದುಕುತ್ತಿದ್ದೇನೆ. ಅದು ಇಡೀ ದೇಶಕ್ಕೇ ಗೊತ್ತು. ಇನ್ನು ಇಂಥಾ ವಿಕೃತ ಮನಸ್ಸಿನವರಿಗೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ'  ಎಂದು ಸಲ್ಮಾನ್ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Follow Us:
Download App:
  • android
  • ios