ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗುವನ್ನು ಫೆಬ್ರವರಿ 21, 2021 ರಂದು ಸ್ವಾಗತಿಸಿದ್ದಾರೆ. ಕರೀನಾ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಅವರು ತಮ್ಮ ಗಂಡು ಮಗುವಿಗೆ ಜನ್ಮ ನೀಡಿದರು. ರಣಧೀರ್ ಕಪೂರ್ ಸೋಮವಾರ ಗಂಡು ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ರಣಧೀರ್ ತಕ್ಷಣ 'ಆಕಸ್ಮಿಕ' ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ ಪೋಸ್ಟ್‌ನ ಸ್ಕ್ರೀನ್ ಶಾಟ್ ವೈರಲ್ ಆಗಿದೆ.

ಮುಂಬೈನಲ್ಲಿ 16 ಕೋಟಿಯ ಅಪಾರ್ಟ್‌ಮೆಂಟ್ ಖರೀದಿಸಿದ ಸನ್ನಿ

ಕರೀನಾ ಕಪೂರ್ ಖಾನ್ ಈಗಾಗಲೇ ಕೆಲಸಕ್ಕೆ ಮರಳಿದ್ದಾರೆ. ಆದರೆ ದೇಶದಲ್ಲಿ COVID-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಾಗ ಹೊಸ ಮಮ್ಮಿ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ.

ಕಳೆದ ವಾರ, ಕರೀನಾ ಅವರು ಮುಂಬೈನಲ್ಲಿ ಕಾಣಿಸಿಕೊಂಡರು. ನಟಿ ಎಂದಿನಂತೆ ಪಾಪರಾಜಿಗಳಿಗೆ ತಾಳ್ಮೆಯಿಂದ ಪೋಸ್ ನೀಡಿದ್ದಾರೆ. ಆದರೆ ಇಡೀ ಸಮಯದಲ್ಲಿ ನಟಿ ಮಾಸ್ಕ್ ಧರಿಸಿದ್ದರು.