Asianet Suvarna News Asianet Suvarna News

ಬ್ಯಾನ್​ ನಡುವೆಯೂ ಭರ್ಜರಿ ಕಲೆಕ್ಷನ್​- The Kerala Storyಗೆ ನಂ.1 ಪಟ್ಟ!

ಸತ್ಯ ಘಟನೆಯನ್ನು ಸಹಿಸಿದೇ ಕೆಲವರು ಕಿಡಿ ಕಾರುತ್ತಿರುವ ನಡುವೆಯೂ ದಿ ಕೇರಳ ಸ್ಟೋರಿ ನಂ.1 ಸ್ಥಾನ ಗಳಿಸಿದೆ. 
 

Adah Sharmas The Kerala Story is highest opening female led Bollywood film ever
Author
First Published May 12, 2023, 5:36 PM IST | Last Updated May 12, 2023, 5:36 PM IST

ಸುದಿಪ್ತೋ ಸೇನ್‌ ನಿರ್ದೇಶನ ಮಾಡಿರುವ 'ದಿ ಕೇರಳ ಸ್ಟೋರಿ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸಕತ್ ಸೌಂಡ್​ ಮಾಡುತ್ತಿದೆ. ಆಸೀಫಾ ಎಂಬ ಯುವತಿಯೇ ಇಲ್ಲಿ ಇಲ್ಲಿ ವಿಲನ್​.  ನರ್ಸಿಂಗ್​ ಕಲಿಯಲು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಳ್ಳೋ ಆಸೀಫಾ, ತನ್ನ ರೂಮ್​ಮೇಟ್ಸ್​ಗಳ ಬ್ರೇನ್​ವಾಷ್​ ಮಾಡುವುದು ದಿ ಕೇರಳ ಸ್ಟೋರಿಯ ಕಥಾ ಹಂದರ.  ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್ ಎಂಬ ರೂಮ್​ಮೇಟ್ಸ್​ಗಳ  ಬ್ರೇನ್ ವಾಷ್ ಮಾಡುತ್ತಾಳೆ ಆಸೀಫಾ. ಇಸ್ಲಾಂ ಬಗ್ಗೆ ಬ್ರೇನ್​ ವಾಷ್​ ಮಾಡಿ ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು  ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡುತ್ತಾಳೆ, ಐಸಿಸ್​ ಉಗ್ರ ಸಂಘಟನೆಗೆ ಸೇರಿಸುತ್ತಾಳೆ. ಇದು ಕೇರಳದಲ್ಲಿ ನಡೆದ ಸಹಸ್ರಾರು ಯುವತಿಯರ ಮತಾಂತರ ಭಯಾನಕ ಕಥೆಯಾದರೂ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿರುವ ನೈಜ ಚಿತ್ರಣ ಕೂಡ ಹೌದು ಎಂದಿದ್ದಾರೆ ಸುದಿಪ್ತೋ.

ಆದರೆ ಈ  ನೈಜ ಘಟನೆಯನ್ನು ನೋಡಿ ಸಹಿಸಿಕೊಳ್ಳಲು ಆಗದ ಒಂದು ವರ್ಗ ಭಾರಿ ಪ್ರತಿರೋಧ ಮಾಡುತ್ತಿದೆ. ಇದರ  ನಡುವೆಯೇ ಚಿತ್ರ ಇದಾಗಲೇ ಬ್ಲಾಕ್​ಬಸ್ಟರ್​ (Blockbuster) ಎನಿಸಿಕೊಂಡಿದೆ. ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​, ಕಮ್ಯೂನಿಸ್ಟ್​ ಪಕ್ಷಗಳು ಈ ಭಯಾನಕ ಸತ್ಯ ಘಟನೆಯ ಚಿತ್ರವನ್ನು ಸಹಿಸಿಕೊಳ್ಳದೇ ತಮ್ಮ ರಾಜ್ಯಗಳಲ್ಲಿ ಚಿತ್ರಗಳನ್ನು ಬ್ಯಾನ್​ ಮಾಡಿದ್ದರೂ, ದಿ ಕೇರಳ ಸ್ಟೋರಿ  ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಕೆಲವು ರಾಜ್ಯಗಳು  ಸಿನಿಮಾವನ್ನು ಬ್ಯಾನ್ ಮಾಡಿದ್ದರೂ ಕೆಲವು ರಾಜ್ಯಗಳು ಸಿನಿಮಾಕ್ಕೆ ವಿನಾಯಿತಿ ನೀಡಿವೆ. ಇವೆಲ್ಲವುಗಳ ನಡುವೆಯೂ  ಬಾಕ್ಸ್ ಆಫೀಸ್‌ನಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾದ ಬಾಕ್ಸ್ ಆಫೀಸ್‌ ಕಲೆಕ್ಷನ್ ಜೋರಾಗಿದೆ.  

The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'

'ದಿ ಕೇರಳ ಸ್ಟೋರಿ' ಮೊದಲ ವಾರದಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ (Box Office) ರೂ 81 ಕೋಟಿ ನಿವ್ವಳ ಗಳಿಸಿದೆ.  ಚಿತ್ರದ ಕಲೆಕ್ಷನ್ ಗಣನೀಯವಾಗಿದೆ. ವಾಸ್ತವವಾಗಿ, ಈ ಚಿತ್ರವು ಈಗ ಇತಿಹಾಸದಲ್ಲಿ ಅತಿ ಹೆಚ್ಚು ತೆರೆಕಂಡ ಮಹಿಳಾ ನಾಯಕತ್ವದ ಬಾಲಿವುಡ್ ಚಲನಚಿತ್ರವಾಗಿದೆ. ಕಂಗನಾ ರಣಾವತ್​,  ಆಲಿಯಾ ಭಟ್ ಮತ್ತು ವಿದ್ಯಾ ಬಾಲನ್ ಅವರಂತಹ ಹಿಟ್‌ ಚಿತ್ರಗಳನ್ನು ಈ ಚಿತ್ರ ಮೀರಿಸಿದೆ. ಇಲ್ಲಿ ವಿಲನ್​ ಕೂಡ ಮಹಿಳೆಯೇ ಆಗಿದ್ದರೂ ಇಲ್ಲಿ ಮಹಿಳೆಯೇ ನಾಯಕಿ. ಅದಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ.  ಅದಾ ಶರ್ಮಾ(Adah Sharma)ರ ಅದ್ಭುತ ನಟನೆಯ ಬಗ್ಗೆ ಇದಾಗಲೇ ನೀವು ಕೇಳಿರಬಹುದು. ಪರಕಾಯ ಪ್ರವೇಶ ಮಾಡಿದವರಂತೆ ಅತ್ಯದ್ಭುತವಾಗಿ ನಟಿಸಿರುವ ಬಗ್ಗೆ ಚಿತ್ರ ವಿಮರ್ಶಕರು ಇದಾಗಲೇ ಬಣ್ಣಿಸಿದ್ದಾರೆ. ಮತಾಂತರಗೊಂಡ ಮೇಲೆ ಒಬ್ಬ ಹೆಣ್ಣು ಅನುಭವಿಸುವ ನರಕಯಾತನೆಯ ದೃಶ್ಯಗಳನ್ನು ​ನಟನೆಯೆನ್ನದೇ ಸಹಜ ರೀತಿಯಲ್ಲಿ ನಟಿಸಿ ಭೇಷ್​ ಅನ್ನಿಸಿಕೊಂಡಿದ್ದಾರೆ ಅದಾ ಶರ್ಮಾ.   ಅದಾ ಶರ್ಮಾ ಜೊತೆಗೆ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ನಟಿಸಿರುವ ಈ ಚಿತ್ರವು ಎಲ್ಲಾ ಮಹಿಳಾ ನೇತೃತ್ವದ ಶೀರ್ಷಿಕೆಯಾಗಿದೆ. ಮಹಿಳಾ ನೇತೃತ್ವದ ಹಿಂದಿ ಚಲನಚಿತ್ರದಿಂದ ಅತಿ ಹೆಚ್ಚು ಆರಂಭಿಕ ವಾರದ ಸಂಗ್ರಹಗಳ ಹಿಂದಿನ ದಾಖಲೆಯನ್ನು ಇದು ಸುಲಭವಾಗಿ ಮೀರಿಸಿದೆ. 

ಕಂಗನಾ ರಣಾವತ್ ಅವರ ತನು ವೆಡ್ಸ್ ಮನು ರಿಟರ್ನ್ಸ್ 2015 ರಲ್ಲಿ ಮೊದಲ ವಾರದಲ್ಲಿ 69.95 ಕೋಟಿ ಗಳಿಸಿದಾಗ ಆ ದಾಖಲೆಯನ್ನು ಹೊಂದಿದೆ.ಆಲಿಯಾ ಭಟ್ (Alia Bhatt) ಅವರ ಗಂಗೂಬಾಯಿ ಕಥಿಯಾವಾಡಿ ಮೊದಲ ವಾರದಲ್ಲಿ 68.83 ಕೋಟಿ ರೂಪಾಯಿಗಳ ನಿವ್ವಳ ಕಲೆಕ್ಷನ್‌ಗಳೊಂದಿಗೆ ಮುಂದಿನ ಸ್ಥಾನದಲ್ಲಿದೆ, ನಂತರ ಕಂಗನಾ ಅವರ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ, ಮೊದಲ ವಾರದಲ್ಲಿ ಅದರ ಹಿಂದಿ ಆವೃತ್ತಿಯಲ್ಲಿ 57.95 ಕೋಟಿ ಗಳಿಸಿತು. ಆಲಿಯಾ ಭಟ್ ಅವರ ರಾಝಿ ಟಾಪ್ ಐದರಿಂದ ಹೊರಗುಳಿದಿದೆ. ವೀರೇ ದಿ ವೆಡ್ಡಿಂಗ್ (ರೂ. 81 ಕೋಟಿ), ದಿ ಡರ್ಟಿ ಪಿಕ್ಚರ್ (ರೂ. 80 ಕೋಟಿ), ಮತ್ತು ನೀರ್ಜಾ (ರೂ. 75 ಕೋಟಿ) ನಂತಹ ಹಲವಾರು ಮಹಿಳಾ-ನೇತೃತ್ವದ ಬಾಲಿವುಡ್ ಹಿಟ್‌ಗಳ ಜೀವಿತಾವಧಿಯ ಸಂಗ್ರಹವನ್ನು ಕೇರಳ ಸ್ಟೋರಿ ಈಗಾಗಲೇ ಮೀರಿಸಿದೆ.  

The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

Latest Videos
Follow Us:
Download App:
  • android
  • ios