ವಿಕ್ಕಿ ಕೌಶಾಲ್ ಅಭಿನಯದ ಛಾವ ಚಿತ್ರ 11 ದಿನಕ್ಕೆ ಸರಿಸುಮಾರು 350 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿರುವ ಛಾವ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಛಾವ ಚಿತ್ರದ ವಿರುದ್ದ 100 ಕೋಟ ರೂಪಾಯಿ ಡಿಫೆಮೇಶನ್ ಕೇಸ್ ಸಂಕಷ್ಟ ಎದುರಾಗಿದೆ.
ಮುಂಬೈ(ಫೆ.24) ವಿಕ್ಕಿ ಕೌಶಾಲ್ ಅಭಿನಯದ ಛಾವಾ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಛಿತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ಛಾವ ಚಿತ್ರ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಪ್ರಧಾನಿ ಮೋದಿ ಸೇರಿ ಹಲವರು ಚಿತ್ರವನ್ನು ಶ್ಲಾಘಿಸಿದ್ದಾರೆ. ಅಸಲಿ ಇತಿಹಾಸದ ಅನಾವರಣ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಛಾವ ಚಿತ್ರತಂಡಕ್ಕೆ ಭಾರಿ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. 11 ದಿನದಲ್ಲಿ ಛಾವ ಚಿತ್ರ ಸರಿಸುಮಾರು 350 ಕೋಟಿ ರೂಪಾಯಿ ಸಂಗ್ರಹಿಸಿದೆ. ಯಶಸ್ಸಿನ ಬೆನ್ನಲ್ಲೇ ಛಾವಾ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಇದೀಗ ಛಾವ ಚಿತ್ರದ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿದೆ. ಈ ಕೇಸ್ ಬೆನ್ನಲ್ಲೇ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಕ್ಷಮೆ ಕೇಳಿದ್ದಾರೆ.
ಛಾವ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ ಪಾತ್ರದಲ್ಲಿ ವಿಕ್ಕಿ ಕೌಶಾಲ್ ಅಭಿನಯಸಿದ್ದರೆ, ಮಹಾರಾಣಿ ಯೇಸುಭಾಯಿ ಬೋನ್ಸಾಲೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭನಯಿಸಿದ್ದಾರೆ. ಈ ಚಿತ್ರದಲ್ಲಿ ಸಂಭಾಜಿ ಮಹಾರಾಜರ ಅವನತಿ ಆರಂಭವಾಗುವುದು ಮರಾಠ ಕ್ಷತ್ರಿಯ ಗಾನೋಜಿ ಹಾಗೂ ಕಾನೋಜಿ ಯೋಧರು ಸಂಭಾಜಿ ಸೈನ್ಯ ತೊರೆದು ಔರಂಗಜೇಬ್ ಸೇನೆ ಸೇರಿದ ಬಳಿಕ ಎಂದು ಚಿತ್ರಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಇದೀಗ ಗಾನೋಜಿ ಹಾಗೂ ಕಾನೋಜಿ ವಂಶಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಪೂರ್ವಜರನ್ನು ಛಾವ ಚಿತ್ರದಲ್ಲಿ ಕೆಟ್ಟದಾಗಿ ಚಿತ್ರಿಸಲಾಗಿದೆ. ಮರಾಠ ಯೋಧರ ಕುಟುಂಬ ನಮ್ಮದು. ಪೂರ್ವಜರನ್ನು ಮೋಸಗಾರರ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ತಪ್ಪು ಇತಿಹಾಸ ಎಂದು ಕಾನೋಜಿ, ಗಾನೋಜಿ ವಂಶಸ್ಥ ಕುಟುಂಬದ 13ನೇ ತಲೆಮಾರಿನ ಲಕ್ಷ್ಮಿಕಾಂತ್ ರಾಜೆ ಶೀರ್ಕೆ ಹಾಗೂ ಭೂಷಣ್ ಶಿರ್ಕೆ ಆರೋಪಿಸಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ಛಾವಾ ಚಿತ್ರತಂಡಕ್ಕೆ ಅಲ್ಲು ಅರ್ಜುನ್ ಕರೆ ಮಾಡಿದ್ದೇಕೆ?
ಈ ಕುರಿತು ಛಾವ ನಿರ್ದೇಶಕ ಲಕ್ಷ್ಮಣ್ ಉಟೇಕರ್‌ಗೆ ವಕೀಲರ ಮುಕಾಂತರ ನೋಟಿಸ್ ನೀಡಿದ್ದಾರೆ. ಬರೋಬ್ಬರಿ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಮರಾಠ ಯೋಧರ ಕುಟುಂಬ ನಮ್ಮದು. ಮರಾಠ ಏಳಿಗೆ, ಮರಾಠ ನೆಲಕ್ಕಾಗಿ ರಕ್ಕ ಹರಿಸಿದೆ. ಆದರೆ ಚಿತ್ರದಲ್ಲಿ ಪೂರ್ವಜನರ ಅಪಮಾನ ಮಾಡಲಾಗಿದೆ ಹೀಗಾಗಿ 100 ಕೋಟಿ ರೂಪಾಯಿ ಡಿಫಮೇಶನ್ ಕೇಸ್ ಕುರತು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನೋಟಿಸ್ ಸಿಕ್ಕ ಬೆನ್ನಲ್ಲೇ ಲಕ್ಷ್ಮಣ್ ಉಟೇಕರ್ ಕ್ಷಮೆ ಕೇಳಿದ್ದಾರೆ. ಛಾವ ಚಿತ್ರ ಸಂಭಾಜಿ ಮಹಾರಾಜರ ಕತೆಯನ್ನು ಜನರಿಗೆ ತಲುಪಿಸಲು ಮಾಡಿದ ಚಿತ್ರ. ಇಲ್ಲಿ ಯಾರಿಗೂ ನೋವು ಮಾಡುವ ಉದ್ದೇಶವಿಲ್ಲ. ಛಾವ ಚಿತ್ರದಿಂದ ನೋವಾಗಿದ್ದರೆ ಕ್ಷಮೆ ಇರಲಿ. ಈ ಕುರಿತು ಭೇಷರತ್ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಇದೇ ವೇಳೆ ಕೆಲ ಸ್ಪಷ್ಟನೆಯನ್ನು ನೀಡಿದ್ದಾರೆ. ಸಂಭಾಜಿ ಮಾಹಾಜರ ಸೇನೆಯಿಂದ ಹಣದ ಹಾಗೂ ಇತರ ಆಮಿಷಕ್ಕೆ ಔರಂಗಜೇಬ್ ಸೇನೆ ಸೇರಿದ ಇತಿಹಾಸವಿದೆ. ಚಿತ್ರದಲ್ಲಿ ಗಾನೋಜಿ ಹಾಗೂ ಕಾನೋಜಿ ಗ್ರಾಮದ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಇಲ್ಲಿ ಯಾವುದೇ ಸಮುದಾಯದ ಹೆಸರು, ಕುಟುಂಬದ ಹೆಸರು ಬಳಸಿಲ್ಲ. ಯಾರನ್ನು ನೋಯಿಸುವುದು ನಮ್ಮ ಉದ್ದೇಶವಲ್ಲ ಎಂದು ಉಟೇಕರ್ ಹೇಳಿದ್ದಾರೆ. ಉತ್ತಮ ಚಿತ್ರ ಮಾಡಿದ್ದೇವೆ. ಭಾರಿ ಮುತುವರ್ಜಿ ವಹಿಸಿದ್ದೇವೆ. ಎಲ್ಲೂ ಅಪಚಾರವಾಗದಂತೆ ನೋಡಿಕೊಂಡಿದ್ದೇವೆ. ಆದರೆ ಚಿತ್ರದಿಂದ ಕುಟುಂಬಕ್ಕೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಉಟೇಕರ್ ಹೇಳಿದ್ದಾರೆ.
ಇತ್ತ ಶಿರ್ಕೆ ಕುಟುಂಬ ಚಿತ್ರದಲ್ಲಿ ಕೆಲ ಮಾರ್ಪಾಡು ಮಾಡಲು ಸೂಚಿಸಿದೆ. ಪೂರ್ವಜರ ಅವಮಾನಿಸುವ ಘಟನೆಗೆ ಕತ್ತರಿ ಹಾಕಲು ಅಥವಾ ಬದಲಾಯಿಸಲು ಸೂಚಿಸಿದೆ. ಚಿತ್ರತಂಡ ಇದಕ್ಕೆ ಸ್ಪಂದಿಸಲಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಛಾವಾ ಚಿತ್ರದ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಲುಕ್‌ಗೆ ಫ್ಯಾನ್ಸ್ ಫಿದಾ
