ಸಾವಿನ ಮನೆಯಲ್ಲಿ ಧರಿಸಿದ ಬಟ್ಟೆ ಮಾರುತ್ತಿದ್ದಾರೆ ದೀಪಿಕಾ ಸಾವಿನ ಮನೆಯಲ್ಲಿ ಧರಿಸಿದ್ದ ಡ್ರೆಸ್ ಹರಾಜು ಹಾಕಿದ ನಟಿ

    ಸ್ಟಾರ್ ಸೆಲೆಬ್ರಿಟಿಗಳು ತಾವು ಧರಿಸಿದ ದುಬಾರಿ ಬಟ್ಟೆಗಳನ್ನು ಆನ್‌ಲೈನ್ ಮೂಲಕ ಹರಾಜು ಮಾಡುವುದು ಹೊಸದೇನಲ್ಲ. ಸಾಮಾನ್ಯವಾಗಿ ಕಿರುತೆರೆಯಿಂದ ಬೆಳ್ಳಿ ಪರದೆ ತನಕ ಬಹಳಷ್ಟು ನಟಿಯರು ಇದನ್ನು ಮಾಡುತ್ತಾರೆ. ತಮ್ಮ ಸ್ಪೆಷಲ್ ಡ್ರೆಸ್, ಯಾವುದೋ ವೀಶೇಷ ಸಂದರ್ಭದ ಬಟ್ಟೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಸ್ಟಾರ್ ನಟಿಯರ ಉಡುಗೆ ಕೊಳ್ಳಲು ಅಭಿಮಾನಿಗಳೂ ಮುಗಿಬೀಳುತ್ತಾರೆ. ಬಿಗ್‌ಬಾಸ್ ವಿನ್ನರ್ ರುಬೀನಾ ದಿಲಾಯಕ್ ಕೂಡಾ ತಮ್ಮ ವಿನ್ನಿಂಗ್ ಗೌನ್ ಹರಾಜು ಹಾಕಿದ್ದರು. ಇದರಿಂದ ಬರುವ ಹಣವನ್ನು ಒಳ್ಳೆ ಕೆಲಸಗಳಿಗಾಗಿ ಬಳಸುತ್ತಾರೆ. ಆದರೆ ದೀಪಿಕಾ ಪಡುಕೋಣೆ ಮರು ಮಾರಾಟ ಮಾಡ್ತಿರೋದೇನು ಗೊತ್ತಾ ?

    ನಟಿ ದೀಪಿಕಾ ಪಡುಕೋಣೆ ಹಲವು ಗಣ್ಯರ ಅಂತಿಮ ದರ್ಶನಕ್ಕೆ, ಸಾವಿನ ಮನೆಗೆ ಧರಿಸಿಕೊಂಡು ಹೋದ ದುಬಾರಿ ಬಿಳಿ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ನಟಿ ಈಗ ಟ್ರೋಲ್ ಆಗಿದ್ದಾರೆ. ದೀಪಿಕಾ ಪಡುಕೋಣೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದಲ್ಲದೆ, ಮಾನಸಿಕ ಅಸ್ವಸ್ಥತೆ ಹೊಂದಿರುವ ಜನರಿಗೆ ಸಹಾಯ ಮಾಡುವ ಲೈವ್, ಲಾಫ್, ಲವ್ ಫೌಂಡೇಶನ್ ಅನ್ನು ನಡೆಸುತ್ತಿದ್ದಾರೆ.

    Scroll to load tweet…

    ದತ್ತಿಗಳನ್ನು ಬೆಂಬಲಿಸಲು, ನಟಿ ಆಗಾಗ ತನ್ನ ಕ್ಲೋಸೆಟ್‌ಗಳಿಂದ ಬಟ್ಟೆಗಳನ್ನು ಮಾರುತ್ತಾರೆ. ಲೈವ್ ಲಾಫ್ ಲವ್ ವೆಬ್‌ಸೈಟ್‌ನಲ್ಲಿ ನಟಿ ಕೌಚರ್ ಮತ್ತು ನಾನ್-ಕೌಚರ್ ಐಟಂಗಳನ್ನು ಹಾಕಿದ್ದಾರೆ. ಅಲ್ಲಿ ನೆಟಿಜನ್‌ಗಳು ಬಟ್ಟೆಗಳನ್ನು ಮಾರಾಟದಲ್ಲಿ ಖರೀದಿಸಬಹುದು. ಆದರೂ ಮಂಗಳವಾರ ನಟಿ ಎರಡು ನಿರ್ದಿಷ್ಟ ಬಟ್ಟೆ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದಕ್ಕಾಗಿ ಟ್ರೋಲ್ ಆಗಿದ್ದಾರೆ.

    ಗಂಡನ ಜೊತೆ ನಟಿಸೋಕೆ ಗಂಡನಷ್ಟೇ ಸಂಭಾವನೆ ಕೇಳಿದ ದೀಪಿಕಾ: ನೋ ಎಂದ ಬನ್ಸಾಲಿ

    ಮೊದಲನೆಯದು ಪಿನ್-ಟಕ್ ಟಾಪ್ ಆಗಿದ್ದು ಆಕೆ ತನ್ನ ಹೌಸ್‌ಫುಲ್ ಸಹನಟಿ ಜಿಯಾ ಖಾನ್ ಅವರ ಅಂತ್ಯಕ್ರಿಯೆಯ ಸಂದರ್ಭ ಅದನ್ನು ಧರಿಸಿದ್ದರು. ಲಾಂಗ್ ಕುರ್ತಿಯನ್ನು ದೀಪಿಕಾ ಪ್ರಿಯಾಂಕಾ ಚೋಪ್ರಾ ಅವರ ತಂದೆ ಡಾ ಅಶೋಕ್ ಚೋಪ್ರಾ ಅವರ ಪ್ರಾರ್ಥನಾ ಸಭೆಯಲ್ಲಿ ಧರಿಸಿದ್ದರು. ಎರಡು ಉಡುಪುಗಳು ಅಭಿಮಾನಿಗಳನ್ನು ಕೆರಳಿಸಿದೆ. ಅವರು ಎರಡು ಕುರ್ತಿಗಳನ್ನು ಮಾರಾಟ ಮಾಡುವುದು 'ಚೀಪ್' ಎಂದು ಕರೆದಿದ್ದಾರೆ.

    ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ .. ನನ್ನ ನೆಚ್ಚಿನ ದೀಪಿಕಾ ಪಡುಕೋಣೆ 2013 ರಿಂದ ತನ್ನ ನಾನ್ -ಕೋಚರ್ ಬಟ್ಟೆಗಳನ್ನು ಹರಾಜು ಹಾಕಿದ್ದಾರೆ .. ನಾನು 2013 ಅನ್ನು ಪುನರಾವರ್ತಿಸುತ್ತೇನೆ, ಆಕೆ ಇವನ್ನು ವಿವಿಧ ಅಂತ್ಯಕ್ರಿಯೆಗಳಿಗೆ ಧರಿಸಿದ್ದರು ಎಂದು ಟ್ವೀಟ್ ಮಾಡಲಾಗಿದೆ.

    Scroll to load tweet…

    ದೀಪಿಕಾ ಇದನ್ನು ದಾನಕ್ಕಾಗಿ ಮಾಡುತ್ತಿದ್ದಾಳೆ ಎಂದು ಹೇಳುವ ಮೂಲಕ ಇದನ್ನು ಸಮರ್ಥಿಸಿಕೊಳ್ಳಬೇಡಿ. 10 15 ವರ್ಷದ ಸಾಮಾನ್ಯ ಬ್ರಾಂಡ್ ಬಟ್ಟೆಗಳನ್ನು ಮರುಮಾರಾಟ ಮಾಡಲು ಸಾಧ್ಯವಿಲ್ಲ. ಯಾಕೆ ನೀವು ಅದನ್ನು ನಿರ್ಗತಿಕರಿಗೆ ನೀಡುವುದಿಲ್ಲ ? ಅಥವಾ ನಿಮ್ಮ ಮನೆಯ ಸಹಾಯಕರಿಗೆ ಕೊಡಬಹುದಲ್ಲಾ ಎಂದು ಪ್ರಶ್ನಿಸಿದ್ದಾರೆ.