ಪದ್ಮಾವತಿಯಾಗಿ ಈಕೆಯನ್ನು ನೋಡಿದ ನಂತರ ಏನಾದ್ರೂ ವಿಭಿನ್ನವಾಗಿ ನೋಡಬೇಕೆಂದು ಬಯಸುತ್ತಿದ್ದ ಅಭಿಮಾನಿಗಳಿಗೆ ದೀಪಿಕಾ ಗುಡ್ ನ್ಯೂಸ್ ನೀಡಿದ್ದಾರೆ.

ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ

ಮಹಾಭಾರತದ 'ದ್ರೌಪದಿ' ಪಾತ್ರದಲ್ಲಿ ಮಿಂಚಲು ದೀಪಿಕಾ ರೆಡಿಯಾಗಿದ್ದಾರೆ. ಅಷ್ಟೇ ಅಲ್ಲದೆ ಇದನ್ನು ಎರಡು ಭಾಗವಾಗಿ ವಿಂಗಡಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಧು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರೀಕರಣದ ಮೊದಲ ಭಾಗವನ್ನು ದೀಪಾವಳಿಗೆ ಶುರು ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ದ್ರೌಪದಿಯನ್ನು ಗಂಡಸರ ದೃಷ್ಟಿಯಲ್ಲಿ ಒಂದು ಕಥೆ ಮಾಡಿದರೆ, ಹೆಂಗಸರ ದೃಷ್ಟಿಯಲ್ಲಿ ಬೇರೆ ಕಥೆ ಮಾಡಲಾಗಿದೆ. ಆಕೆಯ ಮತ್ತೊಂದು ರೂಪವನ್ನು ಜನರಿಗೆ ತೋರಿಸುವ ಪ್ರಯತ್ನಕ್ಕೆ ದೀಪಿಕಾ ಕೈ ಹಾಕಿದ್ದಾರೆ.

ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!

'ಪದ್ಮಾವತಿ' ಚಿತ್ರದ ನಂತರ ಮೇಘನಾ ಗುಲ್ಜಾರ್ ಆ್ಯಸಿಡ್ ಆಟ್ಯಾಕ್ ಕಥೆಯಾದ 'ಚಪಾಕ್' ಹಾಗೂ ಕಬೀರ್ ಸಿಂಗ್ ಚಿತ್ರವಾದ '83' ಮುಗಿದ ನಂತರ ದ್ರೌಪದಿ ಪ್ರಾಜೆಕ್ಟ್ ಶುರು ಮಾಡಲಿದ್ದಾರೆ.

ನರೇಂದ್ರ ಮೋದಿಯ 'ಭಾರತ ಕಿ ಲಕ್ಷ್ಮಿ' ಕ್ಯಾಂಪೇನ್‌ನಲ್ಲಿ ಬ್ಯಾಡ್ಮಿಂಟನ್ ಪಟು ಪಿ.ವಿ ಸಿಂದು ಹಾಗೂ ದೀಪಿಕಾ ಪಡುಕೋಣೆ 'Achievements of Inian Women' ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ' ಈ ದೀಪಾವಳಿಗೆ ಬೆಳಕು ಚೆಲ್ಲುತಾ ಹೆಣ್ಣು ಮಕ್ಕಳ ಸಾಧನೆಗೆ ಬೆನ್ನು ತಟ್ಟೋಣ' ಎಂದು ಬರೆದುಕೊಂಡಿದ್ದಾರೆ.