ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್‌ಗೆ ಕನ್ನಡ ಕಲಿಸಿದ ದೀಪಿಕಾ ಪಡುಕೋಣೆ, ವಿಡಿಯೋ!
ಪಾಪ್ ಗಾಯಕ್ ದಿಲ್ಜಿಜ್ ದೋಸಾಂಜ್ ಮ್ಯೂಸಿಕ್ ಕಾನ್ಸರ್ಟ್ ಬೆಂಗಳೂರಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ವೇದಿಕೆಯಲ್ಲಿ ನಟಿ ದೀಪಾಕ ಪಡುಕೋಣೆ ದಿಲ್ಜಿತ್ ದೋಸಾಂಜ್‌ಗೆ ಕನ್ನಡ ಕಲಿಸಿದ್ದಾರೆ. ಈ ವಿಡಿಯೋ ಸದ್ದು ಮಾಡುತ್ತಿದೆ.
ಬೆಂಗಳೂರು(ಡಿ.07) ಪಾಪ್ ಸೆನ್ಸೇಶನ್ ದಿಲ್ಜಿತ್ ದೋಸಾಂಜ್ ದಿಲ್ ಲೂಮಿನಾಟಿ ಮ್ಯೂಸಿಕ್ ಕಾನ್ಸರ್ಟ್ ಬೆಂಗಳೂರಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಮ್ಯೂಸಿಕ್ ಶೋ ವಿಡಿಯೋಗಳು ಇದೀಗ ಭಾರಿ ಸದ್ದು ಮಾಡುತ್ತಿದೆ. ವಿಶೇಷ ಅಂದರೆ ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಮ್ಯೂಸಿಕ್ ಶೋ ವೇದಿಕೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಅದ್ಧೂರಿಯಾಗಿ ದೀಪಿಕಾ ಪಡುಕೋಣೆ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದರು. ಇಷ್ಟೇ ಅಲ್ಲ ವೇದಿಕೆಯಲ್ಲಿ ದಿಲ್ಜಿಜ್ ದೋಸಾಂಜ್‌ಗೆ ಕನ್ನಡ ಕಲಿಸಿದ್ದಾರೆ. ಈ ವಿಡಿಯೋಗಳು ಹರಿದಾಡುತ್ತಿದೆ.
ದಿಲ್ಜಿತ್ ದೋಸಾಂಜ್ ಭಾರತದ ಪ್ರಮುಖ ನಗರಗಳಲ್ಲಿ ಮ್ಯೂಸಿಕ್ ಕಾನ್ಸರ್ಟ್ ಆಯೋಜಿಸುತ್ತಿದ್ದಾರೆ. ಹೀಗಾಗಿ ದಿಲ್ಜಿಜ್ ಬೆಂಗಳೂರಿಗೂ ಆಗಮಿಸಿದ್ದರು. ತಮ್ಮ ದಿಲ್ ಲ್ಯೂಮಿನಾಟಿ ಮ್ಯೂಸಿಕ್ ಕಾರ್ನ್ಸರ್ಟ್ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಸಂಜೆ 7.30 ರಿಂದ ರಾತ್ರಿ11 ಗಂಟೆ ವರೆಗೆ ಈ ಕಾರ್ಯಕ್ರಮ ನಡೆದಿತ್ತು. ಹಲವು ಹಾಡುಗಳ ಮೂಲಕ ದಿಲ್ಜಿತ್ ಅಭಿಮಾನಿಗಳನ್ನು ರಂಜಿಸಿದ್ದರು. ಈ ಕಾರ್ಯಕ್ರಮಕ್ಕೆ ಹಾಜರಾದ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಕಾರಣ ಇದೇ ವೇದಿಕೆಯಲ್ಲಿ ನಟಿ ದೀಪಾಕಾ ಪಡುಕೋಣೆ ಕೂಡ ಕಾಣಸಿಕೊಂಡಿದ್ದರು. ದಿಲ್ಜಿತ್ ಹಾಡಿಗೆ ದೀಪಿಕಾ ಕೂಡ ಹೆಜ್ಜೆ ಹಾಕಿದ್ದಾರೆ. ಅಭಿಮಾನಿಗಳ ಕೈಬೀಸಿದ್ದಾರೆ. ಇತ್ತ ಅಭಿಮಾನಿಗಳು ಕೂಡ ದೀಪಿಕಾ ಹಾಗೂ ದಿಲ್ಜಿತ್ ಜೊತೆ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ.
ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಇಡ್ಲಿ,ದೋಸೆ ಸವಿದ ದಿಲ್ಜಿತ್ ದೋಸಾಂಜ್, ವಿಡಿಯೋ!
ತಾಯಿಯಾದ ಬಳಿಕ ದೀಪಿಕಾ ಪಡುಕೋಣೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮೊದಲ ಕಾರ್ಯಕ್ರಮ ಇದಾಗಿದೆ. ದೀಪಿಕಾ ಪಡುಕೋಣೆ ಅದ್ಧೂರಿಯಾಗಿ ದಿಲ್ಜಿಜ್ ದೋಸಾಂಜ್ ಹಾಡುತ್ತಿದ್ದ ವೇದಿಕೆಗೆ ಆಗಮಿಸಿದ್ದಾರೆ. ದೀಪಿಕಾ ಸರ್ಪ್ರೈಸ್ ಎಂಟ್ರಿಕೊಡುತ್ತಿದ್ದಂತೆ ಅಭಿಮಾನಿಗಳು ಶಿಳ್ಶೆ, ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ. ವಿಶೇಷ ಅಂದರೆ ಇದೇ ವೇದಿಕೆಯಲ್ಲಿ ದೀಪಾಕಾ ಪಡುಕೋಣೆ ದಿಲ್ಜಿಜ್ ದೋಸಾಂಜ್‌ಗೆ ಕನ್ನಡ ಕಲಿಸಿದ್ದಾರೆ.
ಹಾಡಿನ ನಡುವೆ ದೀಪಿಕಾ ಪಡುಕೋಣೆ ಕನ್ನಡ ಪಾಠ ಮಾಡಿದ್ದರೆ. ನೆರೆದಿದ್ದ ಅಭಿಮಾನಿಗಳಿಗೆ ಕನ್ನಡದಲ್ಲಿ ಈ ರೀತಿ ಹೇಳುವಂತೆ ದೀಪಿಕಾ ಸೂಚಿಸಿದ್ದಾರೆ. ನಾನು ನಿಮ್ಮನ್ನ ಪ್ರೀತಿಸುತ್ತೀನಿ ಎಂದು ದೀಪಿಕಾ ವೇದಿಕೆಯಲ್ಲಿ ಕನ್ನಡದಲ್ಲಿ ದಿಲ್ಜಿಜ್ ದೋಸಾಂಜ್‌ಗೆ ಹೇಳಿದ್ದಾರೆ. ಇದೇ ಮಾತುಗಳನ್ನು ದಿಲ್ಜಿಜ್ ದೋಸಾಂಜ್ ಹೇಳಿದ್ದಾರೆ. ಈ ವೇಳೆ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಜೋರಾಗಿತ್ತು.
ಆದರೆ ದೀಪೀಕಾ ವೇದಿಕೆಯಲ್ಲಿ ಕನ್ನಡವನ್ನು ತಪ್ಪಾಗಿ ಹೇಳಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ನಾನು ನಿನಿಗೆ ಪ್ರೀತಿಸ್ತೀನಿ ಎಂದು ದೀಪಿಕಾ ಹೇಳಿದ್ದಾರೆ. ಇದು ತಪ್ಪು ವಾಕ್ಯ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಅದ್ಧೂರಿ ಕಾರ್ಯಕ್ರಮದಲ್ಲಿ ಕೆಲ ಶಬ್ದಗಳಾದರೂ ಕನ್ನಡ ಕೇಳಿಸಿದೆ ಅನ್ನೋದೆ ಸಮಾಧಾನ ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿ ಮ್ಯೂಸಿಕ್ ಕಾನ್ಸರ್ಟ್‌ಗಳಲ್ಲಿ ಕನ್ನಡ ಪದ ಕೇಳುವುದೇ ಅಪರೂಪ. ಹೀಗಾಗಿ ಕೆಲವ ಶಬ್ದಗಳು ಕನ್ನಡದಲ್ಲಿ ಉಚ್ಚರಿಸಿದ್ದಾರೆ. ದೀಪಿಕಾ ಪಡುಕೋಣೆ ಕನಿಷ್ಠ ಪ್ರಯತ್ನ ಮಾಡಿದ್ದಾರೆ ಎಂದು ಹಲವರು ಸಮಾಧಾನ ಪಟ್ಟುಕೊಂಡಿದ್ದಾರೆ.
ದೀಪಿಕಾ ಕುರಿತು ದಿಲ್ಜಿತ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಬಾಲಿವುಡ್‌ನಲ್ಲಿ ದೀಪಿಕಾ ತಮ್ಮ ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ್ದಾರೆ. ಇದೀಗ ನಮ್ಮ ಮ್ಯೂಸಿಕ್ ಕಾರ್ಯಕ್ರಮಕ್ಕೆ ಆಗಮಿಸಿರುವುದು ಅತೀವ ಸಂತಸಕ್ಕೆ ಕಾರಣವಾಗಿದೆ. ದೀಪಿಕಾ ಪಡುಕೋಣೆಗೆ ಧನ್ಯವಾದ ಎಂದು ದಿಲ್ಜಿತ್ ದೋಸಾಂಜ್ ಹೇಳಿದ್ದಾರೆ. ದೀಪಿಕಾ ನಮ್ಮ ಕಾರ್ಯಕ್ರಮ ಆಗಮಿಸಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಇಷ್ಟು ಹತ್ತಿರದಿಂದ ನಾನು ದೀಪಿಕಾಳನ್ನು ನೋಡುತ್ತಿದೆ. ಈ ಅಕಾಶ ಮ್ಯೂಸಿಕ್ ಕಾರ್ಯಕ್ರಮದ ಮೂಲಕ ಆಗಿದೆ ಎಂದು ದಿಲ್ಜಿತ್ ದೋಸಾಂಜ್ ಹೇಳಿದ್ದಾರೆ. ಬೆಂಗಳೂರಿನ ಮಾದಾವರದಲ್ಲಿರುವ ನೈಸ್ ಮೈದಾನದಲ್ಲಿನ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.