ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಚಾಲೆಂಜ್‌ಗಳು ಹುಟ್ಟಿಕೊಳ್ಳುತ್ತಿರುತ್ತವೆ. ಒಂದಷ್ಟು ದಿನ ಟ್ರೆಂಡ್ ಆಗುತ್ತಿರುತ್ತವೆ. ಇದೀಗ #DheemeDheemeChallenge ಟ್ರೆಂಡ್ ಆಗ್ತಾ ಇದೆ. ದೀಪಿಕಾ ಪಡುಕೋಣೆ ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಇಂಟರೆಸ್ಟ್ ತೋರಿಸಿದ್ದು ನಟ ಕಾರ್ತಿಕ್ ಆರ್ಯನ್‌ಗೆ Dheeme Dheeme ಸ್ಟೆಪ್ ಹೇಳಿಕೊಡುವಂತೆ ಕೇಳಿದ್ದಾರೆ. 

 

'ಪತಿ ಪತ್ನಿ ಔರ್ ವೋ' ಸಿನಿಮಾದ ಧೀಮ್ ಧೀಮ್ ಹಾಡು ಸಖತ್ ಟ್ರೆಂಡ್ ಆಗ್ತಾಯಿದೆ. ಕಾರ್ತಿಕ್ ಆರ್ಯನ್, ಅನನ್ಯ ಪಾಂಡೆ ಹಾಗೂ ಭೂಮಿ ಪಡ್ನೇಕರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ಧೀಮ್ ಧೀಮ್ ಹಾಡಿಗೆ ಸ್ಟೆಪ್ ಹಾಕಲು ದೀಪಿಕಾ ರೆಡಿಯಾಗಿದ್ದಾರೆ. ಕಾರ್ತಿಕ್ ಆರ್ಯನ್‌ಗೆ ಸ್ಟೆಪ್ ಹೇಳಿಕೊಡಲು ಹೇಳಿದ್ದಾರೆ. 

ಇದಕ್ಕೆ ಕಾರ್ತಿಕ್ ರಿಪ್ಲೈ ಮಾಡಿದ್ದು ಹೀಗೆ.