ಬಾಲಿವುಡ್‌ 'ಗಲ್ಲಿಬಾಯ್‌' ರಣವೀರ್‌ ಸಿಂಗ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಗರಿ | ಇದೇ ಚಿತ್ರಕ್ಕಾಗಿ ಅಲಿಯಾ ಭಟ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ | ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಸದ್ದು ಮಾಡಿದೆ 'ಗಲ್ಲಿಬಾಯ್'

ಮುಂಬೈ (ಫೆ. 18): 65 ನೇ ಫಿಲ್ಮ್‌ಫೇರ್‌ ಅವಾರ್ಡ್‌ನಲ್ಲಿ ಗಲ್ಲಿಬಾಯ್ ಚಿತ್ರಕ್ಕೆ ರಣವೀರ್ ಸಿಂಗ್ ಬೆಸ್ಟ್ ಆfಯಕ್ಟರ್ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ನಂತರ ಪತ್ನಿ ದೀಪಿಕಾ ಪಡುಕೋಣೆ, 'ಬ್ಲಾಕ್ ಲೇಡಿ' ಯನ್ನು ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

View post on Instagram

ದೀಪಿಕಾ 'ಬ್ಲಾಕ್ ಲೇಡಿ'ಯನ್ನು ಹಿಡಿದುಕೊಂಡು ಮಲಗಿ ನಾಚಿಕೊಂಡಂತಿದೆ ಪೋಸ್! 

ಫಿಲ್ಮ್‌ಫೇರ್‌ ಅವಾರ್ಡ್ 2020: ಪ್ರಶಸ್ತಿ ಸ್ವೀಕರಿಸಿದ ಸಿನಿತಾರೆಯರು ಮಿಂಚಿದ್ದು ಹೀಗೆ!

ಈ ಬಾರಿಯ ಫಿಲ್ಮ್‌ ಫೇರ್ ಅವಾರ್ಡ್‌ನಲ್ಲಿ 'ಗಲ್ಲಿಬಾಯ್' ಚಿತ್ರ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ರಣವೀರ್ ಸಿಂಗ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಅಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ನಿರ್ದೇಶಕ ಜೋಯಾ ಅಖ್ತರ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿದೆ. 

ಮುಂಬೈನ ಸ್ಟ್ರೀಟ್ ರ್ಯಾಪರ್‌ಗಳ ಜೀವನಾಧಾರಿತ ಸಿನಿಮಾವಿದು!