ಮುಂಬೈ (ನ. 12): ಕಳೆದ ವಾರ ಬೆಂಗಳೂರಿಗೆ ಆಗಮಿಸಿ ತನ್ನ ಆಪ್ತ ಗೆಳತಿಯ ಮದುವೆ ಸಂಭ್ರಮದಲ್ಲಿ ಭರ್ಜರಿ ಮೋಜು ಮಸ್ತಿ ಮಾಡಿದ್ದ ನಟಿ ದೀಪಿಕಾ ಪಡುಕೋಣೆ, ಇದೀಗ ಅತಿ ಯಾದ ಬಳಲಿಕೆ ಕಾರಣ ಜ್ವರಕ್ಕೆ ತುತ್ತಾಗಿದ್ದಾರೆ.

ಜ್ವರದಿಂದ ನರಳುತ್ತಾ, ಬಾಯಲ್ಲಿ ಥರ್ಮಾಮೀಟರ್ ಇರುವ ಫೋಟೋ ಒಂದನ್ನು ದೀಪಿಕಾ ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಗೆಳತಿಯ ಮದುವೆಯಲ್ಲಿ ಭಾಗಿಯಾಗಲು ಕಳೆದ ವಾರ ಪತಿ ರಣವೀರ್ ಜೊತೆ ದೀಪಿಕಾ ಬೆಂಗಳೂರಿಗೆ ಬಂದಿದ್ದರು.

 

 

ಫ್ರೆಂಡ್ ಮದುವೆಯಲ್ಲಿ ದೀಪಿಕಾ- ರಣವೀರ್ ಕುಣಿದು ಕುಪ್ಪಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. 

 ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಜೀವನಾಧಾರಿತ ಸಿನಿಮಾ "ಚಪಕ್' ಸಿನಿಮಾದಲ್ಲಿ  ದೀಪಿಕಾ ಪಡುಕೋಣೆ ಕಾಣಿಸುತ್ತಿದ್ದಾರೆ.