ಡೇಸ್ ಆಫ್ ಅವರ್ ಲೈವ್ಸ್ ಖ್ಯಾತಿಯ ನಟ ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಬದಕು ಅಂತ್ಯಗೊಳಿಸಿದ್ದಾರೆ. ಅತ್ಯಂತ ಜನಪ್ರಿಯ ನಟ, ಕೇವಲ 39ರ ಹರೆಯದಲ್ಲೇ ದುರಂತ ಅಂತ್ಯ ಕಂಡಿರುವುದು ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ.
ಲಾಸ್ ಎಂಜಲೀಸ್(ಜ.21) ಡೇಸ್ ಆಫ್ ಲೈವ್ಸ್, ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಇಷ್ಟಪಟ್ಟ ಅಭಿಮಾನಿಗಳ ಹೃದಯ ಒಡೆದಿದೆ. 39ರ ಹರೆಯದ ಜನಪ್ರಿಯ ನಟ ಫ್ರಾನ್ಸಿಸ್ಕೋ ಸ್ಯಾನ್ ಮಾರ್ಟಿನ್ ಬದುಕು ಅಂತ್ಯಗೊಳಿಸಿದ್ದಾರೆ. ಲಾಸ್ ಎಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ನಟನ ಮೃತದೇಹ ಪತ್ತೆಯಾಗಿದೆ. ಈ ಘಟನೆಯಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏಕಾಏಕಿ ಫ್ರಾನ್ಸಿಸ್ಕೋ ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ನಟನ ಮೊಬೈಲ್ ಫೋನ್ ಸೇರಿದಂತೆ ಡೈರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫ್ರಾನ್ಸಿಸ್ ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸಿದ್ದಾರೆ. ಸಹ ನಟ ನಟಿಯರು ಫ್ರಾನ್ಸಿಸ್ಕೋ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಫ್ರಾನ್ಸಿಸ್ ತಮ್ಮ ವೈಯುಕ್ತಿಕ ಬದುಕಿನ ಕುರಿತಾಗಲಿ, ವೃತ್ತಿಪರ ಬದುಕಿನ ಕುರಿತಾಗಲಿ ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿರಲಿಲ್ಲ. ಫ್ರಾನ್ಸಿಸ್ ಯಾವ ಸಮಸ್ಯೆ ಇತ್ತು, ಆರ್ಥಿಕವಾಗಿ ಸಮಸ್ಯೆ ಇತ್ತಾ ಅನ್ನೋದು ಗೊತ್ತಿಲ್ಲ ಎಂದು ಜೊತೆಯಾಗಿ ನಟಿಸಿದ್ದ ನಟಿ ಕ್ಯಾಮಿಲಾ ಬನಸ್ ಹೇಳಿದ್ದಾರೆ.
ಹರ್ಯಾಣದಲ್ಲಿ ಭೀಕರ ಅಪಘಾತ, ಒಲಂಪಿಕ್ ಮೆಡಲಿಸ್ಟ್ ಮನು ಭಾಕರ್ ಅಜ್ಜಿ, ಮಾವ ಸಾವು
ಫ್ರಾನ್ಸಿಸ್ಕೋ ಸಾವಿಗೆ ಕಾರಣವೇನು ಅನ್ನೋದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಈ ಸುದ್ದಿ ಹಲವರಿಗೆ ನೋವು ತರಿಸಿದೆ. ಇತ್ತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಥಿಯೇಟರ್ ಆರ್ಟಿಸ್ಟ್ ಆಗಿ ಕರಿಯರ್ ಆರಂಭಿಸಿದ ಫ್ರಾನ್ಸಿಸ್ ಹಂತ ಹಂತವಾಗಿ ಜನಪ್ರಿಯ ನಟನಾಗಿ ಬೆಳೆದಿದ್ದರು. ಮಾಡೆಲಿಂಗ್ ಕರಿಯರ್, ಟಿವಿ ಪ್ರೊಡಕ್ಷನ್‌ಗಳಲ್ಲಿ ಕೆಲಸ ಮಾಡಿದ ಫ್ರಾನ್ಸಿಸ್ಕೋ ಹಲವು ಸೀರಿಸ್ ಮೂಲಕ ಜನಪ್ರಿಯರಾಗಿದ್ದರು.
ನಟನ ಮನೆಯಲ್ಲಿ ಯಾವುದೇ ಪತ್ರಗಳು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನಟನ ಸಾವಿನ ಹಿಂದೆ ಷಡ್ಯಂತ್ರಗಳು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
